ಮಕ್ಕಳು ಗೋಡಂಬಿ ತಿನ್ನೋಕೆ ಇಷ್ಟ ಪಡೋದಿಲ್ವಾ? ಸಿಹಿ ತಿಂಡಿಯಲ್ಲೂ ಅದನ್ನು ಎತ್ತಿ ಪಕ್ಕಕಿಡ್ತಾರಾ? ಹಾಗಿದ್ರೆ ಅವರಿಗೆ ಗೋಡಂಬಿ ತಿನ್ನಿಸೋಕೆ ನಮ್ಮ ಬಳಿ ಸರಳ ಉಪಾಯವಿದೆ. ಏನು ಅಂತೀರಾ? ಕ್ರಿಸ್ಪಿ ಗೋಡಂಬಿ. ಹೌದು ಇದು ಸರಳ, ಟೇಸ್ಟಿ ಡಿಶ್. ಮಾಡೋದು ಹೇಗೆ ನೋಡಿ..
ಬೇಕಾಗಿರುವ ಸಾಮಾಗ್ರಿಗಳು
- ಗೋಡಂಬಿ
- ಖಾರದಪುಡಿ
- ಉಪ್ಪು
- ಪೆಪ್ಪರ್ ಪುಡಿ
- ಗಾರ್ಲಿಕ್ ಪೌಡರ್
- ಆನಿಯನ್ ಪೌಡರ್
ಮಾಡುವ ವಿಧಾನ - ಮೊದಲು ಸ್ವಲ್ಪ ಎಣ್ಣೆ ಹಾಕಿ ಎಲ್ಲ ಪುಡಿಗಳನ್ನು ಹಾಕಿ
- ಸಣ್ಣ ಉರಿಯಲ್ಲಿ ಗೋಡಂಬಿ ಹಾಕಿ ಹತ್ತು ನಿಮಿಷ ಬಾಡಿಸಿದರೆ ಕ್ರಿಸ್ಪಿ ಗೋಡಂಬಿ ರೆಡಿ