ಈಗಿನ ಮಕ್ಕಳು ಮೊಬೈಲ್, ಟ್ಯಾಬ್ ಗಳಿಗೆ ಅಡಿಕ್ಟ್ ಆಗಿರುತ್ತಾರೆ. ಆದರೆ ಇಂತಗ ಮಕ್ಕಳನ್ನು ಮೊಬೈಲ್ ನಿಂದ ದೂರ ಮಾಡುವುದು ಹರಸಾಹಸವೇ ಸರಿ. ಮಕ್ಕಳು ಮೊಬೈಲ್ ನಲ್ಲಿ ಆಟ ಆಡೋದು, ವಿಡಿಯೋ ನೋಡುವುದರಿಂದ ಎಷ್ಟು ಅಪ್ಗ್ರೇಡ್ ಆಗುತ್ತಾರೋ ಅಷ್ಟೇ ತೊಂದರೆಗೊಳಗಾಗುತ್ತಾರೆ.
ಆದರೆ ಮಕ್ಕಳಿಗೆ ಇದರ ಅರಿವು ಮೂಡಿಸಿ ಮೊಬೈಲ್ ಬಳಕೆ ಕಡಿಮೆ ಮಾಡುವುದರ ಕುರಿತು ಇಲ್ಲಿದೆ ಸಿಂಪಲ್ ಟಿಪ್ಸ್
ಬೇರೆ ಹವ್ಯಾಸ ನೀಡಿ: ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಗಳ ಜೊತೆಗೆ ಮೊಬೈಲ್ ನ ಹೆಚ್ಚು ಬಳಕೆಯ ಬದಲು ಅವರಿಗೆ ಮತ್ತಷ್ಟು ಚಟುವಟಿಕೆಗಳನ್ನು ನೀವೆ ಮಾಡಿಸಿ. ಅದು ಮನೆ ಕೆಲಸವಾಗಲಿ ಅಥವಾ ಕ್ರಿಯೇಟಿವ್ ವರ್ಕ್ ಆಗಬಹುದು.
ನೋ ಫೋನ್: ಮಕ್ಕಳು ಮೊಬೈಲ್ ಗೆ ಹೆಚ್ಚು ಅಡಿಕ್ಟ್ ಆಗದಂತೆ ನೋಡಿಕೊಳ್ಳಲು ಅವರಿಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಿ ಮತ್ತು ‘ಮೊಬೈಲ್ ಉಪಯೋಗಿಸಬೇಡ’ ಎಂದು ಆಗಾಗ ಹೇಳುತ್ತಿರಿ.
ಮೊಬೈಲ್ ಯಾಕೆ ಬೇಡ ಹೇಳಿ: ಮೊಬೈಲ್ ನನ್ನು ಅತಿಯಾಗಿ ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಅರಿವಾಗುವ ಹಾಗೆ ತಿಳಿಸಿ.
ಮೊಬೈಲ್ ಲಾಕ್ ಮಾಡಿ: ನಿಮ್ಮ ಮೊಬೈಲ್ ಗಳ ಪಾಸ್ ವರ್ಡ್ ಗಳನ್ನು ಮಕ್ಕಳಿಗೆ ಹೇಳಬೇಡಿ.
ನೀವೂ ಕಡಿಮೆ ಬಳಸಿ: ಮಕ್ಕಳ ಎದುರು ನೀವು ಹೆಚ್ಚು ಮೊಬೈಲ್ ಬಳಸುವುದು ಅವರಿಗೂ ಪ್ರೇರಣೆ ನೀಡಿದಂತಾಗುತ್ತದೆ ಹಾಗಾಗಿ ನೀವು ಮಕ್ಕಳ ಎದುರು ಅನಗತ್ಯ ಮೊಬೈಲ್ ಬಳಸಬೇಡಿ.