Wednesday, June 29, 2022

Latest Posts

ನಿರಂತರ ಮಳೆಯಿಂದ ಬೀದರ ನಗರದಲ್ಲಿ ಜನ ಜೀವನ ಅಸ್ತವ್ಯಸ್ತ: ರಾತ್ರಿವಿಡೀ ವಿದ್ಯುತ್ ಕಣ್ಮುಚ್ಚಾಲೆ

ವಿಶೇಷ ವರದಿ

ಬೀದರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ನಿರಂತವಾಗಿ ಸುರಿಯುತ್ತಿರುವ ಮಳೆಯಿಂದ ಬೀದರ ನಗರದ ಪ್ರಮುಖ ರಸ್ತೆಗಳು, ನಗರದ ಗಾಂಧಿಗಂಜ ಪ್ರದೇಶದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕರು, ರಸ್ತೆ ಮೇಲೆ ಓಡಾಡಲು ಹರಹಾಸಹ ಪಡುತ್ತಿದ್ದಾರೆ. ಬೀದರ ನಗರದ ಬಹುತೇಕ ಕಡೆ ರಸ್ತೆಗಳು ಚರಂಡಿ ನೀರಿನಿಂದ ತುಂಬಿ ಹೋಗಿವೆ. ಹೀಗಾಗಿ ವಾಹನ ಸಂಚಾರ ಸಹ ಅಸ್ತವ್ಯಸ್ಥಗೊಂಡಿದೆ. ಮಂಗಳವಾರ ರಾತ್ರಿವಿಡಿ ವಿದ್ಯುತ್ ಕಣ್ಮುಚಾಲೆಯಿಂದ ಜನರು ತತ್ತರಿಸಿ ಹೋದರು.
ಬೀದರ ನಗರದಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಬೀದರ ನಗರದ ಪ್ರಮುಖ ರಸ್ತೆಗಳಲ್ಲಿರುವ ಅಂಬೇಡ್ಕರ್ ವೃತ್ತ, ಶಿವಾಜಿ ಚೌಕ್, ಭಗತಸಿಂಗ ಚೌಕ್, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಹಾರೂರಗೇರಿ ಕಮಾನ, ಕಿತ್ತೂರ ರಾಣಿ ಚೆನ್ನಮ್ಮಾ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳ ರಸ್ತೆಗಳ ಮೇಲೆ ನೀರು ನಿಂತ ಕಾರಣ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಬೀದರ ನಗರದ ಭಗತಸಿಂಗ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತಕ್ಕೆ ಅಶೋಕಾ ಹೋಟಲ್ ಮುಂಭಾಗದಿಂದ ಹೋಗುವ ದಾರಿಯಲ್ಲಿರುವ ರೇಲ್ವೆ ಮೇಲ್ಸುತೆಯ ಕೆಳಗಡೆ ನೀರು ನಿಂತ ಕಾರಣ ಸಂಚಾರಕ್ಕೆ ತೀವ್ರ ಅಡಚಣೆಯನ್ನುಂಟಾಗುತ್ತಿದೆ. ಈ ಮೇಲ್ಸುತೆಯ ಕೆಳಗಡೆ ನೀರು ಹರಿಯುತ್ತಿರುವ ಕಾರಣ ಮಳೆ ಬಂದರೆ ಸಾಕೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಈ ರಸ್ತೆಯಲ್ಲಿ ವಾಹನ ಓಡಿಸಬೇಕಾದರೆ, ಜೀವ ಅಂಗೈಯಲ್ಲಿ ಹಿಡುದುಕೊಂಡೇ ಓಡಿಸಬೇಕಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ ಈ ರಸ್ತೆ ಹದಗೆಟ್ಟು ಹೋಗಿದೆ.
ಬೀದರ ನಗರದ ಪ್ರಮುಖ ವಾಣಿಜ್ಯ ಹಾಗೂ ವ್ಯಾಪಾರ ಕೇಂದ್ರವಾಗಿರುವ ಗಾಂಧಿಗಂಜಿನಲ್ಲಿಯೂ ಚರಂಡಿ ನೀರು ರಸ್ತೆಗಳ ಮೇಲೆ ನಿಂತ ಕಾರಣ ದೊಡ್ಡ ದೊಡ್ಡ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗಾಂಧಿಗಂಜಿನ ಅಡತಗಳಿಗೆ ಬಂದ ರೈತರು ಹಾಗೂ ದಿನಸಿ ಸಾಮಾನು ಖರೀದಿಸಲು ಬಂದಿರುವ ಸಾರ್ವಜನಿಕರು ಮೊಳಕಾಲವರೆಗೆ ರಸ್ತೆಯ ಮೇಲೆ ನಿಂತ ಕಾರಣ ಓಡಾಡಲು ಆಗದೇ ಹೈರಾಣಾಗಿದ್ದಾರೆ.
ಈ ಸಂದರ್ಭದಲ್ಲಿ ಬೀದರ ನಗರದ ಹಾರೂರಗೇರಿಯ ಘಾಳೆಪ್ಪ ಕೆ. ಲಾಧಾಕರ್ ಅವರು ಮಾತನಾಡುತ್ತ, ಬೀದರ ನಗರದ ಹೃದಯ ಭಾಗದಲ್ಲಿರುವ ಗಾಂಧಿಗಂಜಿನ ಬುದ್ಧ ವಿಹಾರ ಮಂದಿರದ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಚರಂಡಿಯ ಹೊಲಸು ನೀರು ಮಂದಿರ ಆವರಣದೊಳಗೆ ನುಗ್ಗಿದೆ. ಈ ಕೂಡಲೇ ಬೀದರ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಬೀದರ ನಗರಸಭೆ ಅಧಿಕಾರಿಗಳು, ಬೀದರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು ಹಾಗೂ ಅಂಬೇಡ್ಕರ್ ಮತ್ತು ಬುದ್ಧ ಅನುನಾಯಿಗಳು ಈಕಡೆ ಗಮನ ಹರಿಸಿ ಬುದ್ಧ ವಿಹಾರದಲ್ಲಿ ನೀರು ನುಗ್ಗದಂತೆ ಮಾಡಬೇಕು ಎಂದರು.
ಬೀದರ ನಗರದಲಗದಲ್ಲಿ ಕೆಲ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅರ್ಭಟ ಹೆಚ್ಚಾಗಿದೆ.
ಬೀದರ ನಗರದಲ್ಲಿ ಸೋಮವಾರ ಬೆಳಗ್ಗೆ ಮಂಜು ಮಿಶ್ರಿತ ಮಳೆ ಇತ್ತು. ಮಧ್ಯಾಹ್ನ ದಟ್ಟ ಮೋಡಗಳು ಆವರಿಸಿ ಆರ್ಧಗಂಟೆ ಮಳೆ ಅಬ್ಬರಿಸಿತ್ತು. ಬೀದರ ನಗರದ ಹಳೆ ಪ್ರದೇಶದ ಮಾರುಕಟ್ಟೆ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ರಸ್ತೆ ಮೇಲೆ ನಿಂತುಕೊಂಡಿತ್ತು. ತಗ್ಗು ಪ್ರದೇಶದಲ್ಲಿರುವ ಕೆಲ ಮನೆಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸಬೇಕಾಯಿತು.
ಬೀದರ ನಗರದ ಬೊಮ್ಮಗೊಂಡೇಶ್ವರ ವೃತ್ತ ಸಮೀಪ ರೇಲ್ವೆ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲೂ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿತ್ತು. ರೋಟರಿ ವೃತ್ತ, ಹಾರೂರಗೇರಿ ಕಮಾನ, ಕೆ.ಇ.ಬಿ. ಕಚೇರು ಮುಂಭಾಗದ ರಸ್ತೆ ಮೇಲೂ ನೀರು ನಿಂತುಕೊಂಡಿತ್ತು.
ಮಂಗಳವಾರ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ ಶುರುವಾಗಿತ್ತು. ಮಧ್ಯಾಹ್ನದಿಂದ ಮಳೆ ದೊಡ್ಡ ಪ್ರಮಾಣದಲ್ಲಿ ಬೀಳಲುತ್ತಲೇ ಇತ್ತು. ಮಂಗಳವಾರ ರಾತ್ರಿ-ಬೆಳಗಿನವರೆಗೆ ಮಳೆಯಾರನ ಅಬ್ಬರ ನಿಂತಲೇ ಇಲ್ಲ. ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಬಿರುಸಿನ ಗಾಳಿ ಮಾತ್ರ ಜೋರಾಗಿಯೇ ಇತ್ತು. ಮತ್ತೇ ಬೆಳಗ್ಗೆ 7 ಗಂಟೆಯಿಂದ ಜಿಟಿ ಜಿಟಿ ಮಳೆಯಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೆ-ಮುಂದೆ ನೋಡುತ್ತಿದ್ದರು. ಅಗತ್ಯ ಕೆಲಸವಿರುವ ಜನರು ಮಾತ್ರ ಮನೆಯಿಂದ ಹೊರಗಡೆ ಹೋಗುವುದು ಕಂಡು ಬಂತು.
ಮಂಗಳವಾರ ರಾತ್ರಿ ಮಳೆಯಿಂದ ಹೈರಾಣಗಿದ್ದ ಜನರಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಕಣ್ಮುಚ್ಚಾಲೆ ಜನರನ್ನು ಮತ್ತಷ್ಡು ಹೈರಾಣ ಮಾಡಿತ್ತು.
ಬುಧವಾರ ಬೆಳಗ್ಗೆಯಿಂದಲೂ ವಿದ್ಯುತ್ ಕಣ್ಮುಚ್ಚಾಲೆ ಹಾಗೇ ಇತ್ತು. ಬೆಳ್ಳಂಬೆಳಗ್ಗೆ ಈ ಸುದ್ದಿ ಟೈಪ್ ಮಾಡುವಾಗ ಸುಮಾರು 4-5 ಸಲ ವಿದ್ಯುತ್ ಕಣ್ಮುಚ್ಚಾಲೆ ಆಟ ಆಡುತ್ತಲೇ ಇತ್ತು.
ಬೀದರ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಅತಿವೃಷ್ಟಿಯಿಂದ ರೈತರ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ. ಇನ್ನೂ ತೂಫಾನ ಮಳೆ ಬೀದರ ಜಿಲ್ಲೆಯಲ್ಲಿ ಮುಂದುವರೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss