Sunday, June 26, 2022

Latest Posts

ನೀವಿರುವ ಊರಿನಲ್ಲಿ ನೀರಿನ ಕೊರತೆಯಿದೆಯೇ? ಕಡಿಮೆ ನೀರಿನಲ್ಲಿ ಜಾಸ್ತಿ ಕೆಲಸ ಮಾಡುವುದು ಹೇಗೆ ಎಂಬ ಯೋಚನೆಯೇ? ಹಾಗಾದರೆ ಇದನ್ನು ಓದಿ..

ನೀವಿರುವುದು ನಗರ ಪ್ರದೇಶದಲ್ಲಾಗಿದ್ದರೆ ಅಲ್ಲಿ ನೀರಿಗೂ ಹಣಕೊಟ್ಟು ಪಡೆಯಬೇಕು. ನೀರಿನ ವ್ಯಾಲ್ಯೂ ಹಳ್ಳಿ ಜನರಿಗಿಂತ ಹೆಚ್ಚಾಗಿ ನಗರ ಪ್ರದೇಶದಲ್ಲಿ ಇರುವವರಿಗೆ ಗೊತ್ತಿರುತ್ತದೆ. ಬಯಲು ಸೀಮೆಯ ಜನರಿಗೂ ಅಷ್ಟೆ ಒಂದು ಕೊಡ ನೀರಿಗೆ ಕಿ.ಮೀ ಗಟ್ಟಲೇ ಬಿಸಿಲಿನಲ್ಲಿ ನಡೆದು ತರುವಂತ ಕಷ್ಟದ ಪರಿಸ್ಥಿತಿ ಇದೆ. ಮಲೆನಾಡಿನಲ್ಲಿ ಅಷ್ಟೊಂದು ನೀರಿನ ಅಭಾವವಿರುವುದಿಲ. ಆದರೂ ಕಡಿಮೆ ನೀರಿನಲ್ಲಿ ಜಾಸ್ತಿ ಕೆಲಸ ಮಾಡುವುದನ್ನು ಕಲಿಯುವುದು ಬಹಳ ಉತ್ತಮ. ಹಾಗಾದರೆ ಕಡಿಮೆ ನೀರಿನಲ್ಲಿ ಜಾಸ್ತಿ ಕೆಲಸ ಮಾಡುವುದು ಹೇಗೆ ಎಂಬುದು ಗೊತ್ತಾಗುತ್ತಿಲ್ಲವೇ? ಇದನ್ನು ಓದಿ…

ವಾಷಿಂಗ್ ಮಷಿನ್ ಬಳಕೆ ಕಡಿಮೆ:
ಆದಷ್ಟು ವಾಷಿಂಗ್ ಮಷಿನ್ ಕಡಿಮೆ ಬಳಸಲು ಟ್ರೈ ಮಾಡಿ. ವಾಷಿಂಗ್ ಮಷಿನ್‌ಗೆ ಬಹಳ ನೀರು ಬೇಕಾಗುತ್ತದೆ. ಒಂದೇ ಸಲಿ ನಿಮ್ಮ ಅರ್ಧ ಟ್ಯಾಂಕ್ ನೀರು ಕರ್ಚ ಆಗುತ್ತದೆ. ಸಾಧ್ಯವಾದಲ್ಲಿ ಕೈಯಿಂದಲೇ ಬಟ್ಟೆ ತೊಳೆಯಿರಿ

ಸಣ್ಣ ಮಗ್ಗ್:
ಬಚ್ಚಲ ಮನೆಯಲ್ಲಿ, ಪಾತ್ರೆ ತೊಳೆಯುವಲ್ಲಿ ಆದಷ್ಟು ಚಿಕ್ಕ ಮಗ್ಗ್‌ಗಳನ್ನು ಇಟ್ಟುಕೊಳ್ಳಿ. ದೊಡ್ಡ ಮಗ್ಗ್ ಇದ್ದಷ್ಟು ನೀರು ಹೆಚ್ಚು ಕರ್ಚ ಆಗುತ್ತದೆ. ಚಿಕ್ಕ ಚಿಕ್ಕ ಚಂಬು, ಮಗ್ಗ್ ಬಳಸಿದರೆ ನೀರು ಅದರಲ್ಲಿ ಕಡಿಮೆ ಹಿಡಿಯುವುದರಿಂದ ಕಡಿಮೆಯೇ ನೀರು ಕರ್ಚ ಆಗುತ್ತದೆ.

ಕಡಿಮೆ ನೀರಿನಲ್ಲಿ ಬಟ್ಟೆ ಹೀಗೆ ತೊಳೆಯಿರಿ:
ನೀರನ್ನು ಮರು ಬಳಕೆ ಮಾಡುವುದನ್ನು ಕಲಿಯಿರಿ. ಬಟ್ಟೆ ತೊಳೆಯುವಾಗ ಮೊದಲಿಗೆ ಒಂದು ಟಬ್ ಅಥವಾ ಬಕೇಟ್‌ನಲ್ಲಿ ಅರ್ಧದಷ್ಟು ನೀರನ್ನು ಹಾಕಿಕೊಂಡು ಬಟ್ಟೆಗಳನ್ನೆಲ್ಲ ಅದರಲ್ಲಿ ಅದ್ದಿ ಒದ್ದೆ ಮಾಡಿಕೊಳ್ಳಿ. ಆನಂತರ ಬಟ್ಟೆಗಳಿಗೆ ಸೋಪ್ ಹಾಕಿ ತೊಳೆದ ಮೇಲೆ ಒದ್ದೆ ಮಾಡಿಕೊಳ್ಳಲು ಬಳಸಿದ ಬಕೇಟ್‌ನಲ್ಲಿ ನೀರಿದ್ದರೆ ಅದರಲ್ಲಿ ಸೋಪ್ ಹಚ್ಚಿಟ್ಟಿದ್ದ ಬಟ್ಟೆಗಳನ್ನು ಹಾಕಿ. ಸೋಪ್ ಅಂಶವೆಲ್ಲ ಹೋಗುತ್ತದೆ. ಆಮೇಲೆ ಒಂದು ಬಕೇಟ್ ಶುದ್ಧದ ನೀರಿನಲ್ಲಿ ಬಟ್ಟೆ ಅದ್ದಿ ತೊಳೆದರೆ ಬಟ್ಟೆ ಕ್ಲೀನ್ ಆಗುತ್ತದೆ. ಬಟ್ಟೆ ತೊಳೆದ ನೀರು ಮತ್ತು ಬಟ್ಟೆ ಹಿಂಡುವಾಗಲೂ ಆ ನೀರನ್ನು ಶೇಖರಿಸಿಟ್ಟುಕೊಂಡರೆ ಅವುಗಳನ್ನು ಗಿಡಗಳಿಗೆ ಹಾಕಬಹುದು.

ಪಾತ್ರೆಗಳನ್ನು ಹೀಗೆ ತೊಳೆಯಿರಿ:

ಪಾತ್ರೆಗಳನ್ನು ಕಡಿಮೆ ನೀರಿನಲ್ಲಿ ಹೇಗೆ ತೊಳೆಯುವುದು ಎಂಬುದನ್ನು ಯೋಚಿಸಿ. ಆಗ ಆಗ ತೊಳೆಯುತ್ತಿರುವುದಕ್ಕಿಂತ ಪಾತ್ರೆಗಳನ್ನೂ ದಿನದಲ್ಲಿ ಒಂದೇ ಸಲಿ ತೊಳೆದರೆ ಕಡಿಮೆ ನೀರು ಸಾಕು. ಎರಡು ಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಮೊದಲಿಗೆ ಪಾತ್ರೆ ತಿಕ್ಕಿಕೊಂಡು ಅದನ್ನು ಒಂದು ಪಾತ್ರೆಯ ನೀರಿಗೆ ಹಾಕಿ ತೊಳೆಯುವುದು ಆ ಪಾತ್ರೆಗಳನ್ನು ಮತ್ತೊಂದು ನೀರಿನ ಪಾತ್ರೆಗೆ ಹಾಕಿ ತೊಳೆಯುವುದು. ಪಾತ್ರೆಯೂ ಕ್ಲೀನ್ ಆಗುತ್ತದೆ. ಮತ್ತು ಆ ನೀರನ್ನು ಗಿಡಗಳಿಗಳಿಗೆ ಹಾಕುವುದಕ್ಕೂ ಬರುತ್ತದೆ.

ಎಲ್ಲೆಂದರಲ್ಲಿ ನಲ್ಲಿ ಬೇಡ:
ಎಲ್ಲೆಂದರಲ್ಲಿ ನಲ್ಲಿಯನ್ನು ಮಾಡಿಕೊಳ್ಳಬೇಡಿ. ಅಗತ್ಯ ಇದ್ದಲ್ಲಿ ಮಾತ್ರ ನಲ್ಲಿ ಮಾಡಿಕೊಳ್ಳಿ. ನಲ್ಲಿ ಹೆಚ್ಚಿದ್ದಷ್ಟು ನೀರು ಹೆಚ್ಚು ಕರ್ಚ ಆಗುತ್ತದೆ.

ನಿಂತು ಸ್ನಾನ ಮಾಡಿ:
ಕೆಲವೊಂದಿಷ್ಟು ಮನೆಗಳಲ್ಲಿ ಕುಳಿತು ಕೊಂಡು ಸ್ನಾನ ಮಾಡುತ್ತಾರೆ. ಬಚ್ಚಲ ಮನೆಯಲ್ಲಿ ಕುಳಿತು ಕೊಳ್ಳು ಸ್ಟೂಲ್ ಸಹ ಇರುತ್ತದೆ. ಕುಳಿತು ಮಾಡುವ ಸ್ನಾನಕ್ಕೆ ಹೆಚ್ಚು ನೀರು ಬೇಕು. ಮತ್ತು ಸ್ನಾನದ ಆಯಾಸ ಗೊತ್ತಾಗುವುದಿಲ್ಲ. ಎಷ್ಟೇ ನೀರನ್ನು ಹೊಯ್ದುಕೊಂಡರೂ ಸಾಕೆನಿಸುವುದೇ ಇಲ್ಲ. ಆದಷ್ಟು ನಿಂತು ಸ್ನಾನ ಮಾಡಿ.

ಶವರ್ ಬಳಕೆ ಬೇಡ:
ಶವರ್‌ನಲ್ಲಿ ಸ್ನಾನ ಮಾಡುತ್ತಿದ್ದರೆ ಎಷ್ಟು ನೀರು ಖಾಲಿ ಮಾಡಿದಿರಿ ಎಂಬುದರ ಅರಿವೇ ಇರುವುದಿಲ್ಲ. ಸ್ನಾನ ಮಾಡಿದಷ್ಟು ಮಾಡುತ್ತಲೇ ಇರಬೇಕು ಎನಿಸುತ್ತದೆ. ಸ್ನಾನದ ಆಯಾಸ ಗೊತ್ತಾಗುವುದಿಲ್ಲ. ಆದಷ್ಟು ಶವರ್ ಕಡಿಮೆ ಬಳಸಿ.

ಬಾಳೆ ಎಲೆ ಬಳಸಿ:
ಅನುಕೂಲ ಇದ್ದವರು, ಹಳ್ಳಿಮನೆಯವರು ಆದಷ್ಟು ಬಾಲೆ ಎಲೆಯನ್ನು ಬಳಸಿ. ಅಡುಗೆಗೆ ಮುಚ್ಚಲು, ಊಟಕ್ಕೆ ಹೀಗೆ.. ಬಳಸಿದ ಬಾಳೆ ಎಲೆಯನ್ನು ಬೀಸಡಬಹುದು. ಪಾತ್ರೆ ತೊಳೆಯುವುದು ಕಡಿಮೆ ಆಗುತ್ತದೆ. ನೀರು ಉಳಿತಾಯ ಮಾಡಬಹುದು.

ಮಳೆ ನೀರು ಹಾಳಾಗದಿರಲಿ:
ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ರೂಢಿ ಮಾಡಿಕೊಳ್ಳಿ. ಮಳೆ ನೀರು ೨ ತಿಂಗಳವರೆಗೂ ಹುಳಗಳು ಆಗದಂತೆ ಶೇಖರಿಸಿಟ್ಟುಕೊಳ್ಳಿ. ಈ ನೀರಿನಿಂದ ಅಂಗಳ ತೊಳೆಯಬಹುದು, ಗಿಡಗಳಿ ನೀರು ಹಾಕಬಹುದು. ಮಳೆ ನೀರನ್ನು ಶೇಖರಿಸಿಟ್ಟುಕೊಳ್ಳಿ.

-ಕಾವ್ಯಾ ಜಕ್ಕೊಳ್ಳಿ

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss