ನಿರ್ಭಯಾ ಅತ್ಯಾಚಾರದ ಆರೋಪಿ: ವಿನಯ್  ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಕ್ಯುರೇಟಿವ್ ಅರ್ಜಿ ಸಲ್ಲಿಸಲಾಗಿದೆ.

0
209

ನವದೆಹಲಿ: 2012ರಲ್ಲಿ ನಡೆದ ಗ್ಯಾಂಗ್ ರೇಪಿನ ಅಪರಾಧಿ ವಿನಯ್ ಕುಮಾರ್ ಶರ್ಮ ಗುರುವಾರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಕ್ಯುರೇಟಿವ್ ಅರ್ಜಿ(ಕುಂದು ಕೊರತೆಗಳನ್ನು ಸರಿಪಡಿಸಿಕೊಳ್ಳುವ ಅರ್ಜಿ) ಸಲ್ಲಿಸಿರುವುದಾಗಿ ವರದಿಯಾಗಿದೆ.

ಅಪರಾಧಿಗಳಾದ ವಿನಯ್,ಮುಖೇಶ್, ಪವನ್ ಕುಮಾರ್,ಅಕ್ಷಯ್ ಗೆ ಸುಪ್ರೀಂ ಕೋರ್ಟ್ ಮರಣ ದಂಡನೆ ವಿಧಿಸಿದ್ದು, ಜನವರಿ 22ರ ಬೆಳಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುವುದೆಂಬ ತೀರ್ಪು ಹೊರಡಿಸಿತ್ತು.

ನಾಲ್ವರು ಅಪರಾಧಿಗಳಲ್ಲಿ ವಿನಯ್ ಸುಪ್ರೀಂ ಕೋರ್ಟ್ ನ ಫಾಸಿ ಆಜ್ಞೆಯ (ಡೆತ್ ವಾರೆಂಟ್) ವಿರುದ್ದ ಕ್ಯುರೇಟಿವ್ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಲು ಪಟಿಯಾಲ ಹೌಸ್ ಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ. ಈ ವೇಳೆಯಲ್ಲಿ ಅಪರಾಧಿಗಳು ಸುಪ್ರೀಂ ಕೋರ್ಟ್ ಅಥವಾ ರಾಷ್ಟ್ರಪತಿಗಳಿಗೆ ಕ್ಷಮದಾನ ಪತ್ರ ಸಲ್ಲಿಸ ಬಹುದಾಗಿದ್ದು, ಇದರಲ್ಲಿ ಸುಪ್ರೀಂ ಕೊರ್ಟ್ ಅಥವಾ ರಾಷ್ಟ್ರಪತಿಗಳು ಅರ್ಜಿಯನ್ನು ಸ್ವೀಕರಿಸಿದರೆ ಡೆತ್ ವಾರೆಂಟ್ ಗೆ ತಡೆಬೀಳಲಿದೆ.

ಇದು ಅಪರಾಧಿಗಳಿಗೆ ಇರುವ ಕೊನೆಯ ಕಾನೂನಿನ ಅವಕಾಶವಾಗಿದ್ದು, ಅಪರಾಧಿಗಳು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಬಳಸಲು 2ವಾರದ ಸಮಯಾವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here