ಬಾಳೆ ಕಾಯಿಯಿಂದ ಬಹಳಷ್ಟು ಅಡುಗೆಗಳನ್ನು ಮಾಡಬಹುದು. ಪಲ್ಯ, ಸಾಂಬಾರ್, ತಂಬುಳಿ, ಕಡುಬು ಹೀಗೆ. ಆದರೆ ಬಾಳೆಕಾಯಿ ಫ್ರೈ ಎಲ್ಲಕ್ಕಿಂತ ಬಹಳ ರುಚಿಯಾಗುತ್ತದೆ. ಬಹಳ ಸಿಂಪಲ್ ಆಗಿ ರುಚಿ ಯಾಗಿ ಮಾಡುವಂತಹ ಫ್ರೈ ಇದು. ಹೀಗೆ ಮಾಡಿ…
ಬೇಕಾಗುವ ಸಾಮಗ್ರಿ:
ಬಾಳೆಕಾಯಿ 2
ಖಾರದ ಪುಡಿ 2 ಚಮಚ
ಲಿಂಬು ರಸ 1 ಚಮಚ
ಉಪ್ಪು ಚಿಟಿಕೆ
ಎಣ್ಣೆ 3 ಚಮಚ
ಮಾಡುವ ವಿಧಾನ:
ದೊಡ್ಡ ಗಾತ್ರದ ಎರಡು ಬಾಳೆಕಾಯಿ ತೆಗೆದುಕೊಳ್ಳಿ. ನಂತರ ಅವುಗಳನ್ನು ತೆಳ್ಳನೇಯ ಗಾಲಿ ರೀತಿ ಕಟ್ ಮಾಡಿಕೊಳ್ಳಿ. ಆಮೇಲೆ ಎಣ್ಣೆಯನ್ನು ಹಾಕಿ ಆ ಗಾಲಿಗಳನ್ನು 15 ನಿಮಿಷ ಫ್ರೈ ಮಾಡಿ. ಆಮೇಲೆ ಅದಕ್ಕೆ ಖಾರದಪುಡಿ, ಉಪ್ಪು, ಲಿಂಬು ರಸ ಹಾಕಿದರೆ ಬಾಳೆಕಾಯಿ ಫ್ರೈ ರೆಡಿ…