Friday, August 12, 2022

Latest Posts

ನಿಮ್ಮ ಮಕ್ಕಳು ಸುಳ್ಳು ಹೇಳುತ್ತಿದ್ದಾರಾ? ಮಕ್ಕಳೇಕೆ ಸುಳ್ಳು ಹೇಳುತ್ತಾರೆ? ಇವರನ್ನು ತಿದ್ದುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ

ಅಮ್ಮ ಶಾಲೆಯಿಂದ ಬಂದ ತಕ್ಷಣ ನಮ್ಮ ಟಿಫನ್ ಚೆಕ್ ಮಾಡಿ ಎಲ್ಲ ತಿಂದೆಯಾ? ನೀರು ಕುಡಿದೆಯಾ ಎಂದು ಕೇಳುತ್ತಿದ್ದಾಗ ನಾವೇ ಎಲ್ಲ ಕುಡಿದಿದ್ದೀವಿ ಎನ್ನುತ್ತಿದ್ದೆವು ಆದರೆ ದಾರಿಯಲ್ಲಿ ಬರುತ್ತಾ ರಸ್ತೆ ತುಂಬ ನೀರನ್ನು ಚೆಲ್ಲಿಕೊಂಡು ಬರುತ್ತಿದ್ದೆವು. ಇನ್ನು ಊಟವೂ ಅಷ್ಟೆ ತಿಂದದ್ದಕ್ಕಿಂತ ಸ್ನೇಹಿತರ ಜೊತೆ ಶೇರ್ ಮಾಡಿದ್ದೆ ಹೆಚ್ಚು, ಇಂಥ ಚಿಕ್ಕ ಪುಟ್ಟ ಸುಳ್ಳುಗಳು ಮುಂದೆ ದೊಡ್ಡದಾಗುತ್ತವೆ. ಟೀಪಾಯಿ ಮೇಲೆ ಇಟ್ಟಿದ್ದ ಹತ್ತು ರೂಪಾಯಿ ಕಾಣೆಯಾಗುತ್ತದೆ. ತಾವು ತೆಗೆದುಕೊಂಡಿದ್ದರೂ ನಿಮ್ಮ ಮಗು ಅದನ್ನು ಒಪ್ಪಿಕೊಳ್ಳದೆ ಸುಳ್ಳು ಹೇಳುತ್ತದೆ. ಸುಳ್ಳು ಹೇಳಿ ಶಾಲೆ ತಪ್ಪಿಸಲು ಯತ್ನಿಸುತ್ತಾರೆ. ಹೀಗೆ ಸುಳ್ಳು ಹೇಳುವ ಅಭ್ಯಾಸ ಬೆಳೆಯುತ್ತಲೇ ಹೋಗುತ್ತದೆ. ಮಕ್ಕಳು ಏಕೆ ಸುಳ್ಳು ಹೇಳುತ್ತಾರೆ? ಮಕ್ಕಳನ್ನು ತಿದ್ದುವುದು ಹೇಗೆ ಇಲ್ಲಿ ನೋಡಿ..
ಮಕ್ಕಳೇಕೆ ಸುಳ್ಳು ಹೇಳುತ್ತಾರೆ?

  • ಮಾಡಿರುವ ತಪ್ಪು ಮುಚ್ಚಿ ಹಾಕಿ, ತೊಂದರೆಯಿಂದ ಎಸ್ಕೇಪ್ ಆಗಲು.
  • ಅವರ ಕಥೆಯನ್ನೇ ಎಕ್ಸೈಟಿಂಗ್ ಮಾಡಿ ಹೇಳಲು
  • ಸುಳ್ಳು ಹೇಳಿದಾಗ ನಾವು ಹೇಗೆ ರೆಸ್ಪಾನಸ್ ಮಾಡುತ್ತೀವಿ ಎಂದು ನೋಡಲು
  • ತಮ್ಮ ಕಡೆ ಗಮನ ಬರಲಿ ಎಂದು ರಿಯಾಲಿಟಿಗೆ ನಿಲುಕದ ಸುಳ್ಳು ಹೇಳುವುದು.
  • ಈ ಹಿಂದೆ ಸುಳ್ಳು ಹೇಳಿದವರಿಗೆ ನೀವು ಬೈದದ್ದು ಅಥವಾ ಹೊಡೆದದ್ದನ್ನು ನೋಡಿರಬಹುದು.
  • ಬೇಕಾಗಿರುವುದನ್ನು ಪಡೆದುಕೊಳ್ಳಲು, ಪೆನ್ಸಿಲ್ ಇದ್ದರೂ ಬೇರೆ ಪೆನ್ಸಿಲ್‌ಗಾಗಿ, ಹಳೇ ಪೆನ್ಸಿಲ್ ಕಳೆದು ಹೋಯ್ತು ಎನ್ನುವುದು.
  • ತಂದೆ ತಾಯಿಗೆ ನೋವಾಗಬಹುದು ಎಂದು, ಕೆಲವು ಮಕ್ಕಳು ಅಪ್ಪ ಅಥವಾ ಅಮ್ಮನಿಗೆ ನೋವಾಗಬಹುದು ಎಂದು ಸುಳ್ಳು ಹೇಳುತ್ತಾರೆ.

    ಸುಳ್ಳು ಹೇಳುವ ಅಭ್ಯಾಸ ತಪ್ಪಿಸುವುದು ಹೇಗೆ?

  • ಸತ್ಯ ಹೇಳಿದರೆ ಏನಾಗುತ್ತದೆ? : ಮಕ್ಕಳೇನೋ ತಪ್ಪು ಮಾಡಿರುತ್ತಾರೆ, ಅದನ್ನು ಮುಚ್ಚಿ ಹಾಕಲು ಸುಳ್ಳನ್ನೂ ಹೇಳಿದ್ದಾರೆ. ಆದರೆ ಅವರಿಗೆ ಅದರ ಅರಿವಿಲ್ಲ. ನಿಜ ಹೇಳಿದರೆ ಅಮ್ಮನಿಗೆ ಎಷ್ಟು ಖುಷಿ ಆಗುತ್ತದೆ. ಇದು ಒಳ್ಳೆಯ ಮಕ್ಕಳ ಲಕ್ಷಣ ಎಂದು ತಿಳಿ ಹೇಳಿ.
  • ಎಲ್ಲದಕ್ಕೂ ಉದಾಹರಣೆ: ಮಕ್ಕಳು ಸುಳ್ಳು ಹೇಳಿದಾಗ ಉದಾಹರಣೆ ಕೊಟ್ಟು ಅವರಿಗೆ ಅರ್ಥ ಮಾಡಿಸಿ. ಅಪ್ಪ ಅಮ್ಮನಿಗೆ ಸುಳ್ಳು ಹೇಳಿದರೆ ಅಮ್ಮನಿಗೆ ಎಷ್ಟು ಬೇಸರ ಆಗುತ್ತದೆ? ಎಂದು ಕೇಳಿ..
    ಸುಳ್ಳಿಲ್ಲದೆ ಪರಿಸ್ಥಿತಿ ನಿಭಾಯಿಸಿ: ಸುಳ್ಳು ಹೇಳಿದರೆ ಏನಾಗುತ್ತದೆ, ನಿಜ ಹೇಳಿದರೆ ಏನಾಗುತ್ತದೆ ಎಂದು ಮುಂದಿನ ಸ್ಟೆಪ್ಸ್ ಹೇಳಿ.. ಸುಳ್ಳು ಹೇಳದೆಯೂ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿ ಹೇಳಿ.
  • ಹೊಡೆಯುವುದು ಬೇಡ: ಹಳೇ ಕಾಲದ ಮಕ್ಕಳಿಗೆ ಸುಳ್ಳು ಹೇಳಿದಾಗ ಹೊಡೆದರೆ ತಕ್ಷಣ ತಿದ್ದಿಕೊಳ್ಳುತ್ತಿದ್ದರು. ಆದರೆ ಈಗಿನ ಮಕ್ಕಳು ಸೂಕ್ಷ್ಮ. ಹೊಡದರೆ ನೊಂದುಕೊಳ್ಳುತ್ತಾರೆ. ಸಿಕ್ಕಿಹಾಕಿಕೊಳ್ಳದಂಥ ಸುಳ್ಳು ಹೇಳಲು ಆರಂಭಿಸುತ್ತಾರೆ.
  • ಹೊಗಳುವುದು ಆರಂಭಿಸಿ: ಮಗು ಸುಳ್ಳು ಹೇಳುವ ಬದಲು ಸತ್ಯ ಹೇಳಿದಾಗ ಅದನ್ನು ಹೊಗಳಿ. ಉದಾಹರಣೆಗೆ ಅಡುಗೆ ಮನೆಯ ಗಾಜಿನ ಡಬ್ಬಿ ಮಗು ಆಟಾಡುವಾಗ ಬೀಳಿಸಿದೆ ಎಂದುಕೊಳ್ಳಿ. ಅದನ್ನು ತಾನೇ ಮಾಡಿದ್ದು ಎಂದು ಬಂದು ಒಪ್ಪಿಕೊಂಡಾಗ ಬೈಯುವ ಬದಲು ನನಗೆ ಬಂದು ಹೇಳಿದ್ದಕ್ಕೆ ಖುಷಿಯಾಯಿತು. ಇದು ಒಳ್ಳೆ ಬುದ್ಧಿ. ಹೀಗೆ ಏನಾದರೂ ನನಗೆ ಹೇಳು ಎಂದು ಬುದ್ದಿ ಹೇಳಿ.
  • ನೀವೇ ಮಾಡೆಲ್: ಮಕ್ಕಳ ಮುಂದೆ ನೀವು ಹೇಳುವ ಮಾಮೂಲಿ ಸುಳ್ಳು ಕೂಡ ಅವರಿಗೆ ಪಾಠವೇ. ಅವರು ನಿಮ್ಮನ್ನೇ ಅನುಕರಣೆ ಮಾಡುತ್ತಾರೆ. ಮನೆಯಲ್ಲಿ ಅಪ್ಪ ಅಮ್ಮನಿಗೆ ಅಥವಾ ಅಮ್ಮ ಅಪ್ಪನಿಗೆ ಹೇಳುವ ಸುಳ್ಳು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss