ಎಷ್ಟೋ ಬಾರಿ ನೋಡಿದ ಮೇಕಪ್ ಕೊಂಡು ಬರುತ್ತೀವಿ. ನಂತರ ಮನೆಗೆ ಬಂದಾಗ ಅದು ನಿಮ್ಮ ಮುಖಕ್ಕೆ ಹೊಂದಾಣಿಕೆ ಆಗುವುದೇ ಇಲ್ಲ. ಫೌಂಡೇಶನ್ ಕ್ರೀಂಗಳನ್ನು ಆನ್ಲೈನ್ ನೋಡಿ ಕೊಳ್ಳುತ್ತೀರಿ ಅಥವಾ ಶಾಪ್ಗೆ ಹೋಗಿ ಕೊಂಡ ಶೇಡ್ ಮನೆಗೆ ಬಂದಮೇಲೆ ಸರಿಯಾಗಿಲ್ಲ ಎನಿಸಬಹುದು. ಯಾವುದೇ ಬ್ಯೂಟಿ ಪ್ರಾಡಕ್ಸ್ ಕೊಳ್ಳುವ ಮುನ್ನ ನಿಮ್ಮ ಮುಖದ ಟೋನ್ ಅರಿಯುವುದು ಮುಖ್ಯ. ನಿಮ್ಮ ಮುಖದ ಟೋನ್ ತಿಳಿಯುವುದಕ್ಕೆ ನಾವು ಸಹಾಯ ಮಾಡುತ್ತೇವೆ!
- ನಿಮ್ಮ ಸ್ಕಿನ್ ಟೋನ್ ಡ್ರೈ ಆಗಿದ್ದರೆ..
ಮೊದಲು ನಿಮ್ಮ ಮುಖ ತೊಳೆದುಕೊಳ್ಳಿ. ಸ್ವಲ್ಪ ಒಣಗಲು ಬಿಡಿ. ಅರ್ಧಗಂಟೆ ನಂತರ ಒಮ್ಮೆ ನಗಲು ಯತ್ನಿಸಿ. ನಿಮ್ಮ ಮುಖ ಗಟ್ಟಿ ಎನಿಸಿದರೆ, ಮುಖ ಒಡೆದಂತೆ ಕಂಡರೆ ನಿಮ್ಮದು ಡ್ರೈ ಸ್ಕಿನ್. - ನಿಮ್ಮ ಸ್ಕಿನ್ ಟೋನ್ ಮಿಕ್ಸ್ ಆಗಿದ್ದರೆ..
ನಿಮ್ಮದು ಮಿಕ್ಸ್ ಟೋನ್ ಆಗಿದೆಯಾ ಎಂದು ಹೀಗೆ ಪರೀಕ್ಷಿಸಿ. ಮುಖ ತೊಳೆದ ಅರ್ಧ ಗಂಟೆ ನಂತರ ನಿಮ್ಮ ಹಣೆ, ಮೂಗಿನ ಬಳಿ ಮಾತ್ರ ಶೈನಿಂಗ್ ಇದ್ದು, ಎಣ್ಣೆಯಂತೆ ಅನಿಸಿದರೆ ನಿಮ್ಮದು ಮಿಕ್ಸ್ಡ್ ಸ್ಕಿನ್ ಟೋನ್. - ನಿಮ್ಮದು ಆಯ್ಲಿ ಸ್ಕಿನ್ಟೋನ್ ಆಗಿದ್ದರೆ..
ನಿಮ್ಮ ಸ್ಕಿನ್ ಆಗಿದ್ದರೆ ಮುಖ ತೊಳೆದ ಅರ್ಧ ಗಂಟೆಗೆ ಮುಖ ನೋಡಿಕೊಳ್ಳಿ ಇಡೀ ಮುಖವೇ ಎಣ್ಣೆ ಅನಿಸುತ್ತದೆ. ಎಲ್ಲ ಕಡೆಯೂ ಶೈನಿಂಗ್ ಆಗಿರುತ್ತದೆ. ಗಮನಿಸಿ ಮುಖ ತೊಳೆದ ಮೇಲೆ ಸ್ಕಿನ್ ಟೋನ್ ಪರೀಕ್ಷಿಸುವಾಗ ಮುಖಕ್ಕೆ ಏನೂ ಹಚ್ಚಿರಬಾರದು. - ಡ್ರೈ ಸ್ಕಿನ್ ಕೇರ್ ಹೇಗೆ ಮಾಡಬೇಕು?
- ಜಾಸ್ತಿ ಹೊತ್ತು ಸ್ನಾನ ಮಾಡುವುದು, ತುಂಬಾ ಬಿಸಿ ನೀರಲ್ಲಿ ಸ್ನಾನ ಮಾಡುವುದು ಬೇಡ.
- ಮುಖ ತೊಳೆದ ನಂತರ ಮಾಸ್ಚರೈಸರ್ ಹಚ್ಚಲೇಬೇಕು.
- ಮುಖ ಹಸಿಯಿದ್ದಾಗ ಹಾಗೇ ಬಿಡಬಾರದು. ಮುಖ ಹಸಿಯಿದ್ದಾಗಲೇ ಮಾಸ್ಚರೈಸರ್ ಹಚ್ಚಿಬಿಡಿ.
- ಮಿಕ್ಸ್ ಸ್ಕಿನ್ ಕೇರ್ ಹೇಗೆ ಮಾಡುವುದು?
- ಸರಿಯಾದ ಕ್ಲೆನ್ಸರ್ ಬಳಸಿ
- ನಿಮ್ಮ ಸ್ಕಿನ್ ಮಿಕ್ಸ್ ಇರುವುದರಿಂದ ಡ್ರೈ ಸ್ಕಿನ್ಗೆ ಬಳಸುವ ಪ್ರಾಡಕ್ಟ್ಗಳನ್ನು ಬಳಸಬೇಡಿ.
- ವಾರಕ್ಕೆ ಎರಡು ಬಾರಿ ಮಾಸ್ಕ್ ಹಾಕಿ.
- ಆಯ್ಲಿ ಸ್ಕಿನ್ ಕೇರ್ ಹೇಗೆ ಮಾಡುವುದು?
- ದಿನವೂ ಕ್ಲೆನ್ಸರ್, ಟೋನರ್ ಹಾಗೂ ಮಾಸ್ಚರೈಸರ್ ದಿನಕ್ಕೆ ಎರಡು ಬಾರಿ ಮಾಡಿ.
- ಆಯಿಲ್ ಫ್ರೀ ಸ್ಕ್ರಬ್ ಬಳಸಿ
- ಫೇಶಿಯಲ್ ಮಾಸ್ಕ್ ವಾರಕ್ಕೆ ಒಂದು ಬಾರಿ ಮಾಡಿ.