Sunday, June 26, 2022

Latest Posts

ಪಂಚಾಯತ್ ವ್ಯಾಪ್ತಿಯಲ್ಲಿರುವ ವಸತಿ ರಹಿತರಿಗೆ ನಿವೇಶನ ಒದಗಿಸಲು ಶಾಸಕರಿಗೆ ಅಹವಾಲು ಸಲ್ಲಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನೂರಾರು ವಸತಿ ರಹಿತರಿಗೆ ನಿವೇಶನಗಳನ್ನು ಒದಗಿಸಬೇಕು ಎಂದು ಪಂಚಾಯತ್ ವ್ಯಾಪ್ತಿಯ ವಸತಿ ರಹಿತರು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೂಡಿಗೆ ಗ್ರಾಮ ಪಂಚಾಯತ್ ಗೆ ಶಾಸಕರು ಭೇಟಿ ನೀಡಿದ ಸಂದರ್ಭ ಮನವಿ ಸಲ್ಲಿಸಿದ ನಿವೇಶನ ರಹಿತರು, ಈಗಾಗಲೇ ಬ್ಯಾಡಗೊಟ್ಟ ಮತ್ತು ಹುದುಗೂರು ಗ್ರಾಮಗಳಲ್ಲಿ ನಾಲ್ಕು ಎಕರೆಗಳಷ್ಟು ಕಾದಿರಿಸಿದ ಜಾಗವಿದ್ದು ಅ ಜಾಗವನ್ನು ನಿವೇಶನ ರಹಿತರಿಗೆ  ಮನೆ ನಿರ್ಮಿಸಲು ವಿತರಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ ಗ್ರಾಮ ಪಂಚಾಯತಿಯ ಗ್ರಾಮ ಸಭೆಗಳಲ್ಲಿ ನಿವೇಶನ ರಹಿತರ ಪಟ್ಟಿ  ಮಾಡಿ ನಾಲ್ಕು ವರ್ಷಗಳು ಕಳೆದರೂ ಇದುವರೆಗೂ ನಿವೇಶನ ದೊರೆತಿಲ್ಲ ಎಂದು ದೂರಿದರು.
ನಿವೇಶನ ರಹಿತರಾದ ದೇವಕಿ, ಪದ್ಮ, ಮಹೇಶ್ ಚಂದ್ರ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ಇದಕ್ಕೆ ಪ್ರತಿಕ್ರಿಯೆಸಿದ ಶಾಸಕರು ಕೊರೋನಾ ರೋಗದ ಲಕ್ಷಣಗಳು ಕಡಿಮೆಯಾದ ನಂತರದ ದಿನಗಳಲ್ಲಿ  ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾದಿರಿಸಿದ ಜಾಗದಲ್ಲಿ  ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ  ಮಾಡಲಾಗುವುದು. ಜೊತೆಗೆ ಈಗಾಗಲೇ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಎಲ್ಲರಿಗೂ ಹಕ್ಕ ಪತ್ರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss