Thursday, August 11, 2022

Latest Posts

ನಿಮ್ಮ ಅಡುಗೆಯಲ್ಲಿರಲಿ ಶೇಂಗಾ, ಶೇಂಗಾದಿಂದ ಇಷ್ಟೆಲ್ಲಾ ಲಾಭಗಳಿವೆಯೇ?

ಚಿತ್ರಾನ್ನಾ, ಮಂಡಕ್ಕಿ, ಅವಲಕ್ಕಿಗೆ ಶೇಂಗಾ ಇಲ್ಲದಿದ್ದರೆ ರುಚಿಯೇ ಇಲ್ಲ. ಇನ್ನು ಶೇಂಗಾದಾಣಿ, ಖಾರ ಹಚ್ಚಿದ ಶೇಂಗಾ ಅಷ್ಟೇ ರುಚಿಕರ. ಶೇಂಗಾ ಬಳಸುವುದು ನಾಲಿಗೆಗೆ ಎಷ್ಟು ರುಚಿಕರವೋ ಅದಕ್ಕಿಂತ ಆರೋಗ್ಯಕ್ಕೆ ಇನ್ನೂ ಲಾಭಗಳಿವೆ. ನಿತ್ಯದ ಆಹಾರದಲ್ಲಿ ಶೇಂಗಾ ಬಳಸುವುದರಿಂದ ಏನೆನೆಲ್ಲಾ ಲಾಭಗಳಿವೆ ನೋಡಿ..

  • ಹೃದಯಕ್ಕೆ ಸ್ನೇಹಿತ: ಹೃದಯ ಆರೋಗ್ಯಕರವಾಗಿರಲು ಬೇಕಾದ ಹೆಲ್ತಿ ಫ್ಯಾಕ್ ನಮಗೆ ಶೇಂಗಾದಿಂದ ದೊರೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್‌ನ್ನು ಹೊಡೆದೂಡಿಸಿ ಒಳ್ಳೆ ಕೊಲೆಸ್ಟ್ರಾಲ್‌ನ್ನಾಗಿ ಮಾಡುವ ಕೆಲಸ ಶೇಂಗಾ ಮಾಡುತ್ತದೆ.
  • ಮೆದುಳಿಗೆ ಒಳ್ಳೆಯದು: ಶೇಂಗಾದಲ್ಲಿರುವ ವಿಟಮಿನ್ ಬಿ೩ ನಮ್ಮ ಮೆದುಳಿಗೆ ಒಳ್ಳೆಯದು. ಒಳ್ಲೆಯ ನೆನಪಿನ ಶಕ್ತಿಗೆ ಹಾಗೂ ಮಿದುಳು ಚುರುಕಾಗಿ ಕೆಲಸ ಮಾಡಲು ಶೇಂಗಾ ತಿನ್ನಬೇಕು. ಮೆದುಳಿಗೆ ರಕ್ತ ಸಂಚಲನ ಚೆನ್ನಾಗಿ ಆಗುವಂತೆ ಕೂಡ ಶೇಂಗಾದಲ್ಲಿರುವ ಅಂಶ ನೋಡಿಕೊಳ್ಳುತ್ತದೆ.
  • ತೂಕ ಇಳಿಕೆ: ಶೇಂಗಾದಲ್ಲಿರುವ ಫೈಬರ್, ಫ್ಯಾಟ್ ಹಾಗೂ ಪ್ರೋಟೀನ್ ಹೆಚ್ಚು ಕಾಲ ಹಸಿವಾಗದಂತೆ ನೋಡಿಕೊಳ್ಳುತ್ತವೆ. ಆಗ ಹೆಚ್ಚು ತಿನ್ನುವ ಬಯಕೆ ಆಗುವುದಿಲ್ಲ ಇದರಿಂದ ತೂಕವೂ ಇಳಿಯುತ್ತದೆ.
  • ಒತ್ತಡ ದೂರ: ಡಿಪ್ರೆಶನ್ ಸಮಸ್ಯೆ ಬರುವುದು ಸ್ಟ್ರೆಸ್ ಹಾಗೂ ಆಂಕ್ಸೈಟಿಯಿಂದ ಇದೆರಡನ್ನೂ ದೂರ ಇರಲು ಶೇಂಗಾ ಸಹಕರಿಸುತ್ತದೆ. ಬ್ರೇನ್‌ನಲ್ಲಿ ಸೆರೊಟೊನಿನ್ ಎಂಬ ಅಂಶ ಇದ್ದು, ಇದು ಮೂಡ್ ರೆಗ್ಯುಲೇಟ್ ಮಾಡುತ್ತದೆ. ಈ ಅಂಶವನ್ನು ಕಾಮ್ ಆಗಿರಲು ಶೇಂಗಾ ಸಹಕರಿಸುತ್ತದೆ.
  • ಮದುಮೇಹಿಗಳಿಗೂ ಒಳ್ಳೆಯದು: ಮೆಗ್ನೀಶಿಯಮ್ ಹಾಗೂ ಮಿನರಲ್ ಶೇಂಗಾದಲ್ಲಿದ್ದು, ಇದರಿಂದ ಮದುಮೇಹಿಗಳಿಗೆ ಸಹಾಯವಾಗಲಿದೆ. ಮದುಮೇಹಿಗಳು ಬೇರೆ ಏನೂ ತಿನ್ನಲಾಗದಿದ್ದರೂ ಶೇಂಗಾದಿಂದ ಮಾಡಿದ ಸ್ನಾಕ್ ತಿನ್ನಬಹುದು.
  • ಕೂದಲು, ಚರ್ಮಕ್ಕೂ ಹಿತ: ಶೇಂಗಾದಲ್ಲಿರುವ ಮೊನೊಸಾಟ್ಯುರೇಟೆಡ್ ಕೊಬ್ಬು ಹಾಗೂ ವಿಟಮಿನ್‌ಗಳು ಕೂದಲು ಹಾಗೂ ಚರ್ಮಕ್ಕೆ ಹಿತಕರವಾಗಿದೆ. ವಿಟಮಿನ್ ಸಿ ಹಾಗೂ ಇ ಎರಡೂ ಇರುವುದರಿಂದ ಕೂದಲು ಚರ್ಮ ಹೊಳಪಾಗುತ್ತದೆ. ಕೂದಲ ಬೆಳವಣಿಗೆಗ ಸಹಕಾರಿಯಾದ ವಿಟಮಿನ್ ಬಿ ಕೂಡ ಇದರಲ್ಲಿದ್ದು, ಕೂದಲು ಚೆನ್ನಾಗಿ ಬೆಳೆಯುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss