ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀರಿನ ರಭಸಕ್ಕೆ ಕೊಚ್ಚಿಹೋದ ಬಾಲಕಿ: ಸಂತ್ರಸ್ತ ಕುಟುಂಬಕ್ಕೆ ಡಿಸಿ ಸಾಂತ್ವನ

ಧಾರವಾಡ: ಐದು ದಿನಗಳಿಂದ ನಿರಂತರ ಸುರಿಯುವ ಮಳೆಯಿಂದ ಜಿಲ್ಲೆಯ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಹೀಗೆ ತುಂಬಿ ಹರಿಯುವ ಹಳ್ಳದ ನೀರಿನಲ್ಲಿ ಬಾಲಕಿಯೊಬ್ಬಳು ಕೊಚ್ಚಿಕೊಂಡ ಹೋದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.
ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹನುಮಂತಪ್ಪ ಗಾಣಿಗೇರ ಎಂಬುವರ ಶ್ರೀದೇವಿ(8) ಮಗಳು ನೀರಿನಲ್ಲಿ ತೇಲಿಹೋದ ಬಾಲಕಿ. ಹಿರೇಕೇರಿಗೆ ಬೇಡ್ತಿ ಹಳ್ಳದಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಸೇತುವೆ ಇಲ್ಲದ ಕಾರಣ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ.
ತಾಯಿಯೊಂದಿಗೆ ಹೊರಟ್ಟಿದ್ದ ಶ್ರೀದೇವಿ, ಹೀಗೆ ಮೈದುಂಬಿ ಹರಿಯುವ ನೀರು ನೋಡಲು ಹೋದಾಗ ಬಾಲಕಿ ಜಾರಿಬಿದ್ದು ನೀರಲ್ಲಿ ತೇಲಿಹೋಗಿದ್ದಾರೆ. ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ಬೀಡುಬಿಟ್ಟು ಶೋಧ ಕಾರ್ಯಾಚರಣೆಯಲ್ಲಿ ತೋಡಗಿದ್ದರೂ, ಬಾಲಕಿ ಮಾತ್ರ ಈವರೆಗೆ ಪತ್ತೆಯಾಗಿಲ್ಲ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಗಂಜಿಗಟ್ಟಿಗೆ ಭೇಟಿನೀಡಿ ತಂದೆ ಹನುಂತಪ್ಪ ಹಾಗೂ ತಾಯಿಗೆ ಸಾಂತ್ವನ ಹೇಳಿದರು. ಅಲ್ಲದೇ, ಸರ್ಕಾರದಿಂದ ಸಿಗಬೇಕಾದ ನೆರವು-ಸೌಲಭ್ಯ ತಲುಪಿಸುವುದಾಗಿ ಭರವಸೆ ನೀಡಿದರು.
ಅಲ್ಲದೇ, ಬಾಲಕಿ ನಾಪತ್ತೆಯಾದ ಜಾಗದಲ್ಲಿ ಮುಳ್ಳಿನ ಗಿಡಗಂಟೆಗಳಿವೆ. ಹೀಗಾಗಿ ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿದ್ದು ಇನ್ನಷ್ಟು ಶೋಧ ಕಾರ್ಯವನ್ನು ಚುರುಕುಗೊಳಿಸಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶೋಕ ಶಿಗ್ಗಾವಿ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss