ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಮನೆಯಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆಯೇ? ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ…

ಮಳೆಗಾಲದಲ್ಲಿ, ಚಳಿಗಾಲದಲ್ಲಿ ಸಂಜೆಯಾಗುತ್ತಿದ್ದಂತೆಯೇ ಮನೆಗಳಲ್ಲಿ ಗುಯ್ ಎನ್ನುವ ಶಬ್ಧ ಕೇಳಲು ಪ್ರಾರಂಭವಾದರೆ ಬೆಳಿಗ್ಗೆ ೬ ಗಂಟೆಯವರೆಗೂ ಗುಯ್ ಶಬ್ಧ ಕೇಳುತ್ತಲೇ ಇರುತ್ತದೆ. ಫ್ಯಾನ್ ಹಾಕಿಕೊಳ್ಳದಿದ್ದರಂತೂ ರಾತ್ರಿ ನಿದ್ದೆಯೂ ಬರುವುದಿಲ್ಲ. ಸಂಜೆ ಆಗುತ್ತಿದ್ದಂತೆಯೇ ಮನೆ ಬಾಗಿಲು ಕಿಟಕಿಗಳನ್ನು ಹಾಕಿಕೊಂಡು ಕಳ್ಳರಂತೆ ಕುಳಿತರೂ ಸೊಳ್ಳೆ ಬಿಡುವುದಿಲ್ಲ. ನಿಮ್ಮನ್ನು ಹುಡುಕಿಕೊಂಡು ಬಂದು ಕಚ್ಚುತ್ತವೆ. ಈ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ..

  • ಕೊಬ್ಬರಿ ಎಣ್ಣೆಗೆ ಸ್ವಲ್ಪ ಕಹಿ ಬೇವಿನ ಎಣ್ಣೆಯನ್ನು ಸೇರಿಸಿಕೊಂಡು ಕೈ ಕಾಲಿಗೆಲ್ಲ ಹಚ್ಚಿಕೊಂಡರೆ ಸೊಳ್ಳೆ ಕಡಿಯುವುದು ಕಡಿಮೆ ಆಗುತ್ತದೆ. ಕೊಬ್ಬರಿ ಎಣ್ಣೆ ಮತ್ತು ಕಹಿ ಬೇವಿನ ಎಣ್ಣೆ ವಾಸನೆ ಸೊಳ್ಳೆಗೆ ಆಗುವುದಿಲ್ಲ.
  • ಬೆಳ್ಳುಳ್ಳಿ ಮತ್ತು ಈರುಳ್ಳಿಯ ವಾಸನೆಗೆ ಸೊಳ್ಳೆಗಳು ಕಡಿಯುವುದು ಕಡಿಮೆ ಆಗುತ್ತದೆ. ಲೈಟ್ ಇರುವಲ್ಲಿ ಸೊಳ್ಳೆಗಳು ಬರುವುದು ಹೆಚ್ಚು. ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್‌ನ್ನು ಲೈಟ್ ಕೆಳಗೆ ಇಟ್ಟರೆ ಸೊಳ್ಳೆ ಕಡಿತ ಕಡಿಮೆ ಆಗುತ್ತದೆ.
  • ಸಂಜೆ ಸಮಯದಲ್ಲಿ ಮನೆಗೆ ಧೂಪದ ಹೊಗೆ ಹಾಕಬೇಕು, ಹಳ್ಳಿ ಮನೆಗಳಲ್ಲಿ ಅಡಿಕೆ ಸಿಪ್ಪೆಯ ಹೊಗೆ ಹಾಕಬಹುದು. ಹೊಗೆ ಹಾಕಿದರೆ ಸೊಳ್ಳೆಗಳು ಮನೆ ಒಳಗೆ ಬರುವುದಿಲ್ಲ.
  • ಸಂಜೆ ಆಗುತ್ತಿದ್ದಂತೆಯೇ ಮನೆಯ ಕಿಟಕಿ, ಬಾಗಿಲುಗಳನ್ನು ಹಾಕಬೇಕು. ಆದಷ್ಟು ಲೈಟ್ ಹಾಕಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಲೈಟ್ ಹೆಚ್ಚಿದ್ದಲ್ಲಿ ಸೊಳ್ಳೆ ಬರುವುದು ಹೆಚ್ಚು.
  • ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಹಾಕಿಕೊಳ್ಳಬೇಕು. ಇದರಿಂದ ಸೊಳ್ಳೆಗಳು ಮನೆ ಒಳಗೆ ಬರುವ ಪ್ರಮಾಣ ಕಡಿಮೆ ಆಗುತ್ತದೆ. ಸೊಳ್ಳೆ ಕಡಿತವೂ ಇರುವುದಿಲ್ಲ.
  • ರಾತ್ರಿ ಮಲಗುವಾಗ ಫ್ಯಾನ್ ಹಾಕಿಕೊಂಡು ಮಲಗಿ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಸೊಳ್ಳೆ ಪರದೆಯನ್ನು ಹಾಕಿಕೊಂಡು ಮಲಗುವುದು ರೂಢಿಸಿಕೊಳ್ಳಿ. ಇದರಿಂದ ಯಾವುದೇ ಅಪಾಯವಿರುವುದಿಲ್ಲ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss