ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಆರೋಗ್ಯಕ್ಕಾಗಿ ರಕ್ತದಾನ ಮಾಡಿ, ರಕ್ತದಾನದಿಂದ ಕ್ಯಾನ್ಸರ್ ತಡೆಗಟ್ಟಬಹುದು ಗೊತ್ತಾ?

ಕೆಲವರಿಗೆ ತಾವು ರಕ್ತದಾನ ಮಾಡಿದರೆ ಅದನ್ನು ಬಳಕೆ ಮಾಡುವ ರೀತಿಚೆನ್ನಾಗಿರುವುದಿಲ್ಲ ಎನಿಸುತ್ತದೆ. ಇನ್ನು ರಕ್ತದಾನ ಮಾಡಿದರೆ ನಾವು ವೀಕ್ ಆಗುತ್ತೀವಿ ಎಂಬ ಭಾವನೆಯೂ ಇರುತ್ತದೆ. ಆದರೆ ರಕ್ತದಾನದಿಂದ ಇನ್ನೊಬ್ಬರಿಗೆ ಸಹಾಯ ಅಷ್ಟೆ ಅಲ್ಲ, ನಿಮ್ಮ ದೇಹಕ್ಕೂ ನಿಮ್ಮ ಆರೋಗ್ಯಕ್ಕೂ ನೀವು ಸಹಾಯ ಮಾಡಿಕೊಂಡಂತೆ. ರಕ್ತದಾನ ಮಾಡಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ? ಇದರಿಂದ ನಿಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ನೋಡಿ..
ಕೆಟ್ಟ ಕಬ್ಬಿಣ ಹೊರಹಾಕುತ್ತದೆ; ದೇಹದಲ್ಲಿ ಕಬ್ಬಿಣಾಂಶ ಅವಶ್ಯ. ಆದರೆ ಅತಿಯಾದರೆ ಯಾವುದೂ ಹಿತವಲ್ಲ. ಈ ರೀತಿ ಹೆಚ್ಚು ಕಬ್ಬಿಣಾಂಶ ನಮ್ಮ ಜೀವನದ ಮುಂದಿನ ಹಂತಗಳಲ್ಲಿ ತನ್ನ ಲಕ್ಷಣ ತೋರಿಸುತ್ತದೆ. ಹಾಗಾಗಿ ರಕ್ತದಾನ ಮಾಡಿದಾಗ ಈ ಕಬ್ಬಿಣಾಂಶ ಹೊರಹೋಗುತ್ತದೆ.
ಆರೋಗ್ಯಕರ ಹೃದಯ: ಬ್ಲಡ್ ಸೆಲ್ಸ್‌ನಲ್ಲಿ ಐರನ್ ಕಡಿಮೆಯಾದಂತೆ, ಹಾರ್ಟ್ ಅಟ್ಯಾಕ್ ಆಗುವ ರಿಸ್ಕ್ ಕೂಡ ಕಡಿಮೆಯಾಗುತ್ತದೆ. ಸ್ಟ್ರೋಕ್ಸ್ ಕೂಡ ಆಗುವ ಸಂಭವವನ್ನು ಇದು ಕಡಿಮೆ ಮಾಡುತ್ತದೆ. ರಕ್ತದಾನ ಮಾಡುವುರಿಂದ ಹಾರ್ಟ್ ಅಟ್ಯಾಕ್ ಆಗುವ ಸಂಭವ ಕಡಿತಗೊಳಿಸಬಹುದಾಗಿದೆ.
ಕ್ಯಾನ್ಸರ್ ತಡೆಗಟ್ಟಿ:ದೇಹದಲ್ಲಿ ಹೆಚ್ಚಿರುವ ಐರನ್ ಕಂಟೆಂಟ್‌ನಿಂದ ದೇಹದಲ್ಲಿ ಕ್ಯಾನ್ಸರ್ ಅಂಶ ಉತ್ಪತ್ತಿಯಾಗುವ ಚಾನ್ಸ್ ಕೂಡ ಇದೆ. ಈ ರಿಸ್ಕ್ ಬೇಡ ಎಂದರೆ ರಕ್ತದಾನ ಮಾಡಿ. ಲಂಗ್,ಲಿವರ್,ಕೊಲೋನ್ ಹಾಗೂ ಥ್ರೋಟ್ ಕ್ಯಾನ್ಸರ್‌ನಿಂದ ದೂರ ಇರಲು ರಕ್ತದಾನ ಕೂಡ ಪ್ರಮುಖ ಕಾರಣವೇ ಹೌದು.
ತೂಕ ಇಳಿಕೆ: ಕ್ಯಾಲೊರಿ ಬರ್ನ್ ಮಾಡಲು ಎಷ್ಟೆಲ್ಲಾ ಕಷ್ಟ ಪಡುತ್ತೀರಿ. ಆದರೆ ರಕ್ತದಾನ ಮಾಡುವುದರಿಂದ ಕ್ಯಾಲೋರಿ ಬರ್ನ್ ಮಾಡಬಹುದಾಗಿದೆ. ಕೆಲವರು ರಕ್ತ ಕೊಟ್ಟರೆ ದಪ್ಪ ಆಗುತ್ತಾರೆ ಎಂದು ನಂಬುತ್ತಾರೆ ಆದರೆ ಹಾಗಾಗುವುದಿಲ್ಲ. ಇದರಿಂದ ಕ್ಯಾಲೊರಿ ಬರ್ನ್ ಆಗುತ್ತದೆ.
ರೋಗ ಪತ್ತೆ: ಕೆಲವು ರೋಗಗಳು ಯಾವ ಲಕ್ಷಣಗಳನ್ನೂ ತೋರುವುದಿಲ್ಲ. ಸುಮ್ಮನೆ ನಾವು ಬ್ಲಡ್ ಟೆಸ್ಟ್ ಮಾಡಿಸುವುದಿಲ್ಲ. ಏನಾದರೂ ಲಕ್ಷಣ ಕಂಡು ನಾವು ಬ್ಲಡ್ ಟೆಸ್ಟ್ ಮಾಡಿಸುವ ಹೊತ್ತಿಗೆ ಇದು ವಾಸಿಯಾಗದ ರೋಗವಾಗಿರುತ್ತದೆ ಆದ್ದರಿಂದ ಆಗಾಗ ರಕ್ತದಾನ ಮಾಡಿದರೆ ನಮ್ಮ ರೋಗಗಳು ಕಾಣುತ್ತದೆ.
ಗೌರವ ಹೆಚ್ಚುತ್ತದೆ: ಬೇರೆಯವರು ನಿಮ್ಮನ್ನು ಗೌರವಿಸುವುದು ಬೇಡ. ನಿಮ್ಮನ್ನು ನೀವು ಗೌರವಿಸಲು ರಕ್ತದಾನ ಮಾಡಿದರೆ ಸಾಕು. ಇನ್ನೊಬ್ಬರಿಗೆ ಸಹಾಯ ಮಾಡುತ್ತಿದ್ದೀವಿ ಎನ್ನುವ ಮನೋಭಾವನೆ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ನೀಡುತ್ತದೆ. ಇದಕ್ಕಿಂತ ಹೆಮ್ಮೆ ಇನ್ನೇನಿದೆ ಅಲ್ಲವಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss