Wednesday, June 29, 2022

Latest Posts

ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಲಾರಿ: 20 ಟನ್ ರಸಗೊಬ್ಬರ ನೀರುಪಾಲು

ಉಡುಪಿ: ರಸಗೊಬ್ಬರ ಸಾಗಾಟದ ಲಾರಿಯೊಂದು ಬಾವಿಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.‌

ನೆರೆಯ ದಕ್ಷಿಣ ಕನ್ನಡ‌ ಜಿಲ್ಲೆಯಿಂದ‌ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಟಿಎಪಿಎಂಸಿಗೆ ಬಂದ ರಸಗೊಬ್ಬರ ತುಂಬಿದ ಲಾರಿಯು, ಗೋಡೌನ್ ಸಮೀಪ ರಿವರ್ಸ್ ತೆಗೆಯುವ ವೇಳೆ ನಿಯಂತ್ರಣ ತಪ್ಪಿ 30 ಅಡಿ ಆಳದ ತೆರೆದ ಬಾವಿಗೆ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.‌ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ನೂರಾರು ಮಂದಿ ಬಂದು ಬಾವಿಗೆ ಬಿದ್ದ ಲಾರಿಯನ್ನು ವೀಕ್ಷಿಸುತ್ತಿದ್ದಾರೆ.

ಲಾರಿ ಬಾವಿಗೆ ಬಿದ್ದ ಪರಿಣಾಮ 1.36 ಲಕ್ಷ ರೂ. ಮೌಲ್ಯದ 20ಟನ್ ರಸಗೊಬ್ಬರ ನೀರುಪಾಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss