ಹಾಲ್ ಅಥವಾ ಲಿವಿಂಗ್ ರೂಂ ನಿಮ್ಮ ಮನೆಯ ಮೊದಲ ಭಾಗ. ಜನ ಮೊದಲು ಇದನ್ನೆ ನೋಡುತ್ತಾರೆ. ಜನರೇಕೆ ನೀವು ಕೂಡ ಮನಗೆ ಎಂಟ್ರಿ ಕೊಟ್ಟ ತಕ್ಷಣ ಇದನ್ನೇ ನೋಡುತ್ತೀರಿ. ಒಂದು ಹಾಲ್ ಅಂದ್ರೆ ಅದರಲ್ಲಿ ಏನೆಲ್ಲಾ ಇಟ್ಟರೆ ಚಂದ? ಹೇಗೆ ಸುಂದರವಾಗಿ ಕಾಣುವಂತೆ ಮಾಡೋದು ಇಲ್ಲಿದೆ ಟಿಪ್ಸ್..
- ದೇವರಿಂದ ಆರಂಭ: ಹಾಲ್ನ ಮುಂಬಾಗ ಅಥವಾ ಮೂಲೆಯಲ್ಲಿ ದೇವರು, ಬುದ್ಧ, ಲೈಟ್ ಹೀಗೆ ಅಧ್ಯಾತ್ಮಕ್ಕೆ ಸಂಬಂಧಿಸಿದ್ದು ಏನಾದರೂ ಇಡಿ. ಇದು ಮನೆಗೆ ಬರುವವರಿಗೆ ಶಾಂತಿ ಭಾವನೆ ತರುತ್ತದೆ. ನಿಮಗೂ ಒಂದು ರೀತಿ ನೆಮ್ಮದಿ ಇರುತ್ತದೆ.
- ಹಸಿರೇ ಉಸಿರು: ಮನೆಯಲ್ಲಿ ಹಸಿರಿದ್ದಷ್ಟು ವಾತಾವರಣ ಶಾಂತವಾಗಿರುತ್ತದೆ. ಇಡೀ ಹಾಲ್ನಲ್ಲಿ ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ಹಸಿರು ಗಿಡಗಳನ್ನು ಇಡಿ. ಇದರಿಂದ ಮನೆಯೂ ಚೆನ್ನಾಗಿ ಕಾಣುತ್ತದೆ. ಉಸಿರಾಟಕ್ಕೂ ಒಳ್ಳೆಯದು.
- ಫೋಟೊ ಫ್ರೇಮ್ಗಳಿರಲಿ: ನಿಮ್ಮ ಮದುವೆ ಅಥವಾ ಫ್ಯಾಮಿಲಿ ಫೋಟೊಗಳಿಂತ ಕ್ಲಾಸಿಯಾದ ವಾಲ್ಪೇಪರ್ ರೀತಿ ಫೋಟೊ ಫ್ರೇಮ್ ಹಾಕಿ. ಇದು ಮನೆ ಇನ್ನೂ ಹೆಚ್ಚು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಫೋಟೊಗಳನ್ನು ರೂಮಿನಲ್ಲಿ ಹಾಕಿಕೊಳ್ಳಬಹುದು.
- ಕಲರ್ ಕಾಂಬಿನೇಶನ್: ಹಾಸಿರುವ ರಗ್, ನಿಮ್ಮ ಸೋಫಾ, ಚೇರ್ ಕವರ್, ಟೇಬಲ್ ಕ್ಲಾತ್ ಹೀಗೆ ಎಲ್ಲವೂ ಮ್ಯಾಚ್ ಆಗುತ್ತಿದೆಯಾ ಚೆಕ್ ಮಾಡಿ. ಮ್ಯಾಚ್ ಆಗದಿದ್ದರೂ ಪರವಾಗಿಲ್ಲ. ಆಡ್ ಆಗಿ ಕಾಣುವುದು ಬೇಡ.
- ಅಂದದ ಲೈಟ್: ಅಂದದ ವಿಭಿನ್ನವಾದ ಲೈಟ್ಗಳಿರಲಿ. ದೊಡ್ಡ ಮನೆಯಿದ್ದು ಕಡಿಮೆ ಲೈಟ್ ಬಳಸಿದರೆ ಮನೆ ಡಲ್ ಎನಿಸುತ್ತದೆ. ಬೇರೆ ಬೇರೆ ರೀತಿಯ ಲೈಟ್ಸ್ ಬಳಸುವುದರಿಂದ ಮನೆ ಇನ್ನೂ ಸುಂದರವಾಗಿ ಕಾಣುತ್ತದೆ.
- ಶೆಲ್ಫ್ಗಳಿರಲಿ: ಹಾಲ್ನಲ್ಲಿ ಶೆಲ್ಫ್ಗಳು ಇಲ್ಲದೆ ಹೋದರೆ ಖಂಡಿತ ಮಾಡಿಸಿ. ಇದರ ಮೇಲೆ ಪುಸ್ತಕ, ಶೋ ಪೀಸ್ಗಳನ್ನು ಇಟ್ಟರೆ ಮನೆ ಇನ್ನೂ ಸುಂದರವಾಗಿ ಕಾಣುತ್ತದೆ. ಎಲ್ಲರಿಗೂ ನಿಮ್ಮ ಮನೆ ಇಷ್ಟವಾಗುತ್ತದೆ.
- ಹೋಂ ಫ್ರೇಗ್ರೆನ್ಸ್: ಮನೆಗೆ ಬಂದ ತಕ್ಷಣ ಏನನ್ನು ನೋಟೀಸ್ ಮಾಡದಿದ್ದರೂ ವಾಸನೆಯನ್ನು ತಕ್ಷಣ ಗ್ರಹಿಸುತ್ತಾರೆ. ಆಗಾಗ ಹೋಂ ಫ್ರೆಶ್ನರ್ ಬಳಸುವುದರಿಂದ ಮನೆ ಇನ್ನೂಚೆನ್ನಾಗಿ ಕಾಣುತ್ತದೆ.