ತುಮಕೂರು: ಲಿಂಗೈಕ್ಯ ಸಿದ್ಧ ಗಂಗಾಮಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಸಿದ್ಧ ಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧ ಲಿಂಗ ಸ್ವಾಮಿಗಳ ಆಶೀರ್ವಾದ ಪಡೆಯುವ ಮೂಲಕ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಮಹಾದೇವ ಬಿದರಿ ಅವರು ತಮ್ಮ 67ನೇ ಜನುಮ ದಿನವನ್ನು ಆಚರಿಸಿಕೊಂಡರು.
ಪ್ರತಿ ವರ್ಷ ಡಾ.ಶ್ರೀ ಶಿವಕುಮಾರಸ್ವಾಮಿಗಳನ್ನು ಬೆಂಗಳೂರಿನ ಮನೆಗೆ ಕರೆಸಿಕೊಂಡು ಅವರ ಪಾದಪೂಜೆ ಮಾಡುವ ಮೂಲಕ ತಮ್ಮ ಜನುಮ ದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಕೊವಿಡ್ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಡಾ.ಉಮಾ ಶಂಕರಬಿದರಿ ಅವರೊಂದಿಗೆ ಶ್ರೀಮಠಕ್ಕೆ ಆಗಮಿಸಿದರು ಮಠದಲ್ಲಿಯೇ ತಮ್ಮ ಜನುಮ ದಿನವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರರಾದ ಮುರಳೀಧರ ಹಾಲಪ್ಪನವರು ಅವರ ಜೊತೆಯಲ್ಲಿದ್ದರು.