Tuesday, June 28, 2022

Latest Posts

ನಿಷೇಧಾಜ್ಞೆ ಜಾರಿಯಿಂದ ಶಿವಮೊಗ್ಗದಲ್ಲಿ ಭಾನುವಾರ ಜನ ಸಂಚಾರ ಸಂಪೂರ್ಣ ಸ್ತಬ್ಧ

ಹೊಸ ದಿಗಂತ ವರದಿ, ಶಿವಮೊಗ್ಗ :

ನಿಷೇಧಾಜ್ಞೆಯಿಂದಾಗಿ ಭಾನುವಾರವೂ ಕೂಡ ನಗರ ಸಂಪೂರ್ಣ ಬಂದ್ ಆಗಿದ್ದು, ಹಳೇ ಶಿವಮೊಗ್ಗದಲ್ಲಿ ಲಾಠಿ, ಬೂಟು ಹೊರತು ಜನ ಸಂಚಾರ ಸ್ತಬ್ಧವಾಗಿತ್ತು.
ಗಾಂಧಿ ಬಜಾರ್, ಬಿ.ಎಚ್. ರಸ್ತೆ, ಎಂಕೆಕೆ ರಸ್ತೆ, ಭರ್ಮಪ್ಪ ನಗರ, ಲಷ್ಕರ್ ಮೊಹಲ್ಲಾ, ಕೆ.ಆರ್. ಪುರಂ ರಸ್ತೆ ಮೊದಲಾದ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಕೆಲವು ಅಂಗಡಿಗಳಲ್ಲಿ ಹಿಂಬಾಗಿಲಿನಿಂದ ವ್ಯಾಪಾರ ಮಾಡಲು ಯತ್ನಿಸಲಾಯಿತಾದರೂ ಹೆಚ್ಚು ಜನ ಜಮಾಯಿಸಿದ್ದರಿಂದಾಗಿ ಬಾಗಿಲು ಹಾಕುವಂತಾಗಿತ್ತು.
ನಿಷೇಧಾಜ್ಞೆ ಜತೆಗೆ ಭಾನುವಾರವಾಗಿದ್ದರಿಂದ ಜನರು ಕೂಡ ಮನೆಯಿಂದ ಹೊರ ಬರಲು ಹಿಂಜರಿಯುವಂತಾಗಿತ್ತು. ನಗರ ಸಾರಿಗೆ ಬಸ್, ಆಟೋ ಸಂಚಾರ ಕೂಡ ಇರಲಿಲ್ಲ. ದುರ್ಗಿಗುಡಿ, ವಿನೋಬನಗರ, ಕುವೆಂಪು ರಸ್ತೆ, ಜೈಲ್ ರಸ್ತೆ, ಸವಳಂಗ ರಸ್ತೆ ಮೊದಲಾದ ಕಡೆಗಳಲ್ಲಿ ಮಾತ್ರ ಆಟೊ ಸಂಚಾರ ವಿರಳವಾಗಿತ್ತು. ಗ್ರಾಮಾಂತರ ಸಾರಿಗೆ ಬಸ್‌ಗಳ ಸಂಚಾರವೂ ಕೂಡ ತೀರಾ ವಿರಳವಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಓಡಾಟ ನಡೆಸಿದವಾದರೂ ಪ್ರಯಾಣಿಕರ ಕೊರತೆ ಇತ್ತು.ಡಿ.7 ರಂದು ಬೆಳಗ್ಗೆ 10 ಗಂಟೆಗೆ ನಿಷೇಧಾಜ್ಞೆ ಮುಗಿಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss