Sunday, June 26, 2022

Latest Posts

ನಿಯಂತ್ರಣಕ್ಕೆ ಬಾರದ ಕೋವಿಡ್: ಮತ್ತೆ ಕಟ್ಟುನಿಟ್ಟಿನ ರಾತ್ರಿ ಕರ್ಫ್ಯೂ ಜಾರಿ

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಕೋವಿಡ್ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜಸ್ತಾನ ಸರಕಾರ, ತನ್ನ ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿ ಆದೇಶ ನೀಡಿದೆ.

ಜೈಪುರ, ಜೋಧ್‌ಪುರ, ಕೋಟಾ, ಬಿಕನೇರ್, ಉದಯಪುರ, ಅಜ್ಮೀರ್, ಅಲ್ವಾರ್ ಮತ್ತು ಭಿಲ್ವಾರಾ ಜಿಲ್ಲೆಗಳಲ್ಲಿ  ರಾತ್ರಿ 8 ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಕಟ್ಟುನಿಟ್ಟಿನ ಅನುಷ್ಟಾನಕ್ಕೆ ಸರಕಾರ ಸೂಚನೆ ನೀಡಿದೆ.

ಈ ಜಿಲ್ಲೆಗಳು ಕೋವಿಡ್ ನಿಂದ ಹೆಚ್ಚಿನ ಸಂಕಷ್ಟಕ್ಕೊಳಗಾಗಿವೆ. ಇಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುವ ಕ್ರಮಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ರಾತ್ರಿ ಕರ್ಫ್ಯೂ ಸಮಯದಲ್ಲಿ, ವಿವಾಹ ಸಮಾರಂಭಕ್ಕೆ ಹೋಗುವವರಿಗೆ, ಔಷಧಿಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಜನರಿಗೆ ಮತ್ತು ಬಸ್, ರೈಲು ಮತ್ತು ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss