Friday, September 25, 2020
Friday, September 25, 2020

Latest Posts

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...

ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದಾರಾ? ಹಾಗಾದರೆ ಅವರೆದುರು ಎಂದಿಗೂ ಈ ಮಾತುಗಳನ್ನು ಆಡಬೇಡಿ!

sharing is caring...!

ಪಾಲಕರ ಕೆಲಸ ನಿಭಾಯಿಸುವುದು ಅಷ್ಟೊಂದು ಸುಲಭವಲ್ಲ. ಮಕ್ಕಳು ಗಾಜಿನ ಗೊಂಬೆಗಳಿದ್ದಂತೆ ತುಂಬಾ ಕೇರ್‌ನಿಂದ ಹ್ಯಾಂಡಲ್ ಮಾಡಬೇಕಾಗುತ್ತದೆ. ಮಕ್ಕಳು ತಂದೆ ತಾಯಿಯನ್ನು ಫಾಲೋ ಮಾಡುವುದಿಲ್ಲ. ಅವರು ನಿಮ್ಮನ್ನು ಅನುಸರಿಸುತ್ತಾರೆ. ಮಕ್ಕಳೊಂದಿಗೆ ಮಾತನಾಡುವಾಗ, ಅವರೊಟ್ಟಿಗೆ ನಡೆದುಕೊಳ್ಳುವಾಗ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ನೀವು ಯಾವ ರೀತಿಯ ವ್ಯಕ್ತಿತ್ವವನ್ನು ಮಕ್ಕಳೆದುರು ಪ್ರದರ್ಶಿಸುತ್ತೀರೋ ಅದೇ ರೀತಿಯ ವ್ಯಕ್ತಿತ್ವವನ್ನು ಮಕ್ಕಳು ಮುಂದೆ ಬೆಳೆಸಿಕೊಳ್ಳುತ್ತಾರೆ. ಭಾರತೀಯ ಒಂದು ಸಂಶೋಧನೆಯ ಪ್ರಕಾರ ತಿಳಿದು ಬಂದಿರುವ ವಿಷಯವೆಂದರೆ ಮಕ್ಕಳೊಂದಿಗೆ ಪಾಲಕರು ಯಾವ ರೀತಿಯಲ್ಲಿ ಮಾತನಾಡುತ್ತಾರೆ ಎಂಬುದು ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆಯಂತೆ. ಹಾಗಾಗಿ ಮಕ್ಕಳೊಂದಿಗೆ ಮಾತನಾಡುವಾಗ ತುಂಬಾ ಹುಷಾರಾಗಿ ಮಾತನಾಡಿ.

ನೀನು ಕೆಟ್ಟ ಮಗು:
ನಿಮಗೆ ಸಿಟ್ಟು ಬಂದಾಗ ಮಾತಿನ ಬರದಲ್ಲಿ ಮಕ್ಕಳಿಗೆ ನೀನು ಕೆಟ್ಟ ಹುಡುಗಿ/ಹುಡುಗ ಎಂದು ಬೈಯುತ್ತೀರಿ. ಬೈದ ನಿಮಗೆ ಕೆಲ ಹೊತ್ತಿನಲ್ಲಿ ಬೈದಿದ್ದು ಮರೆತು ಹೋಗುತ್ತದೆ. ಆದರೆ ಮಕ್ಕಳ ಮನಸ್ಸು ಹಾಗಲ್ಲ. ಕೆಟ್ಟ ಮಗು ಎಂದಿದ್ದು ಅವರ ಸ್ವಾಭಿಮಾನಕ್ಕೆ ನೋವಾಗುತ್ತದೆ. ಮಕ್ಕಳಿಗೆ ಒಳ್ಳೆಯದು ಯಾವುದು ಕೆಟ್ಟದ್ದ ಯಾವುದು ಗೊತ್ತಾಗುವುದಿಲ್ಲ. ನೀವು ಅವರಲ್ಲಿ ಒಳ್ಳೆತನ ತುಂಬಬೇಕು, ಪಾಸಿಟಿವಿಟಿ ಹೆಚ್ಚಿಸ ಬೇಕು. ನೀನು ಜಗತ್ತಿನ ಒಳ್ಳೆಯ ಮಗು. ನಮ್ಮ ಮನೆ ಮುದ್ದು ಕಂದ ಎಂದು ಅವರನ್ನು ಆಗಾಗ ಹುರಿದುಂಬಿಸಿ.

ನೀನೇಕೆ ನಿನ್ನ ಅಣ್ಣ/ ಅಕ್ಕನಂತಿಲ್ಲ:
ಎರಡು, ಮೂರು ಮಕ್ಕಳಿರುವ ಮನೆಗಳಲ್ಲಿ ಈ ರೀತಿಯ ಹೋಲಿಕೆಗಳು ನಡೆಯುತ್ತಿರುತ್ತವೆ. ಅಕ್ಕನನ್ನೂ ನೋಡಿ ಕಲಿ. ಅಣ್ಣನಂತೆ ಏಕೆ ನೀನಿಲ್ಲ? ಈ ರೀತಿಯ ಮಾತುಗಳನ್ನು ಮಕ್ಕಳೆದುರು ಎಂದಿಗೂ ಆಡಬೇಡಿ. ತಮ್ಮ ಒಡಹುಟ್ಟಿದವರಲ್ಲಿ ದ್ವೇಷ ಬೆಳೆಯಲು ಪ್ರಾರಂಭವಾಗುತ್ತದೆ. ಜಲಸ್ ಶುರುವಾಗುತ್ತದೆ. ಪ್ರೀತಿಗಿಂತ ಜಲಸ್ ಹೆಚ್ಚಾಗುತ್ತದೆ.

ನಿನ್ನ ಹತ್ರ ಈ ಕೆಲಸ ಮಾಡೋದಕ್ಕೆ ಆಗೋದಿಲ್ಲ:
ಮಕ್ಕಳು ಯಾವುದಾದರು ಹೊಸ ಕೆಲಸ ಪ್ರಾರಂಭಿಸಿದರೆ ಅವರಿಗೆ ದೈರ್ಯ ತುಂಬಬೇಕು. ನಿನ್ನ ಹತ್ರ ಆಗತ್ತೆ ಮಾಡು ಎನ್ನಬೇಕು. ನಿನ್ನ ಹತ್ರ ಇದನ್ನ ಮಾಡೋದಕ್ಕೆ ಆಗೋದಿಲ್ಲ ಎಂದು ಪಾಲಕರೇ ಹೇಳಿದರೆ ಅವರಲ್ಲಿರು ಆತ್ಮಸ್ಥೈರ್ಯ ಕುಂದುತ್ತದೆ. ತನ್ನಿಂದ ಏನು ಮಾಡುವುದಕ್ಕಾಗುವುದಿಲ್ಲ ಎಂದು ಕೈ ಕಟ್ಟಿ ಕುಳಿತು ಬಿಡುತ್ತಾರೆ. ಪಾಲಕರು ಮಕ್ಕಳಿಗೆ ಬೆನ್ನೆಲುಬಾಗಿರಿ.

ನೀನು ನನ್ನ ಹತ್ರ ಮಾತಾಡಬೇಡ:
ಮಕ್ಕಳು ಯಾವುದೋ ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡಿರುತ್ತಾರೆ. ನೀವು ಹೇಳುವುದನ್ನು ಕೇಳುವುದಿಲ್ಲ. ಆಗ ಅವರೆದುರು ನೀನು ನನ್ನ ಹತ್ರ ಮಾತಾಡಬೇಡ ಎಂಬ ದೊಡ್ಡ ಮಾತನ್ನು ಆಡುತ್ತೀರಿ. ಪಾಲಕರು ಮಕ್ಕಳ ನಡುವೆ ಸಂವಹನ ಎಂದಿಗೂ ಕಟ್ಟಾಗಬಾರದು. ನಿಮ್ಮ ಈ ಮತು ಮಕ್ಕಳ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಈ ಕೆಲಸ ಮಾಡಬೇಡ:
ಮಕ್ಕಳಿಗೆ ನೀವು ಯಾವುದನ್ನು ಮಾಡಬೇಡಿ ಹೇಳುತ್ತೀರೋ ಅದೇ ಕೆಲಸವನ್ನು ಮಾಡಬೇಕು ಎನಿಸುತ್ತದೆ. ನೀವು ಅದನ್ನು ಮಾಡಬೇಡ ಇದನ್ನು ಮಾಡಬೇಡ ಎಂದರೆ ನಿಮ್ಮ ಎದುರು ಮಾಡದಿದ್ದರೂ ನೀವಿಲ್ಲದಾಗ ಅದನ್ನು ಮಾಡಿಯೇ ಮಾಡುತ್ತಾರೆ. ಹಾಗಾಗಿ ಅದನ್ನು ಏಕೆ ಮಕ್ಕಳು ಮಡಬಾರದು ಎಂಬುದನ್ನು ತಿಳಿಸಿ ಹೇಳಿ. ಮಾಡಬೇಡ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಬೇಡಿ.

ಪಕ್ಕದ ಮನೆ ಹುಡಗ/ಹುಡಿಗಿನ ನೋಡಿ ಕಲಿ:
ಮಕ್ಕಳನ್ನು ಯಾವುದೇ ಮಗುವಿನೊಂದಿಗೂ ಹೋಲಿಸಿ ಮಾತನಾಡಬೇಡಿ. ಪ್ರತಿಯೊಬ್ಬರಿಗೂ ಅವರದೇ ಆದ ಟ್ಯಾಲೆಂಟ್ ಇದ್ದೇ ಇರುತ್ತದೆ. ಪಕ್ಕದ ಮನೆ ಮಕ್ಕಳೊಂದಿಗೆ ಹೋಲಿಸಿ ಅವರಂತೆ ಯಾಕೆ ನೀನಿಲ್ಲ. ನೀನು ದಡ್ಡಿ ಹಾಗೇ ಹೀಗೆ ಎಂದು ಎಂದಿಗೂ ಮಾತನಾಡಬೇಡಿ. ಇಂಥ ಮಾತುಗಳು ಮಕ್ಕಳ ಮೇಲೆ ಬಹಳ ನೆಗೆಟಿವ್ ಪರಿಣಾಮ ಬೀರುತ್ತದೆ.

ಲೀವ್ ಮಿ ಅಲೋನ್:
ಮಕ್ಕಳ ಪುಟ್ಟ ಪ್ರಪಂಚದಲ್ಲಿ ಪಾಲಕರೇ ಎಲ್ಲ. ಅವಕ್ಕೆ ಮತ್ತ್‌ಯಾರೂ ಗೊತ್ತಿಲ್ಲ. ಹಾಗಿದ್ದಾಗ ಮಕ್ಕಳೆದುರು ನನ್ನನ್ನ ಒಂಟಿಯಾಗಿ ಇರೋಕೆ ಬಿಡು. ಹೋಗು ಇಲ್ಲಿಂದ ಎಂದು ಗದರಿದರೆ ಮಕ್ಕಳ ಮನಸ್ಸಿನ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದು ಗೊತ್ತಿದೆಯಾ ನಿಮಗೆ. ಕೆಲವೊಮ್ಮೆ ಮಕ್ಕಳ ಸಾಂತ್ವನ ಬೇಗ ನಮ್ಮನ್ನು ದು:ಖದಿಂದ ಹೊರತರುತ್ತದೆ ನೆನೆಪಿರಲಿ.

ಅಪ್ಪ ಬಂದ ತಕ್ಷಣ ಹೇಳತೀನಿ:
ಮಕ್ಕಳು ಏನೋ ಕಿಲಾಡಿ ಮಾಡಿರತಾರೆ, ಅಮ್ಮ ಹೇಳಿದ ಮಾತನ್ನು ಕೇಳುವುದಿಲ್ಲ. ಆಗ ಅವರನ್ನು ಹೆದರಿಸುವ ಉದ್ದೇಶದಿಂದ ಅಪ್ಪ ಕೆಲಸದಿಂದ ಬಂದಿದ್ದೆ ನಿನಗೆ ಹೇಳಿಕೊಡತೀನಿ ಎನ್ನುತ್ತೀರ. ಅದು ಮಕ್ಕಳ ಮನಸ್ಸಿನ ಮೇಲೆ ಎಂಥ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಗೊತ್ತಾ ? ಅಪ್ಪನ ಮೇಲೆ ಪ್ರೀತಿಗಿಂತ ಹೆಚ್ಚಾಗಿ ಭಯ ಹುಟ್ಟುತ್ತದೆ. ಅಪ್ಪ ಎಂದರೆ ಗದರುವ ಮೀಸೆಗಾರನಾಗುತ್ತಾನೆ ಹೊರತು ಪ್ರೀತಿಯ ತಂದೆಯಾಗಿ ಮಕ್ಕಳ ಮನಸ್ಸಿನಲ್ಲಿ ಉಳಿಯುವುದಿಲ್ಲ. ಹಾಗಾಗಿ ಈ ತಪ್ಪನ್ನು ಮಕ್ಕಳೆದುರು ಮಾಡಬೇಡಿ.

ನಮಗೆ ನೀನು ಬೇಡ: ಜಾತ್ರೆಲಿ ಬೇರೆ ಪಾಪುನ ತರ್ತೀವಿ
ಮಕ್ಕಳನ್ನು ಹೆದರಿಸುವ ಉದ್ದೇಶದಿಂದ ನೀನು ನಾವು ಹೇಳಿದ ಮಾತನ್ನು ಕೇಳುವುದಿಲ್ಲ ಹಾಗಾಗಿ ನೀನು ಬೇಡ ನಮಗೆ. ನಾವು ಬೇರೆ ಪಾಪುನ ನಮ್ಮನೆಗೆ ಕರೆದುಕೊಂಡು ಬರುತ್ತೇವೆ ಎಂದು ಹೇಳುತ್ತೀರಿ. ಆದರೆ ಅದು ಮಕ್ಕಳ ಮೇಲೆ ಬೇರೆ ಪರಿಣಾಮ ಬೀರುತ್ತದೆ. ಅಪ್ಪ ಅಮ್ಮನಿಗೆ ನನ್ನನ್ನು ಕಂಡರೆ ಇಷ್ಟವಿಲ್ಲ ಎಂದು ಮನಸ್ಸು ನೋಯುತ್ತದೆ.

-ಕಾವ್ಯಾ ಜಕ್ಕೊಳ್ಳಿ

Latest Posts

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...

ಬೇಗ ಗುಣಮುಖರಾಗಿ ಎಸ್‌ಪಿಬಿ ಸರ್: ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್

ನವದೆಹಲಿ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಎಸ್‌ಪಿಬಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಈ...

Don't Miss

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...
error: Content is protected !!