ತುಂಬಾ ಮನೆಗಳಲ್ಲಿ ಹಲ್ಲಿ ಕಾಟ ಹೆಚ್ಚಾಗಿರುತ್ತದೆ. ಹಲ್ಲಿಗಳನ್ನು ಸಾಯಿಸಲು ಮನಸ್ಸು ಬರುವುದಿಲ್ಲ ಮತ್ತು ಕೆಲವೊಂದು ನಂಬಿಕೆಗಳು ಹಲ್ಲಿ ಸಾಯಿಸಿದರೆ ಪಾಪ ಬರುತ್ತದೆ ಎನ್ನುತ್ತವೆ. ಆದರೆ ಈ ಹಲ್ಲಿ ಕಾಟದಿಂದ ಸಾಕಾಗಿ ಹೋಗಿರುತ್ತದೆ. ಊಟಕ್ಕೆ ಕುಳಿತರೆ ಬಟ್ಟಲಲ್ಲಿ, ಬಾಗಿಲು ತೆಗೆಯಲು ಹೋದರೆ ತಲೆ ಮೇಲೆ, ಅಡುಗೆ ತೆದಿಟ್ಟರೆ ಪಾತ್ರೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಹಲ್ಲಿ ಬೀಳುತ್ತಿರುತ್ತವೆ. ಇವನ್ನು ಓಡಿಸಲಾಗದೆ ಸುಸ್ತಾಗಿ ಹೋಗಿರುತ್ತೇವೆ. ಹಲ್ಲಿ ಓಡಿಸಲು ಇಲ್ಲೊಂದು ಸಿಂಪಲ್ ಉಪಾಯವಿದೆ. ಏನು ಅಂಥ ತಿಳಿಯೋಣ..
ಬೇಕಾಗುವ ಸಾಮಗ್ರಿ:
ಲವಂಗ
ಈರುಳ್ಳಿ
ಕಾಳು ಮೆಣಸು
ಡೆಟಾಲ್ ಸೋಪ್
ಸ್ಪ್ರೇ ಬಾಟಲ್
ನೀರು
ತಯಾರಿಸವ ವಿಧಾನ:
ಮೊದಲಿಗೆ 20 ಲವಂಗ ಮತ್ತು 30 ಕಾಳು ಮೆಣಸು ತೆಗೆದುಕೊಂಡು ಕುಟ್ಟಿ ಚೆನ್ನಾಗಿ ಪುಡಿಮಾಡಿಕೊಳ್ಳಿ. ನಂತರ 2 ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದನ್ನು ಸೋಸಿ ರಸ ತೆಗೆದುಕೊಳ್ಳಿ. ಲವಂಗ ಮತ್ತು ಕಾಳು ಮೆಣಸಿನ ಪುಡಿಯನ್ನು ಸೋಸಿಕೊಂಡ ಈರುಳ್ಳಿ ರಸಕ್ಕೆ ಹಾಕಿಕೊಳ್ಳಬೇಕು.
ನಂತರ ಇದಕ್ಕೆ ಒಂದು ಲೋಟ ನೀರನ್ನು ಸೇರಿಸಿಕೊಳ್ಳಬೇಕು. ನಂತರ ಇದಕ್ಕೆ ಡೆಟಾಲ್ ಸೋಪ್ ಸಣ್ಣ ತುಂಡನ್ನು ಹಾಕಿ ಚೆನ್ನಾಗಿ ಕರಗಿಸಿ (ಹಲ್ಲಿಗೆ ಡೆಟಾಲ್ ಸೋಪ್ ವಾಸನೆ ಆಗುವುದಿಲ್ಲ). ಈ ಮಿಶ್ರಣಗಳನ್ನು ಒಂದು ಸ್ಪ್ರೇ ಬಾಟಲ್’ಗೆ ಹಾಕಿ ಹಲ್ಲಿ ಬರುವ ಜಾಗದಲ್ಲಿ ಸ್ಪ್ರೇ ಮಾಡಬೇಕು. ಎಲ್ಲಿ ಹಲ್ಲಿ ಕಂಡರೂ ಸ್ಪ್ರೇ ಮಾಡಿ. ಹಲ್ಲಿಗಳೆಲ್ಲ ಓಡಿ ಹೋಗುತ್ತವೆ. ಮತ್ತು ಹಲ್ಲಿಗಳು ಎಂದಿಗೂ ನಿಮ್ಮ ಮನೆಕಡೆ ಬರುವುದಿಲ್ಲ.