Monday, July 4, 2022

Latest Posts

ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಹಣ ಪಡೆದು ವಂಚನೆ ಮಾಡಿರುವ ಆರೋಪ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಿರ್ಮಾಪಕ ಎಸ್.ಎ. ಪುಟ್ಟರಾಜು ಮಂಜು ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. 2018 ರಲ್ಲಿ  ರಾಜಗೋಪಾಲ್ ಬಿ.ಎಂ ಹೊಸಕೋಟೆ (ತಾ) ಸೊಣ್ಣೇನಹಳ್ಳಿ (ಗ್ರಾ) ಸರ್ವೆ ನಂ 7 /3 ರ 18.3/4 ಗುಂಟೆ ಜಮೀನನ್ನು ಮಾರುತ್ತಿದ್ದರು. ಈ ಕುರಿತಾಗಿ ಅಡ್ವಾನ್ಸ್ ನೀಡಿದ್ದೇನೆ.
ಅಷ್ಟರಲ್ಲಿ ಕೆ.ಮಂಜು ಅಗ್ರಿಮೆಂಟ್ ಮಾಡಿ ಕೊಂಡಿದ್ದಾರೆ. ಬಳಿಕ ರಾಜಗೋಪಾಲ್ ಬಿ.ಎಂ, ರಮೇಶ್ ಬಾಬು, ವಿಜಯಲಕ್ಷ್ಮಿ ಸೇರಿ ರಿಜಿಸ್ಟರ್ ಮಾಡಿ ಕೊಡುವುದಾಗಿ ಹೇಳಿಕೆ ನೀಡಿದ್ದರು. ಮಂಜು 1ಕೋಟಿ 10.5 ಲಕ್ಷ ಹಾಗೂ ರಾಜಗೋಪಾಲ್ 68 ಲಕ್ಷ ಹಣ ಪಡೆದಿದ್ದಾರೆ. ಇನ್ನೂ ವಾಪಾಸ್ಸು ನೀಡಿಲ್ಲ. ಕೇಳಲು ಹೋದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪುಟ್ಟರಾಜು ದೂರಿನಲ್ಲಿ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss