Tuesday, June 28, 2022

Latest Posts

ನಿಮ್ಮ ಸಾಧನೆ ಇತರರಿಗೆ ಸ್ಫೂರ್ತಿ: ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ಗುಡ್‌ಬೈ ಹೇಳಿದ್ದ ಧೋನಿಗೆ ಮೋದಿಯ ಪತ್ರ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ಇತ್ತೀಚೆಗೆ​ ಗುಡ್‌ಬೈ ಹೇಳಿದ್ದ ಟೀಂ ಇಂಡಿಯಾ ಯಶಸ್ವಿ ಮಾಜಿ ನಾಯಕ, ವಿಕೆಟ್​ ಕೀಪರ್​ ಕಂ ಬ್ಯಾಟ್ಸ್​​ಮನ್​ ಮಹೇಂದ್ರ ಸಿಂಗ್​ ಧೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರವೊಂದನ್ನು ಬರೆದಿದ್ದಾರೆ ,
ಆಗಸ್ಟ್​ 19ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧೋನಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಮಹೇಂದ್ರ ಸಿಂಗ್​ ಧೋನಿಯವರು ನಿವೃತ್ತರಾದ ಹಿನ್ನೆಲೆಯಲ್ಲಿ ಎರಡು ಪುಟಗಳ ಪತ್ರ ಬರೆದಿದ್ದಾರೆ.
ಮೈದಾನದಲ್ಲಿ ಧೋನಿ ಅವರ 16 ವರ್ಷಗಳ ಸುದೀರ್ಘ ಪ್ರಯಾಣವನ್ನು ನೆನಪಿಸಿಕೊಂಡಿರುವ ಪ್ರಧಾನ ಮೋದಿ ,ಡಿಯರ್​ ಮಹೇಂದ್ರ, ಆಗಸ್ಟ್​ 15ರಂದು ನೀವು ವಿಶೇಷ ಶೈಲಿಯಲ್ಲಿ ಇಡೀ ರಾಷ್ಟ್ರದ ಜನರು ಭಾವೋದ್ರೇಕವಾಗುವಂತೆ ವಿಡಿಯೋ ಶೇರ್​ ಮಾಡಿದ್ದೀರಿ. 130 ಕೋಟಿ ಭಾರತೀಯರು ನಿಮ್ಮ ನಿರ್ಧಾರದಿಂದ ನಿರಾಶೆಗೊಂಡಿದ್ದಾರೆ. ಆದರೆ ಭಾರತೀಯ ಕ್ರಿಕೆಟ್‌ಗಾಗಿ ನೀವು ಮಾಡಿರುವ ಸಾಧನೆಗೆ ಎಲ್ಲರೂ ಕೃತಜ್ಞರಾಗಿರುತ್ತಾರೆ.

‘ನಿಮ್ಮ ಹೆಸರುಗಳು ವಿಶ್ವದ ಬ್ಯಾಟಿಂಗ್ ಶ್ರೇಷ್ಠರಲ್ಲಿ ಒಬ್ಬರು, ಶ್ರೇಷ್ಠ ಕ್ರಿಕೆಟಿಂಗ್ ನಾಯಕರಲ್ಲಿ ಮತ್ತು ಖಂಡಿತವಾಗಿಯೂ ವಿಶ್ವ ಆಟ ಕಂಡ ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು ಅಂತ ಹೇಳಿದ್ದಾರೆ.
ನಿಮ್ಮ ಹೆಸರು ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಓರ್ವ ಅದ್ಭುತ ನಾಯಕ, ಬ್ಯಾಟ್ಸ್‌ಮನ್ ಹಾಗೂ ವಿಕೆಟ್​ ಕೀಪರ್​ ಆಗಿ ನಿಮ್ಮ ಸಾಧನೆ ಎಲ್ಲರೂ ಮೆಚ್ಚುವಂಥದ್ದು. 2011 ವಿಶ್ವಕಪ್​ ಫೈನಲ್​​ನಲ್ಲಿ ನಿಮ್ಮ ಬ್ಯಾಟಿಂಗ್​ ಪ್ರದರ್ಶನ ಅದ್ಭುತವಾಗಿತ್ತು.
ನಿಮ್ಮ ಕೇಶ ವಿನ್ಯಾಸ ಹೇಗಿರುತ್ತಿತ್ತು ಅನ್ನೊಂದು ಮುಖ್ಯವಾಗಿ ಇರಲಿಲ್ಲ, ಬದಲಿಗೆ ಗೆಲುವು ಅಥವಾ ಸೋಲಿನಲ್ಲಿ ಒಂದೇ ರೀತಿಯಲ್ಲಿ ನೀವು ಕಾಣಿಸಿಕೊಳ್ಳುತ್ತಿದದ್ದದು ಬೇರೆಯವರಿಗೆ ಸ್ಪೂರ್ತಿ ಅಂಥ ಹೇಳಿದ್ದಾರೆ.
ಸಣ್ಣ ಹಳ್ಳಿಯಿಂದ ಬಂದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವುದರ ಜತೆಗೆ ಭಾರತ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ. 2007ರ ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ತೋರಿರುವ ಪ್ರದರ್ಶನ ಹೆಮ್ಮೆ ತರುವಂಥದ್ದು. ಈ ಸಮಯದಲ್ಲಿ ಸಾಕ್ಷಿ ಹಾಗೂ ಮಗಳು ಜೀವಾ ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದಾರೆ ಎಂಬ ವಿಶ್ವಾಸವಿದೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ’ ಎಂದು ಮೋದಿ ಹಾರೈಸಿದ್ದಾರೆ.

ಮೋದಿ ಬರೆದ ಪತ್ರವನ್ನು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಹೇಂದ್ರ ಸಿಂಗ್‌ ಧೋನಿ, ‘ಕಲಾವಿದ, ಸೈನಿಕ, ಕ್ರೀಡಾಳುಗಳು ಮೆಚ್ಚುಗೆಗಾಗಿ ಹಂಬಲಿಸುತ್ತಾರೆ. ತಮ್ಮ ಪರಿಶ್ರಮ, ತ್ಯಾಗ ಮನ್ನಣೆಗೆ ಪಾತ್ರವಾಗಬೇಕು, ಎಲ್ಲರೂ ಪ್ರಶಂಸಿಸಬೇಕು ಎಂದು ಅಪೇಕ್ಷಿಸುತ್ತಾರೆ. ಮೆಚ್ಚುಗೆ ಮತ್ತು ಶುಭಾಶಯಗಳಿಗಾಗಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಧೋನಿ ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss