ನಿಮ್ಮ ವಾಹನ ದಾಖಲೆಗಳ ಅವಧಿ ಮುಗಿದಿದೆಯಾ? ಇಲ್ಲಿದೆ ನೋಡಿ ಸಿಹಿ ಸುದ್ದಿ!

0
129

ಹೊಸದಿಲ್ಲಿ: ದೇಶಾದ್ಯಂತ ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನಲೆ ಕೇಂದ್ರ ಸರ್ಕಾರ ದೇಶವನ್ನು ಏ.14ರವರೆಗೆ ಲಾಕ್ ಡೌನ್ ಮಾಡಲು ಘೋಷಿಸಿದೆ. ಈಗ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ವಾಹನಗಳ ಮಾನ್ಯ ಸಮಯವನ್ನು ಜೂನ್ 30ರ ವರೆಗೂ ವಿಸ್ತರಿಸಿದೆ.

ಡ್ರೈವಿಂಗ್ ಲೈಸನ್ಸ್, ವಾಹನ ನೊಂದಣಿಗಳನ್ನು ಫೆ.1ರಿಂದ ಜೂನ್ 30ಕ್ಕೆ ವಿಸ್ತರಿಸಲಾಗಿದೆ.

ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಹೆಚ್ಚಿನ ವಾಹನ ಮಾಲಿಕರು ತಮ್ಮ ಅವಧಿ ಮೀರಿದ ದಾಖಲಾತಿಗಳನ್ನು ನವೀಕರಿಸಲು ಸಾಧ್ಯವಾಗದ ಹಿನ್ನಲೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಫೆ.1 ರಿಂದ ಅವಧಿ ಮುಗಿದ ವಾಹನಗಳ ದಾಖಲೆಗಳನ್ನು ಜೂನ್ 30ವರೆಗೆ ಮಾನ್ಯ ಎಂದು ಪರಿಗಣಿಸಬೇಕು ಎಂದು ಸಚಿವಾಲಯ ಸೂಚಿಸಿದೆ.

LEAVE A REPLY

Please enter your comment!
Please enter your name here