Sunday, August 14, 2022

Latest Posts

ನಿಮ್ಮ ನಾಗರಪಂಚಮಿಗೆ ಜೊತೆಯಾಗಲಿ ಹಲಸಿನಹಣ್ಣಿನ ಕೊಟ್ಟೆ ಕಡುಬು

ಹಲಸಿನ ಹಣ್ಣಿನ ಕಡಬು ತುಂಬಾ ಜನಕ್ಕೆ ಗೊತ್ತಿಲ್ಲ. ಇದನ್ನು ಮಲೆನಾಡಿನ ಕಡೆ ಮಾಡುತ್ತಾರೆ. ಏಪ್ರಿಲ್, ಮೇ, ಜೂನ್ ತಿಂಗಳಿನಲ್ಲಿ ಈ ಕಡಬನ್ನು ಹೆಚ್ಚಾಗಿ ಮಾಡುತ್ತಾರೆ. ಬಿಸಿಬಿಸಿ ಕಡುಬಿಗೆ ತುಪ್ಪ ಹಚ್ಚಿಕೊಂಡು ತಿಂದರೆ ಅದರ ರುಚಿಯೇ ಬೇರೆ.

ಬೇಕಾಗುವ ಪದಾರ್ಥ:
ಅಕ್ಕಿ ಕಡಿ: (ಅಕ್ಕಿಯನ್ನು ಮಿಕ್ಸಿಯಲ್ಲಿ ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು)
ಏಲಕ್ಕಿ
ಉಪ್ಪು
ಎಣ್ಣೆ
ಬೆಲ್ಲ
ಕಾಯಿತುರಿ
ಹಲಸಿನ ಹಣ್ಣಿನ ರಸ( ಹಲಸಿನ ಹಣ್ಣಿನ ತೊಳೆಯನ್ನು ಬೀಸಿಕೊಂಡು ಅದರ ರಸ ತೆಗೆದುಕೊಳ್ಳಬೇಕು)

ಮಾಡುವ ವಿಧಾನ:
ಹಲಸಿನ ಹಣ್ಣಿನ ತೊಳೆಯನ್ನು ಬೀಸಿಕೊಂಡು ಅದರ ಗುಳ( ದಪ್ಪದ ರಸ)ವನ್ನು ತೆಗೆದುಕೊಳ್ಳಬೇಕು. ಒಂದು ಗಂಟೆ ನೆನೆಸಿಟ್ಟ ಅಕ್ಕಿ ಕಡಿಯನ್ನು ಹಲಸಿನ ಗುಳದೊಂದಿಗೆ ಸೇರಿಸಬೇಕು. ಅದು ಪಾಯಸದ ಹದದಲ್ಲಿ ಇರಬೇಕು. ಹಲಸಿನ ಹಣ್ಣಿನ ರಸಕ್ಕಿಂತ ಅರ್ಧದಷ್ಟು ಹೆಚ್ಚಿರಬೇಕು ಅಕ್ಕಿ ಕಡಿ. ರುಚಿಗೆ ತಕ್ಕಷ್ಟು ಬೆಲ್ಲ, ಚಿಟಿಕೆ ಉಪ್ಪು, ಏಲಕ್ಕಿ, ಕಾಯಿತುರಿ, ಎಣ್ಣೆ ಹಾಕಿ ಕಲಸಬೇಕು. ನಂತರ ಇದನ್ನು ಬಾಳೆ ಎಲೆಯ ಕೊಟ್ಟೆ ಮಾಡಿ ಅದರಲ್ಲಿ ಈ ಮಿಶ್ರಣ ಹಾಕಿ ಉಗಿಯಲ್ಲಿಯೂ ಬೇಯಿಸಬಹುದು. ಇಲ್ಲವಾದಲ್ಲಿ ಇಡ್ಲಿ ಪಾತ್ರೆಯಲ್ಲಿಯೂ ಇದನ್ನು ಬೇಯಿಸಬಹುದು. ಬಿಸಿ ಬಿಸಿ ಕಡುಬನ್ನು ತುಪ್ಪದೊಂದಿಗೆ ಸೇವಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss