Thursday, August 11, 2022

Latest Posts

ನಿಮ್ಹಾನ್ಸ್‌ಗೂ ತಟ್ಟಿದ ಕೊರೋನಾ ಭೀತಿ: 24 ವರ್ಷದ ಯುವತಿಯಲ್ಲಿ ಸೋಂಕು

 ಬೆಂಗಳೂರು: ಏಜನ್ಸಿ  ಮುಖಾಂತರ ನಿಮ್ಹಾನ್ಸ್‌ನ ಇಂಜಿನಿಯರಿಂಗ್ ವಿಭಾಗದಲ್ಲಿ  ಕಚೇರಿ ಸಹಾಯಕಿ ಯಾಗಿ ಕಾರ್ಯನಿರ್ವಹಿಸುತ್ತಿರುವ ೨೪ ವರ್ಷದ ಯುವತಿಯಲ್ಲಿ ಸೋಂಕು ಕಾಣಿಸಿ ಕೊಂಡಿದೆ. ಜೂ.6 ರಂದು ಮಾನಸಿಕ ಅಸ್ವಸ್ಥೆಗೆ ಸೋಂಕು ಪತ್ತೆಯಾದಾಗ ಆಕೆಯ ಸಂಪರ್ಕದಲ್ಲಿದ್ದ  ೨೪ ಮಂದಿ ಕ್ವಾರಂಟೈನ್ ಮಾಡಲಾಗಿತ್ತು.ಅವರಲ್ಲಿ  6 ಮಂದಿ ಸೋಂಕು ದೃಢವಾಗಿತ್ತು. ಅವರಲ್ಲಿ ಓರ್ವ ಯುವತಿ ಹೊಸ
ದಾಗಿ ಸೋಂಕು ಪತ್ತೆಯಾದ  ಸಿಬ್ಬಂದಿ ಸಹೋದರಿಯಾಗಿದ್ದಾರೆ. ಈಕೆಯ ಪ್ರಾಥಮಿಕ ಸಂಪರ್ಕದಲ್ಲಿರುವವ 11 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.ಇಂಜಿನಿಯರಿಂಗ್ ವಿಭಾಗದ ಕಟ್ಟಡವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
317 ಮಂದಿಯಲ್ಲಿ ಸೋಂಕು:
ರಾಜ್ಯದಲ್ಲಿ ಒಂದೇ ದಿನ 317 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ ೭೫೩೦ ಆಗಿದೆ. ೬ಮಂದಿ ಮಹಾಮಾರಿಗೆ ಬಲಿಯಾಗಿದ್ದು,ಸಾವಿನ ಸಂಖ್ಯೆ ೯೪ ಆಗಿದ್ದು ನಾಲ್ವರು ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ. ೭೨ ಮಂದಿ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾಘಟಕದಲ್ಲಿ ಇರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss