Monday, August 15, 2022

Latest Posts

ನೀಟ್ ಪರೀಕ್ಷಾ ಫಲಿತಾಂಶ: 720 ರಲ್ಲಿ 720 ಅಂಕ ಪಡೆದ ಆಕಾಂಕ್ಷಾ , ಶೋಯೆಬ್ ಅಫ್ತಾಬ್

ಹೊಸದಿಲ್ಲಿ: ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನೀಟ್ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳಲ್ಲಿ ಹಲವಾರು ಯುವಕ ಯುವತಿಯರು ಅತ್ಯುತ್ತಮ ಸಾಧನೆ ತೋರಿದ್ದಾರೆ. ಒಡಿಶಾದ ಸೋಯೆಬ್ ಅಫ್ತಾಬ್ ಎಂಬ ಯುವಕ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ 720ಕ್ಕೆ 720 ಅಂಕ ಪಡೆದು, ದೇಶದಲ್ಲೇ ಮೊದಲ ಬಾರಿಗೆ ಶೇ100ರಷ್ಟು ಅಂಕ ಗಳಿಸಿದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೆಹಲಿಯ ಆಕಾಂಕ್ಷಾ ಎಂಬ ಯುವತಿ ಕೂಡ 720ಕ್ಕೆ 720 ಅಂಕ ಗಳಿಸಿದ್ದರು.ಆದರೆ ಆಕೆಯ ವಯಸ್ಸಿನ ಆಧಾರದ ಮೇಲೆ ಫಸ್ಟ್​ ರ್ಯಾಂಕ್ ಕೈತಪ್ಪಿದೆ.
ಇಬ್ಬರು ವಿದ್ಯಾರ್ಥಿಗಳು ಸಮಾನ ಅಂಕ ಗಳಿಸಿದ್ದಾಗ, ಯಾರಿಗೆ ಪ್ರಥಮ ಸ್ಥಾನ ನೀಡಬೇಕು ಅನ್ನೋದನ್ನ ನಿರ್ಧರಿಸಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಟೈ ಬ್ರೇಕಿಂಗ್ ನಿಯಮಗಳಿವೆ. ಇದರ ಪ್ರಕಾರ ನಿರ್ದಿಷ್ಟ ವಿಷಯಗಳಲ್ಲಿ ಇಬ್ಬರೂ ಗಳಿಸಿದ ಅಂಕ, ತಪ್ಪು ಉತ್ತರಗಳ ಸಂಖ್ಯೆ ಹಾಗೂ ವಿದ್ಯಾರ್ಥಿಗಳ ವಯಸ್ಸನ್ನು ತಾಳೆ ಹಾಕಿ ಪ್ರಥಮ ಸ್ಥಾನ ನೀಡಲಾಗುತ್ತದೆ.
ಮೊದಲು ಬಯಾಲಜಿ ಹಾಗೂ ಕೆಮಿಸ್ಟ್ರಿಯಲ್ಲಿ ಯಾವ ವಿದ್ಯಾರ್ಥಿ ಹೆಚ್ಚಿನ ಅಂಕ ಗಳಿಸಿದ್ದಾರೆ ಎಂಬುದನ್ನ ನೋಡಲಾಗುತ್ತದೆ. ಬಳಿಕ ಇಬ್ಬರಲ್ಲಿ ಯಾರು ಕಡಿಮೆ ತಪ್ಪು ಉತ್ತರಗಳನ್ನು ನೀಡಿದ್ದಾರೆ ಅನ್ನೋದನ್ನು ನೋಡಲಾಗುತ್ತದೆ. ಅಲ್ಲೂ ಟೈ ಬ್ರೇಕ್ ಆಗದಿದಾಗ ವಯಸ್ಸನ್ನು ಪರಿಗಣಿಸಲಾಗುತ್ತದೆ. ಇಬ್ಬರಲ್ಲಿ ಯಾರ ವಯಸ್ಸು ಹೆಚ್ಚಿರುತ್ತದೋ ಅವರನ್ನ ಪ್ರಥಮ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ.
ಸೋಯೆಬ್​ ಹಾಗೂ ಆಕಾಂಕ್ಷಾ ಇಬ್ಬರೂ 720ಕ್ಕೆ 720 ಅಂಕ ಗಳಿಸಿದ್ದರಿಂದ ಮೊದಲ ಎರಡು ನಿಯಮಗಳು ಅನ್ವಯವಾಗುವುದಿಲ್ಲ. ಹೀಗಾಗಿ ವಯಸ್ಸನ್ನು ಪರಿಗಣಿಸಿದಾಗ ಆಕಾಂಕ್ಷ ಕಿರಿಯಳಾಗಿದ್ದರಿಂದ ಪ್ರಥಮ ಸ್ಥಾನ ಸೋಯೆಬ್​ ಪಾಲಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ವಯಸ್ಸಿನ ಅಂತರದಿಂದ ಪ್ರಥಮ ಸ್ಥಾನ ಕೈತಪ್ಪಿದ್ದರೂ ಆಕಾಂಕ್ಷಾ ತನ್ನ ಸ್ನೇಹಿತರು ಹಾಗೂ ಶಿಕ್ಷಕರಿಂದಷ್ಟೇ ಅಲ್ಲದೆ, ದೇಶಾದ್ಯಂತ ಪ್ರಶಂಸೆ ಗಿಟ್ಟಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss