ಬೆಂಗಳೂರು : ಮಾರಕ ಕೊರೊನಾ ಸೋಂಕು ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದು, ರಾಜ್ಯದ ಜನತೆ ಆತಂಕದಲ್ಲಿದೆ. ಇದೀಗ ಜೆಡಿಎಸ್ ವಿಧಾನಪರಿಷತ್ ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೂ ಕೊರೊನಾ ಸೋಂಕು ಧೃಡವಾಗಿದೆ.
ಸಂದೇಶ್ ನಾಗರಾಜ್ ಅವರು ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ನಿನ್ನೆ ಅವರು ಕೊರೊನಾ ಪರೀಕ್ಷೆಗೊಳಗಾಗಿದ್ದರು. ಬಳಿಕ ವರದಿಯಲ್ಲಿ ಪಾಸಿಟಿವ್ ಧೃಡವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸಂದೇಶ್ ನಾಗರಾಜ್ ಕುಟುಂಬದ ಎಲ್ಲರೂಈ ಕೂಡ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.