Monday, August 8, 2022

Latest Posts

ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿ ಮಾಲಿಕರಿಗೆ ದಂಡ ವಿಧಿಸಿದ ಮನಪಾ ಅಧಿಕಾರಿಗಳು

ಹೊಸ ದಿಗಂತ ವರದಿ, ತುಮಕೂರು:

ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿಗಳ ಮಾಲಿಕರಿಗೆ ತುಮಕೂರು ಮಹಾನಗರಪಾಲಿಕೆಯವರು ಅಧಿಕಾರಿಗಳು
88,200ರೂಗಳ ದಂಡ ವಿಧಿಸಿದ್ದಾರೆ.
ಮಂಡಿಪೇಟೆಯ ವಿಶಾಲ್ ಅಂಗಡಿ ಮಾಲಿಕರಿಗೆ 50 ಸಾವಿರ ರೂ.ಪಟೇಲ್ ಅಂಗಡಿ ಮಾಲಿಕರಿಗೆ 5ಸಾವಿರ ರೂ.ಕೀಮಾರಾಮ್ ಅವರಿಗೆ ಹತ್ತು ಸಾವಿರ ರೂ.ಶೋಭಾ ಸ್ಟೋರ್ ಮಾಲಿಕರಿಗೆ ಹತ್ತು ಸಾವಿರ ರೂ.ಶ್ಯಾಮ್ ಬಟ್ಟೆ ಅಂಗಡಿಯ ಅಬ್ದುಲ್ ಅಜೀಮ್ ಅವರಿಗೆ ಎರಡು ಸಾವಿರ ರೂ.ನವೀನ್ ಪಾಶ ಅವರಿಗೆ 200ರೂ.ವೃಷಭ ಸ್ಟೋರ್ ಮಂಜುನಾಥ್ ಅವರಿಗೆ ನಾಲ್ಕು ಸಾವಿರ ರೂ.ಸಿ.ಎ.ಕೆ.ಸ್ಟೋರ್ ನವರಿಗೆಎರಡು ಸಾವಿರ ರೂ.ಮನೋಹರ್ ಅಂಗಡಿ ಮಾಲಿಕರಿಗೆ ಐದು ಸಾವಿರ ರೂಗಳು ಸೇರಿ 88200ರೂಗಳ ದಂಡ ವಿಧಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇದು ಮುಂದುವರೆದರೆ ಉದ್ದಿಮೆ ಪರವಾನಗಿ ರದ್ದು ಪಡಿಸುವ ಎಚ್ಚರಿಕೆ ಯನ್ನು ಪಾಲಿಕೆ ಅದಿಕಾರಿಗಳು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss