Wednesday, August 10, 2022

Latest Posts

ನಿಮ್ಮ ಪ್ರಿಯತಮ ಖುಷಿಯಿಂದ ಇರಬೇಕಾ? ಹಾಗಿದ್ದರೆ ಆಗಾಗ ಈ ಮಾತುಗಳನ್ನ ಅವನಿಗೆ ಹೇಳುತ್ತಿರಿ…! ಈ ಹತ್ತು ಟಿಪ್ಸ್ ಫಾಲೋ ಮಾಡಿ…

ಯಾರಿಗೆ ತಾನೆ ಇಷ್ಟ ಇರುವುದಿಲ್ಲ ಹೇಳಿ?!! ಪ್ರತಿಯೊಬ್ಬರಿಗೂ ತನ್ನ ಪ್ರಿಯತಮ ಖುಷಿಯಿಂದ ಇರಲಿ ಎಂಬ ಆಸೆ ಇದ್ದೆ ಇರುತ್ತದೆ. ಆದರೆ ಅವನನ್ನು ಹೇಗೆ ಖುಷಿಯಿಂದ ಇರಿಸಿಕೊಳ್ಳುವುದು ಎಂಬುದು ಪ್ರಿಯತಮೆಗೆ ತಿಳಿದಿರುವುದಿಲ್ಲ. ಇನ್ನು ಮುಂದೆ ಈ ಚಿಂತೆ ಬಿಡಿ. ಇಲ್ಲಿದೆ ಪ್ರಿಯತಮನ ಖುಷಿಗಾಗಿ ಟಿಪ್ಸ್. ಇದನ್ನು ಫಾಲೋ ಮಾಡಿ. ಆಗಾಗ ನಿಮ್ಮ ಪ್ರಿಯತಮನಿಗೆ ಈ ಮಾತುಗಳನ್ನು ಹೇಳಿ ಖುಷಿ ಪಡಿಸಿ.

  • ನೀನು ನನ್ನ ಹೃದಯದ ರಾಜಕುಮಾರ ಎಂದು ಹೇಳಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ. ನಿನ್ನಂತ ಹುಡುಗನನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ.
  • ನನ್ನನ್ನು ಅದೆಷ್ಟು ಪ್ರೀತಿ ಮಾಡ್ತೀಯಾ ಅಲ್ವಾ!! ಯಾವಾಗಲೂ ನಾನು ಖುಷಿಯಿಂದ ಇರುವ ಹಾಗೆ ನೋಡಿಕೊಳ್ಳುತ್ತೀಯಾ.. ಥ್ಯಾಂಕ್ಯೂ ಸೋ ಮಚ್!!!
  • ನೀನು ನನ್ನ ಜೊತೆ ಇರುವಾಗ ನನಗೇಕೆ ಭಯ? ನೀನು ನನ್ನ ಜೊತೆ ಇರೋತನಕ ನನ್ನನ್ನು ಯಾರೂ ಏನೂ ಮಾಡೋಕಾಗಲ್ಲ. ನೀನು ನನ್ನ ದೊಡ್ಡ ಶಕ್ತಿ..
  • ನನ್ನ ಫ್ರೆಂಡ್ಸ್ ಎಲ್ಲರೂ ಹೊಟ್ಟೆಕಿಚ್ಚು ಪಡತಾರೆ..! ನೀನು ಎಷ್ಟ ಲಕ್ಕಿ, ಎಂಥ ಹುಡಗ ಸಿಕ್ಕಿದಾನೆ ಅಂತಾರೆ. ನಿಜವಾಗಲೂ ನಾನು ಲಕ್ಕಿ ಕಣೋ..
  • ನೀನು ಪ್ರೀತಿಸುವುದಕ್ಕಿಂತ ಹತ್ತು ಪಟ್ಟು ಹೆಚ್ಚು ನಾನು ನಿನ್ನನ್ನು ಪ್ರೀತಿಸುತ್ತೇನೆ.
  • ನಿನ್ನಂತ ಒಳ್ಳೆ ಮಗನನ್ನು ಹೆತ್ತ ನಿಮ್ಮ ತಂದೆ ತಾಯಿಗೆ ನಾನು ಯಾವುತ್ತೂ ಋಣಿಯಾಗಿರುತ್ತೇನೆ. ನಿನ್ನ ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
  • ನಾನು ಏನ್ ಕೇಳಿದ್ರು ಕೊಡಸ್ತೀಯಲ್ಲ ನಿಜಕ್ಕೂ ನೀನು ಗ್ರೇಟ್ ಕಣೋ!!
  • ನಿನ್ನ ಡ್ರೆಸ್ ಸೆನ್ಸ್, ನಿನ್ನ ಲೈಫ್ ಸ್ಟೈಲ್ ಎಲ್ಲವೂ ನನಗೆ ಬಹಳ ಇಷ್ಟ.
  • ನಾನು ಕೋಪ ಮಾಡಿಕೊಂಡಾಗ ನೀನು ಮುದ್ದಾಟ ಮಾಡಿ ನಗಸ್ತಿಯಲ್ಲ ಅದು ನನಗೆ ಬಹಳ ಇಷ್ಟ. ನೀನು ಮುದ್ದು ಮಾಡಲಿ ಅಂತಾನೇ ಕೋಪ ಮಾಡಿಕೊಳ್ಳೋದು ನಾನು.
  • ನೀನೊಬ್ಬ ಜಂಟಲ್ ಮ್ಯಾನ್ ಎನ್ನೊದ್ರಲ್ಲಿ ಯಾವುದೇ ಸಂಶಯವಿಲ್ಲ. ಜೀವನ ಪೂರ್ತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.

-ಕಾವ್ಯಾ ಜಕ್ಕೊಳ್ಳಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss