Sunday, August 14, 2022

Latest Posts

ಡ್ರಗ್ಸ್ ದಂಧೆ: ನಿರೂಪಕಿ, ನಟಿ ಅನುಶ್ರೀಗೂ ಮಂಗಳೂರು ಪೊಲೀಸರಿಂದ ನೋಟೀಸ್

ಮಂಗಳೂರು: ಡ್ರಗ್ಸ್ ಮಾರಾಟ ಮತ್ತು ಸೇವನೆ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪ್ರಕರಣದ ಜಾಡು ಹಿಡಿದ ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೀಗ ಆ್ಯಂಕರ್ ಅನುಶ್ರೀ ಅವರ ಹೆಸರೂ ತಳಕು ಹಾಕಿಕೊಂಡಿದ್ದು, ಮಂಗಳೂರು ಪೊಲೀಸರಿಂದ ಅನುಶ್ರೀಗೆ ನೋಟೀಸ್ ನೀಡಲಾಗಿದೆ.
ಸದ್ಯ ವಾಟ್ಸಾಪ್ ಮೂಲಕ ಅನುಶ್ರೀಗೆ ನೋಟಿಸ್ ಕಳುಹಿಸಲಾಗಿದೆ.ಅಲ್ಲದೆ ಅನುಶ್ರೀಗೆ ಖುದ್ದು ನೋಟೀಸ್ ನೀಡಲು ಸಿಸಿಬಿ ತಂಡ ಬೆಂಗಳೂರಿಗೆ ತೆರಳಿದೆ.
ಅನುಶ್ರೀಯ ಜೊತೆ ಪಾರ್ಟಿ ಮಾಡಿದ್ದಾಗಿ ಕಿಶೋರ್ ಅಮನ್ ಶೆಟ್ಟಿಯ ಆಪ್ತಸ್ನೇಹಿತ ತರುಣ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಿಸಿಬಿ ನೋಟೀಸ್ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss