Sunday, July 3, 2022

Latest Posts

ನಿಯಂತ್ರಣಕ್ಕೆ ಬಾರದ ಕೋವಿಡ್: ಮತ್ತೆ ಖಡಕ್ ಲಾಕ್ ಡೌನ್?

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಕೋರೋನಾ ಆರ್ಭಟ ನಿಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಲಾಕ್‌ಡೌನ್ ಮುಂದುವರಿಸುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ.
ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ಕೊರೋನಾ ವ್ಯಾಪಕವಾಗಿ ಪಸರಿಸುತ್ತಿದ್ದು, ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮುಂದುರಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಇದಲ್ಲದೆ  ಕ್ರಿಸ್‌ಮಸ್ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೨೦ ಲಕ್ಷ ದಾಟಿ ಆತಂಕ ಹುಟ್ಟಿಸಿದ್ದು, ಇನ್ನು ಹೊಸ ವರ್ಷಾಚರಣೆ ಬಳಿಕ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಧ್ಯ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ರೋಗಿಗಳಿಗೆ ಆಸ್ಪತ್ರೆಗಳ ತುರ್ತು ನಿಗಾ ಘಟಕಗಳಲ್ಲಿ ಹಾಸಿಗೆಗಳ ಕೊರv ಕಾಣಿಸಿಕೊಂಡಿದೆ. ಇದೆಲ್ಲವುಗಳಿಗೆ ಬ್ರೇಕ್ ಹಾಕಲು ಸರಕಾರ ಮತ್ತೆ ಲಾಕ್‌ಡೌನ್ ಆದೇಶ ನೀಡುವ ಸಾಧ್ಯತೆ ಗೋಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss