Thursday, August 11, 2022

Latest Posts

ನಿಮ್ಮ ಹಲ್ಲು ಹಳದಿ ಬಣ್ಣದಲ್ಲಿದೆಯೇ? Smile ಮಾಡುವುದಕ್ಕೂ ಮುಜಗರವೆನಿಸುತ್ತಿದೆಯೇ? ಹೀಗೆ ಮಾಡಿದರೆ ಹಲ್ಲು ಬಿಳಿ ಬಣ್ಣಕ್ಕೆ ತಿರುಗುತ್ತದೆ!..

ತುಂಬಾ ಜನಕ್ಕೆ ಈ ಸಮಸ್ಯೆ ಇರುತ್ತದೆ. ಹಲ್ಲು ಹಳದಿ ಬಣ್ಣದಲ್ಲಿ ಇರುತ್ತದೆ. ಹಲ್ಲನ್ನು ಎಷ್ಟೇ ಉಜ್ಜಿದರೂ ಹಳದಿ ಬಣ್ಣ ಹಾಗೇಯೇ ಇರುತ್ತದೆ. ಸ್ಮೈಲ್ ಮಾಡುವುದಕ್ಕೂ ಮುಜುಗರವೆನಿಸುತ್ತದೆ. ಯೋಚಿಸಬೇಡಿ. ಈ ಕೆಳಗೆ ಬರೆದಿರುವ ಟಿಪ್ಸ್ ಫಾಲೋ ಮಾಡಿದರೆ ಹಲ್ಲು ಬಿಳಿ ಬಣ್ಣಕ್ಕೆ ತಿರುಗುತ್ತದೆ.

  • ನೀವು ಬಳಸುವ ಪೇಸ್ಟ್‌ಗೆ ಬೇಕಿಂಗ್ ಸೋಡಾ ಅಥವಾ ಅಡಿಗೆ ಸೋಡಾವನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ನಂತರ ಅದರಿಂದ ಹಲ್ಲು ತಿಕ್ಕಿ. ದಿನಕ್ಕೆ ಎರಡು ಬಾರಿ ತಿಕ್ಕಿದರೂ ಸಾಕು. ಹಲ್ಲು ಒಂದೇ ತಿಂಗಳಲ್ಲಿ ಬಿಳಿಯಾಗುತ್ತದೆ,.
  • ಇದ್ದಿಲು ಹಲ್ಲು ಬಿಳಿ ಬಣ್ಣಕ್ಕೆ ತರಲು ರಾಮಬಾಣದಂತೆ. ಇದ್ದಿಲನ್ನು ಕುಟ್ಟಿ ಪುಡಿ ಮಾಡಿಕೊಳ್ಳಬಹುದು ಅಥವಾ ಹಾಗೆಯೂ ತಿಕ್ಕಬಹುದು. ಇದ್ದಿಲಿನ ಒಂದು ಪೀಸ್‌ನಿಂದ ಚೆನ್ನಾಗಿ ತಿಕ್ಕಿ. ದಿನಕ್ಕೆ ಎರಡು ಹೊತ್ತು ತಿಕ್ಕಿದರೂ ಸಾಕು.
  • ಅಡಿಗೆ ಸೋಡಾ ಅಥವಾ ಬೇಕಿಂಗ್ ಸೋಡಾ, ಅದಕ್ಕೆ ಉಪ್ಪು ಮತ್ತು ಲಿಂಬು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಟೂತ್ ಬ್ರೆಷ್‌ನಿಂದ ಉಜ್ಜಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ
  • ಎಳ್ಳಿನ ಬೀಜಗಳನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತರ ಆ ಪುಡಿಯಿಂದ ಹಲ್ಲನ್ನು ಉಜ್ಜಿ. ನೀವು ಇದನ್ನು ಎರಡು ವಾರ ಟ್ರೈ ಮಾಡಿದರೂ ಸಾಕು ಹಲ್ಲು ಪಳ ಪಳ ಹೊಳೆಯುತ್ತದೆ.
  • ಉಪ್ಪು ಹಲ್ಲಿನ ಪ್ರತಿಯೊಂದು ಸಮಸ್ಯೆಗೂ ಒಳ್ಳೆಯ ಔಷಧ. ದಂತ ಕುಳಿ ಸಮಸ್ಯೆಗೆ ಕೂಡ. ಹಲ್ಲು ಬಿಳಿ ಬಣ್ಣಕ್ಕೆ ತರುವುದಕ್ಕೂ ಕೂಡ. ನೀವು ದಿನವೂ ಬಳಸುವ ಪೇಸ್ಟ್‌ನಲ್ಲಿ ಉಪ್ಪನ್ನು ಸೇರಿಸಿಕೊಂಡು ಹಲ್ಲು ಉಜ್ಜಿದರೆ ಹಲ್ಲು ಬೇಗ ಬಿಳಿಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss