spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಸುಂದರ ಕಣ್ಣುಗಳಿಗೆ ನೀವೇ ಹೀಗೆ ಮಾಡಿದರೆ ಹೇಗೆ? ನಿಮ್ಮ ಕಣ್ಣುಗಳ ಆರೋಗ್ಯಕ್ಕೆ ಏನು ಮಾಡಬೇಕು? ಏನು ಮಾಡಬಾರದು?

- Advertisement -Nitte

ಕಣ್ಣು ಎಲ್ಲರ ಬಹುಮುಖ್ಯ ಅಂಗ, ಅತಿ ಸೂಕ್ಷ್ಮ ಕೂಡ. ಕಣ್ಣು ನೋಟ ಎಷ್ಟು ಮುಖ್ಯ ಎಂಬುದನ್ನು ನಾವು ಹೇಳಬೇಕಿಲ್ಲ. ಆದರೆ ಈಗಿನ ದಿನಚರಿಯಲ್ಲಿ ನಾವು ಕಣ್ಣುಗಳ ಆರೋಗ್ಯಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದೀವೆಯೇ? ಕಣ್ಣಿನ ಆರೋಗ್ಯ ಹೊರಗಿನಿಂದ ಮಾಡುವಂತದಲ್ಲ. ಒಳಗಿನಿಂದ ಆಗುವಂಥದ್ದು. ಅಂದರೆ ನಾವು ಸೇವಿಸುವ ಆಹಾರ. ನಡೆದುಕೊಳ್ಳುವ ರೀತಿ ಕಣ್ಣಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಹಾಗಾದರೆ ಕಣ್ಣುಗಳಿಗೆ ನಾವು ಏನು ಮಾಡಬಾರದು? ಕಣ್ಣುಗಳ ಆರೋಗ್ಯ ವೃದ್ಧಿಗೆ ಏನು ಆಹಾರ ತಿನ್ನಬೇಕು ಎಂಬುದನ್ನು ನಾವು ಹೇಳುತ್ತೇವೆ..
ನಾವು ಏನು ಮಾಡಬಾರದು?

  • ಕಡಿಮೆ ಬೆಳಕಿನಲ್ಲಿ ಕೆಲಸ ಮಾಡಬೇಡಿ: ಕೆಲವರಿಗೆ ತಮ್ಮ ಲ್ಯಾಪ್‌ಟಾಪ್,ಕಂಪ್ಯೂಟರ್‌ಗಳಲ್ಲಿ ಹೆಚ್ಚು ಬ್ರೈಟ್‌ನೆಸ್ ಹಿಡಿಸುವುದಿಲ್ಲ. ಇನ್ನು ಕತ್ತಲಲ್ಲಿ ಕುಳಿತು ಸಿನಿಮಾ ನೋಡುವುದು ಈ ಅಭ್ಯಾಸ ಇರುತ್ತದೆ. ಆದರೆ ಇದು ನಿಮ್ಮ ಕಣ್ಣಿಗೆ ಒಳ್ಳೆಯದಲ್ಲ.
  • ಸೂರ್ಯನನ್ನು ನೋಡಬೇಡಿ: ಬರಿಗಣ್ಣಿನಿಂದ ಸೂರ್ಯನನ್ನು ನೋಡಬೇಡಿ. ಒಂದು ಕ್ಷಣಕ್ಕೆ ನೋಡುವುದು ಬೇರೆ. ಬೇಕಂತಲೇ ನಿಮಿಷಗಟ್ಟಲೆ ನೋಡುವುದು ಬೇರೆ ಅದನ್ನು ನಿಲ್ಲಿಸಿ.
  • ಲೆನ್ಸ್‌ನಲ್ಲಿ ಮಲಗಬೇಡಿ: ನಿಮಗೆ ದಿನವೂ ಲೆನ್ಸ್ ತೆಗೆಯುವುದು ಹಾಕುವುದು ಕಷ್ಟವಾಗಬಹುದು. ಆದರೆ ಯಾವುದೇ ಕಾರಣಕ್ಕೂ ಲೆನ್ಸ್‌ನಲ್ಲಿ ಮಲಗಬೇಡಿ.
  • ಕಣ್ಣು ಉಜ್ಜುವುದು: ಕಣ್ಣಿಗೆ ಏನಾದರೂ ಬಿದ್ದರೆ, ಕಿರಿಕಿರಿ ಆದರೆ ಕಣ್ಣು ಉಜ್ಜುವುದು ಸಾಮಾನ್ಯ. ಆದರೆ ಇದು ಕಣ್ಣಿಗೆ ಹಾನಿಕರ ಇದನ್ನು ಬಿಟ್ಟುಬಿಡಿ.
  • ಯಾವುದೋ ಐ ಡ್ರಾಪ್ ಬಳಕೆ ಬೇಡ: ಸಿಕ್ಕ ಸಿಕ್ಕ ಐ ಡ್ರಾಪ್‌ಗಳನ್ನು ಬಳಸಬೇಡಿ. ನಿಮ್ಮ ಕಣ್ಣುಗಳಿಗೆ ನಿಮ್ಮ ವೈದ್ಯರು ಕೊಟ್ಟ ಡ್ರಾಪ್‌ಗಳನ್ನು ಮಾತ್ರ ಬಳಸಿ.
    ಏನು ಮಾಡಬೇಕು?
  • ಮೀನು ಸೇವನೆ: ಮೀನಿನಲ್ಲಿ ಒಮೆಗಾ೩ ಫ್ಯಾಟಿ ಆಸಿಡ್ ಇರುತ್ತದೆ ಇದು ಕಣ್ಣುಗಳಿಗೆ ತುಂಬಾ ಒಳ್ಳೆಯದು.
  • ನಟ್ಸ್ ತಿನ್ನಿ: ನಟ್ಸ್‌ಗಳಲ್ಲಿಯೂ ಒಮೆಗಾ೩ ಫ್ಯಾಟಿ ಆಸಿಡ್ ಇರುತ್ತದೆ. ಗೋಡಂಬಿ,ಪೀನಟ್ಸ್,ವಾಲ್ನಟ್ಸ್ ಇಂಥವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
  • ಸಿಟ್ರಸ್ ಫ್ರೂಟ್ಸ್: ವಿಟಮಿನ್ ಸಿ ಇರುವ ನಿಂಬು,ಕಿತ್ತಳೆ,ದ್ರಾಕ್ಷಿ ಇಂಥ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿ ಇದೆ. ಇವನ್ನು ಸೇವಿಸಿ.
  • ಹಸಿರು ತರಕಾರಿ,ಕ್ಯಾರೆಟ್: ಇವು ಕೇವಲ ಕಣ್ಣಿಗಷ್ಟೇ ಅಲ್ಲದೆ ದೇಹದ ಆರೋಗ್ಯಕ್ಕೂ ಮುಖ್ಯ. ಪ್ರತಿದಿನಿ ಇವನ್ನು ಸೇವಿಸಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss