Wednesday, July 6, 2022

Latest Posts

ನಿಮ್ಮ ಮನೆಯಲ್ಲಿ ಇರುವೆಗಳ ಕಾಟ ಜೋರಾಗಿದೆಯೇ? ಹಾಗಾದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ..

ಮನೆಯಲ್ಲಿ ಎಲ್ಲೆಂದರಲ್ಲಿ ಇರುವೆಗಳ ಕಾಟ ಜೋರಾಗಿದೆಯೇ? ಅಡುಗೆಮನೆಯಿಂದ ಹಿಡಿದು ಬೆಡ್ ರೂಮ್ ವೆರೆಗೂ ಇರುವೆಗಳದ್ದೇ ಸಾಮ್ರಾಜ್ಯವೇ. ಇರುವೆ ಕಾಟ ತಡೆಯಲು ಮಾರುಕಟ್ಟೆಯಲ್ಲಿ ಬೇಕಾದಷ್ಟು ವಿಷಕಾರಿ ಪ್ರೊಡಕ್ಟ್ ಗಳು ಸಿಗುತ್ತವೆ. ಆದರೆ ಅವುಗಳನ್ನು ಹೆಚ್ಚು ಬಳಸಿದರೆ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮನೆಯಲ್ಲಿರುವ ಕೆಲವೊಂದು ಪ್ರೊಡೆಕ್ಟ್ ಗಳಿಂದಲೂ ಇರುವೆ ಓಡಿಸಬಹುದು. ಅವು ಯಾವವೆಂದು ತಿಳಿದುಕೊಳ್ಳೋಣ…

ಅರಿಶಿಣ ಪುಡಿ:
ಇರುವೆಗಳು ಬರುವ ಜಾಗದಲ್ಲಿ ಅರಿಶಿಣ ಪುಡಿಯನ್ನು ಹಾಕಿಡಿ. ಅರಿಶಿಣ ಪುಡಿ ಇರುವ ಕಡೆ ಇರುವೆಗಳು ಬರುವುದಿಲ್ಲ.

ಪುದೀನಾ ಎಲೆಗಳು:
ಪುದೀನಾ ಎಲೆಗಳ ಸುವಾಸನೆ ಇರುವೆಗಳಿಗೆ ಆಗುವುದಿಲ್ಲ. ಇರುವೆಗಳು ಬರುವ ಜಾಗದಲ್ಲಿ ಪುದಿನಾ ಎಲೆಗಳನ್ನು ಜಜ್ಜಿ ಹಾಕಿಡಿ. ಅಥವಾ ಪುದೀನಾ ಎಲೆಯ ರಸ ತೆಗೆದು ಆ ರಸಕ್ಕೆ ನೀರನ್ನು ಮಿಕ್ಸ್ ಮಾಡಿ ಇರುವೆಗಳು ಬರುವ ಜಾಗಕ್ಕೆ ಸಿಂಪಡಿಸಿದರೆ ಇರುವೆಗಳ ಕಾಟ ತಡೆಯಬಹುದು.

ಕರ್ಪೂರ:
ಮನೆಯ ಕಿಟಕಿಯ ಬಳಿ ಮತ್ತು ಬಾಗಿಲಿನ ಬಳಿಯಲ್ಲಿ ಕರ್ಪೂರವನ್ನು ಇಡಿ.  ಕರ್ಪೂರದ ವಾಸನೆಗೆ ಇರುವೆಗಳು ಬರುವುದಿಲ್ಲ.

ವಿನೆಗರ್:
ವಿನೆಗರ್‌ನ ಪರಿಮಳದಿಂದ ಇರುವೆಗಳು ದಿಕ್ಕಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತವೆ. ಸ್ಪ್ರೇ ಬಾಟಲಿಯಲ್ಲಿ ಅರ್ಧ ಕಪ್ ನೀರು ಮತ್ತು ವಿನೆಗರ್ ಮಿಶ್ರಣ ಮಾಡಿ ಚೆನ್ನಾಗಿ ಮಿಕ್ಸ್‌ ಮಾಡಿ. ಈ ದ್ರಾವಣವನ್ನು ಸಿಂಪಡಿಸುವುದರಿಂದ ಇರುವೆಗಳನ್ನು ತಕ್ಷಣ ಹೋಗಲಾಡಿಸಲು ಸಾಧ್ಯವಾಗುತ್ತದೆ.

ಸೋಪಿನ ಪುಡಿ:
ಇದು ಇರುವೆಗಳನ್ನು ಹೊರ ಓಡಿಸಲು ಇರುವ ಒಂದು ಒಳ್ಳೆಯ ಉಪಾಯವಾಗಿದೆ. ಒಂದು ಸ್ಪ್ರೇ ಬಾಟಲಿನಲ್ಲಿ ಸೋಪ್ ಪುಡಿ ಹಾಗು ಬಿಸಿ ನೀರನ್ನು ತುಂಬಿ. ಇದನ್ನು ಇರುವೆಗಳಿಗೆ ಸ್ಪ್ರೇ ಮಾಡಿ. ಇರುವೆಗಳು ಸಾಯುತ್ತವೆ.  ಇದು ತೇವವಾಗಿದ್ದಾಗ ಮಾತ್ರ ಕೆಲಸ ಮಾಡುತ್ತದೆ. ಹಾಗಾಗಿ ಕೆಲ ದಿನಗಳ ಕಾಲ ಮತ್ತೆ ಮತ್ತೆ ಪುನರಾವರ್ತಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss