Friday, September 30, 2022

Latest Posts

ನಿಯಮ ಉಲ್ಲಂಘಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ 85 ವಾಹನಗಳ ವಿರುದ್ಧ ಕೇಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಜಿಲ್ಲೆಯ ನಾನಾ ಭಾಗಗಳಲ್ಲಿ ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ 85 ವಾಹನಗಳ ವಿರುದ್ಧ ಜಿಲ್ಲಾ ಪೊಲೀಸರು 29 ಕೇಸ್ ದಾಖಲಿಸಿದ್ದಾರೆ.
ನಿಪ್ಪಾಣಿ, ಮೂಡಲಗಿ ತಾಲೂಕಿನ ಸೇರಿದಂತೆ ಬೇರೆ ಕಡೆ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಜಿಲ್ಲಾ ಪೊಲೀಸರು ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ 85 ವಾಹನಗಳ ವಿರುದ್ಧ 129 ಕೇಸ್ ದಾಖಲಿಸಿ 45,800 ರೂ.ದಂಡ ವಿಧಿಸಿದ್ದಾರೆ.
ಶಾಲಾ ವಾಹನಗಳ ಚಾಲಕರು ಸಂಚಾರಿ ನಿಯಮ ಉಲ್ಲಂಘಿಸಿ ಮಕ್ಕಳನ್ನು ಸೀಟ್‍ಗಿಂತ ಹೆಚ್ಚಾಗಿ ಕರೆದುಕೊಂಡು ಹೋದರೆ ಅಂತಹ ವಾಹನಗಳನ್ನು ಮುಂದಿನ ದಿನಗಳಲ್ಲಿ ಜಪ್ತಿ ಮಾಡಲಾಗುವುದು ಎಂದು ಎಸ್‍ಪಿ ಡಾ.ಸಂಜೀವ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!