Sunday, August 14, 2022

Latest Posts

ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಸರ್ ಎಂದ್ರು ಕಿಚ್ಚ ಸುದೀಪ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪತ್ರಕರ್ತ ರವಿಬೆಳಗೆರೆ ಸಾವಿಗೆ ಪತ್ರಿಕೋದ್ಯಮ,ಸಾಹಿತ್ಯ ಕ್ಷೇತ್ರವಷ್ಟೇ ಅಲ್ಲ ಸಿನಿಮಾರಂಗ ಕೂಡ ಮರುಗಿದೆ.
ರವಿ ಬೆಳಗೆರೆ ಅವರನ್ನು ಕಳೆದುಕೊಂಡಿದ್ದು ನೋವಿನ ಸಂಗತಿ ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.
ರವಿ ಬೆಳಗೆರೆ ಅವರ ಎರಡು ಫೋಟೊ ಪೋಸ್ಟ್ ಮಾಡಿ, ವೇದಿಕೆಯಲ್ಲಿ ನಿಮ್ಮ ಜೊತೆ ಮಾತನಾಡಿದ್ದು ನನ್ನ ನಿಮ್ಮ ಕಡೆಯ ಭೇಟಿ. ಈ ಚಿತ್ರ ನನ್ನ ಮನಸಿನಲ್ಲಿ ಸದಾ ಉಳಿಯುತ್ತದೆ ಇನ್ನೊಂದು ಚಿತ್ರ ರವಿ ಬೆಳಗೆರೆ ಹಾಗೂ ಎಲ್ಲ ಕಂಟೆಸ್ಟೆಂಟ್ಸ್‌ರದ್ದು. ಈ ಚಿತ್ರ ಎಲ್ಲ ಕಂಟೆಸ್ಟೆಂಟ್‌ಗಳ ಮನಸಿನಲ್ಲಿ ಉಳಿಯಲಿದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಸರ್. ನಿಮ್ಮ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss