ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರ ಮನೆಗಳಲ್ಲಿ ಜಿರಳೆಗಳ ಕಾಟ ಹೆಚ್ಚಾಗುತ್ತಿದೆ. ನಾವು ಮನೆಯಲ್ಲಿ ಉಪಯೋಗಿಸುವ ಮರದ ಉಪಕರಣಗಳಿಂದ ತಿಗಣೆ, ಜಿರಳೆಗಳು ಅತಿಯಾಗುತ್ತಿದೆ.
ಮನೆಯ ಅಡುಗೆ ಮನೆಯಲ್ಲಿ ಜಿರಳೆ ಕಂಡರೆ ನಮ್ಮ ಸ್ವಚ್ಛತೆಯ ಬಗ್ಗೆ ನಮಗೆ ಸಂಶಯ ಮೂಡಿಸಿಬಿಡುತ್ತಿದೆ. ಈ ಜಿರಳೆಗಳಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಹಲವಾರು ಕಾಯಿಲೆಗಳಿಗೆ ಮೂಲವಾಗಿರುತ್ತದೆ.
ನಿಮ್ಮ ಮನೆಯಲ್ಲಿ ಜಿರಳೆ ಹೆಚ್ಚಾಗಿದ್ದರೆ, ನಾವು ಕೊಡುವ ಈ ಸಿಂಪಲ್ ವಿಧಾನಗಳಿಂದ ನಿಮ್ಮ ಮನೆಯನ್ನು ಜಿರಳೆ ಮುಕ್ತವಾಗಿಸಬಹುದು.
ಬಿಸಿ ನೀರು, ನಿಂಬೆಹಣ್ಣು ಅಡಿಗೆ ಸೋಡಾ: ಬಿಸಿ ನೀರಿಗೆ 2 ಚಮಚ ಸೋಡಾ, ಒಂದು ಚಮಚ ನಿಂಬೆ ರಸವನ್ನು ಬಿಸಿ ನೀರಿಗೆ ಹಾಕಿ ಅದನ್ನು ನಿಮ್ಮ ಅಡುಗೆ ಮನೆ ಸಿಂಕ್ ಅಥವಾ ಚಿರಳೆ ಬರುವ ಸ್ಥಳಗಳಿಗೆ ಹಾಕುವುದರಿಂದ ಜಿರಳೆ ಕಡಿಮೆಯಾಗುತ್ತದೆ.
ಬೋರೆಕ್ಸ್: ಬೋರೆಕ್ಸ್ ಮತ್ತು ಸಕ್ಕರೆಯನ್ನು ಮಿಕ್ಸ್ ಮಾಡಿ ಅದನ್ನು ಜಿರಳೆ ಇರುವ ಸ್ಥಳದಲ್ಲಿ ಹಾಕುವುದರಿಂದ ಜಿರಳೆಗಳು ಕಡಿಮೆಯಾಗುತ್ತದೆ.
ವಿನೇಗರ್: ವಿನೇಗರ್ ಹಾಗೂ ಬಿಸಿ ನೀರೀನ ಮಿಶ್ರಣದಿಂದ ಅಡಗೆ ಮನೆ ಸ್ವಚ್ಛ ಮಾಡಬೇಕು. ಹಾಗೂ ಈ ಮಿಶ್ರಣವನ್ನು ಸಿಂಕ್ ಗೆ ಸುರಿಯುವುದರಿಂದ ಜಿರಳೆಗಳು ಕಡಿಮೆಯಾಗುತ್ತದೆ.
ಬೇವಿನ ಎಲೆ: ಬೇವಿನ ಎಲೆಯ ವಾಸನೆಗೆ ಅಂಜುವ ಜಿರಳೆಗಳಿಗೆ ಬೇವಿನ ಎಲೆ ರಾಮಬಾಣವಾಗಲಿದೆ. ಅಡುಗೆ ಮನೆಯಲ್ಲಿ ಬೇವಿನ ಎಲೆ ಇಡುವುದರಿಂದ ಕಡಿಮೆಯಾಗುತ್ತದೆ.
ಬ್ಲೀಚ್: ಬ್ಲೀಚಿಂಗ್ ಪೌಡರ್ ಹಾಗೂ ನೀರನ್ನು ಮಿಶ್ರಣ ಮಾಡಿ ಅದನ್ನು ಬಾತ್ ರೂಂ, ನ ಚರಂಡಿಗೆ ಸುರಿಯುವುದರಿಂದ ಜಿರಳೆಗಳು ನಾಶವಾಗುತ್ತದೆ.