ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

 ನಿಷೇಧದ ಮಧ್ಯೆಯೂ ನಡೆದ ದೇವರಗುಡ್ಡದ ಶ್ರೀ ಮಳೆಮಲ್ಲೇಶ್ವರ ಜಾತ್ರೆ: ಬಡಿಗೆ ಹೊಡೆದಾಟದಲ್ಲಿ 40 ಜನರಿಗೆ ಗಾಯ

ವೆಂಕಟೇಶ ದೇಸಾಯಿ
ಬಳ್ಳಾರಿ: ನಿಷೇಧದ ಮಧ್ಯೆಯೂ ನಡೆದ ದೇವರ ಗುಡ್ಡದ ದಸರಾ ಮಹೋತ್ಸವ, ದಿಢೀರ್ ಜಮಾಯಿಸಿದ ಸಾವಿರಾರು ಜನರು, ನಿಯಂತ್ರಣ ತಪ್ಪಿದ ಪೊಲೀಸ್ ವ್ಯವಸ್ಥೆ, ಬಡಿಗೆ ಹೊಡೆದಾಟದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಗಾಯ, ನಿರ್ವಿಗ್ನವಾಗಿ ನಡೆದ ಶ್ರೀ ಮಲ್ಲಯ್ಯನ ಕಾರಣಿಕ, ಇದು ಇಲ್ಲಿನ ಆಂದ್ರದ ಗಡಿ ಭಾಗದ ಹೊಳಗುಂದ ಮಂಡಲದ ನೇರಣಿಕಿಯ ದೇವರಗುಡ್ಡದ ಶ್ರೀ ಮಳೆಮಲ್ಲೇಶ್ವರ ಜಾತ್ರೆಯ ಹೈಲೆಟ್ಸ್,
ನೋವೆಲ್ ಕೊರೋನಾ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ನೇರಣಕಿಯ ದೇವರಗುಡ್ಡದ ಮಳೆ ಮಲ್ಲೇಶ್ವರ ಸ್ವಾಮಿಯ ದಸರಾ ಮಹೋತ್ಸವ ನಿಮಿತ್ತ ನಡೆಯುವ ಜಾತ್ರೆ ಹಿನ್ನೆಲೆ ಆಂದ್ರ ಸರ್ಕಾರ ನಿಷೇಧ ಮಾಡಿತ್ತು. ನಿಷೇಧ‌ದ ಮದ್ಯೆಯೂ ಸಾವಿರಾರು ಭಕ್ತರ‌ ಮಧ್ಯೆ ಸೋಮವಾರ ರಾತ್ರಿ ಸಂಪ್ರದಾಯದಂತೆ ಜಾತ್ರೆ ಅದ್ದೂರಿಯಾಗಿ ನಡೆಯಿತು.
ಕೊರೋನಾ ಭಯದ ಬಗ್ಗೆ ತಿಳಿದಿದ್ದರೂ ಜನರು ದೇವರಗುಡ್ಡಕ್ಕೆ ಸಾವಿರಾರು ಜನರು ರಾತ್ರಿ ವೇಳೆ ಪ್ರತಿವರ್ಷದಂತೆ ಜಮಾಯಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಲ್ಲಯ್ಯನ ಕಾರಣಿಕ ನುಡಿಯನ್ನು ಆಲಿಸಿದರು. ದೇವರ ಪಲ್ಲಕ್ಕಿ ಕೊಂಡೊಯ್ಯುವ ಸಂದರ್ಭದಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ಬಡಿಗಿ ಆಟದಲ್ಲಿ ಈ ವರ್ಷವೂ ನಡೆಯಿತು. ಸುಮಾರು 50 ಕ್ಕೂ ಹೆಚ್ಚು ಜನರು ಈ ಆಟದಲ್ಲಕ ಗಾಯಗೊಂಡಿದ್ದಾರೆ. ಇದು ಏನಪ್ಪ ಎಂದು ಹೌಹಾರಬೇಡಿ, ಈ ಆಟದಲ್ಲಿ ದೇಹದಿಂದ ಹನಿಯಾದರೂ ರಕ್ತ ಸುರಿದರೆ ಆವರಿಸುವ ರೋಗಗಳು ದೂರವಾಗಲಿವೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ. ಈ ಹಿನ್ನೆಲೆ ಜನರು ಈ ಬಡಿದಾಟದಲ್ಲಿ ಭಾಗವಹಿಸುವ ಪದ್ದತಿ ನೂರಾರು ವರ್ಷಗಳಿಂದ ನಡೆದು ಬಂದಿದೆ. ಈ ಹಬ್ಬಕ್ಕೆ‌ ಇಲ್ಲಿವರೆಗೂ ಯಾವುದೇ ಅಡ್ಡಿ ಆತಂಕಗಳು ಎದುರಾಗಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ನಡೆಯಿತು. ದೇವರ ಪಲ್ಲಕ್ಕಿಯನ್ನು ದೇವಸ್ಥಾನದಿಂದ ರಾಕ್ಷಸಪಡೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ನಡೆಯುವ ಈ ಬಡಿಗೆ ಆಟದ ಸಂದರ್ಭದಲ್ಲಿ ಜನರು ಗಾಯಗೊಳ್ಳುತ್ತಾರೆ. ಅನೇಕ ಭಾರಿ ಹಲವಾರು ಜನರು ಜೀವ ಕಳೆದುಕೊಂಡಿದ್ದಾರೆ ಕೂಡಲೇ ಇದನ್ನು ಸ್ಥಗಿತಗೊಳಿಸಬೇಕು ಎಂದು ಈ ಹಿಂದೆ ಎನ್‍.ಟಿ.ರಾಮರಾವ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಆದೇಶಿಸಿದ್ದರು. ಇದರ‌ ಜೊತೆಗೆ ಸೂಕ್ತ ಪೊಲೀಸ್ ಬಂದೋ ಬಸ್ತ್ ಕಲ್ಪಿಸಿದ್ದರು. ಇದರ‌ ಮಧ್ಯೆಯೂ ಜಾತ್ರೆಯೂ ನಡೆದಿತ್ತು. ಅಂದು ಕೂಡಾ ರಾತ್ರಿ ಏಕಾ ಏಕಿ ಸುತ್ತಮುತ್ತಲಿನ ಸಾವಿರಾರು ಜನರು ಗುಡ್ಡಕ್ಕೆ ತೆರಳಕ ಹಬ್ಬ ಆಚರಿಸಿ, ಬಡಿಗೆ ಹೊಡೆದಾಟ ನಡೆಸಿದ್ದರು. ಈ ವರ್ಷ ಕೂಡಾ ಆಂದ್ರ ಪ್ರದೇಶ ಸರ್ಕಾರ ಜಾತ್ರೆಯನ್ನು‌ ನಿಷೇಧಿಸಿತ್ತು. ಮಾಧ್ಯಮಗಳಲ್ಲಿ ನಿಷೇಧದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದರೂ ಕ್ಯಾರೆ ಎನ್ನದ ಭಕ್ತರು ಪೊಲೀಸ್ ಬಿಗಿ ಭದ್ರತೆ‌ ಮದ್ಯೆ ಜಾತ್ರೆಯಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ದೇವರಗುಡ್ಡಕ್ಕೆ ಬರುವ ಬಹುತೇಕ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದರೂ, ಸುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಕಾಲುದಾರಿಗಳಲ್ಲಿ ರಾತ್ರಿ ಯಾಗುತ್ತಿದ್ದಂತೆ‌ ಜಮಾಯಿಸಿದರು. ಸ್ಥಳದಲ್ಲಿದ್ದ ನೂರಾರು ಪೊಲೀಸರು ಜನರನ್ನು ಕಂಡು ಮೌನಕ್ಕೆ ಶರಣಾದದರು. ಜನರನ್ನು ನಿಯಂತ್ರಿಸಿದರೆ ಪೊಲೀಸರೊಂದಿಗೆ ಗಲಾಟೆ ಸಂಭವಿಸಬಹುದು ಎನ್ನುವ ಕಾರಣಕ್ಕೆ ಅದಿಕಾರಿಗಳು ಮೌನಕ್ಕೆ ಶರಣಾಗಿದ್ದರು ಎಂದು‌ ಹೇಳಲಾಗುತ್ತಿದೆ.
ಕಾರಣಿಕ ನುಡಿ: ಪ್ರತಿ ವರ್ಷದಂತೆ ದೇವರಗುಡ್ಡದ ಮಳೆ ಮಲ್ಲೇಶ್ವರ ಸ್ವಾಮಿಯ ಕಾರಣಿಕದ ದಸರಾ ಮಹೋತ್ಸವ ಪ್ರತಿ ವರ್ಷದಂತೆ ಸಾವಿರಾರು ಜನರ ಮಧ್ಯೆ ನಡೆಯಿತು.
ಪೂಜೆ ಬಳಿಕ ರಾತ್ರಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊರಗೆ ತರಲಾಯಿತು. ಸಧ್ಯ ಅರಕೆರೆ ಗ್ರಾಮಸ್ಥರ ಸುಪರ್ದಿಯಲ್ಲಿರುವ ದೇವರ ಉತ್ಸವ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕೆಂದು ಅರಕೇರ ಎಳ್ಳಾರ್ಥಿ ಮೊದಲಾದ ಗ್ರಾಮಸ್ಥರು ಬಂಡಾರ ಎರಚುತ್ತ, ಇಲಾಲು ಆಡಿಸಿದರು. ಬಡಿಗೆಗಳ ಮೂಲಕ ಅರಕೆರೆ ಗ್ರಾಮದವರನ್ನು ಬಡಿಗೆಗಳ ಮೂಲಕ ಬೆದರಿಸುವ ಕಾರ್ಯ ನಡೆಯಿತು.
ದೇವರ ಮೂರ್ತಿಯನ್ನು ತಮ್ಮ ಊರಿಗೆ ಯಾರು ತೆಗೆದುಕೊಂಡು ಹೋಗ್ತಾರೋ ಆ ಊರಿಗೆ ಒಳ್ಳೆಯದಾಗಲಿದೆ ಎನ್ನುವ ನಂಬಿಕೆ ಇಲ್ಲಿನ ಬಕ್ತರದ್ದಾಗಿದೆ. ನಂತರ ನುಡಿದ ಕಾರಣಿಕ,
ಬಳಿರೇ…”ಗಂಗೆ ಹೊಳೆದಂಡಿಗೆ ನಿಂತಾಳ, ಮಾಳಮ್ಮವ್ವ ಸವಾರಿ ಮಾಡ್ಯಾಳ, ಮುಂದಿನ ಆರು ತಿಂಗಳ ವರೆಗೆ 4800 ನಗ ಹಳ್ಳಿ, 1600 ಜೋಳ, ಮೂರು ಆರು, ಆರು ಮೂರಾದೀತು” ಎಂದು ಮಲ್ಲಯ್ಯನ ಕಾರಣಿಕ ವಾಣಿ ಹೊರ ಬಂತು. ಜಾತ್ರರ ನಡೆಯುವುದು
ಆಂದ್ರದಲ್ಲಾದರೂ ಮಲ್ಲಯ್ಯನ ಕಾರಣಿಕ‌ ಮಾತ್ರ ಕನ್ನಡ ಭಾಷೆಯಲ್ಲೇ ಇರಲಿದೆ. ಕನ್ನಡ ನಾಡಿನ ಜನರು ಸಹ ಈ ಹೇಳಿಕೆಯನ್ನು ಇಲ್ಲಿವರೆಗೆ ಅನುಸರಿಸುತ್ತಾ ಬಂದಿದ್ದಾರೆ. ಈ ಕಾರಣಿಕದ ಆಧಾರದ ಮೇಲೆ ಸುತ್ತಲಿನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು, ರೈತರು ತಮ್ಮ ಬೆಳೆಯನ್ನು ಸಂಗ್ರಹಿಸಿ ಇಡುವುದು, ಇಲ್ಲವೇ ಮಾರಾಟ ಮಾಡುವದನ್ನು ನಿರ್ಧರಿಸುವುದು ವಾಡಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss