Monday, July 4, 2022

Latest Posts

ನೀವು ಈ ರೀತಿ ಟೊಮಾಟೋ ಗೊಜ್ಜು ಮಾಡಿದ್ದೀರಾ? ಸಿಂಪಲ್ ರೆಸಿಪಿ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಆಹಾರದಲ್ಲಿ ಟೊಮಾಟೋ ಗೊಜ್ಜು ಕೂಡ ಒಂದು. ಸುಲಭವಾಗಿ ತಯಾರಾಗುವ ಈ ಗೊಜ್ಜು ಎಲ್ಲಾ ತಿನಿಸುಗಳ ಜೊತೆ ಬೆರೆಯುತ್ತದೆ. ಇದು ಚಪಾತಿ, ದೋಸೆ ಮಾತ್ರವಲ್ಲದೆ ಅನ್ನಕ್ಕು ಸಖತ್ ಟೇಸ್ಟ್ ಕೊಡಲಿದೆ.

ಹಾಗಿದ್ದರೆ ಈ ಸಿಂಪಲ್ ಗಿಜ್ಜು ಮಾಡುವ ಸುಲಭ ವಿಧಾನ ತಿಳಿಯೋಣ ಬನ್ನಿ:

ಬೇಕಾದ ಪದಾರ್ಥಗಳು:
ಟೊಮಾಟೋ
ಈರುಳ್ಳಿ
ಸಾಸಿವೆ
ಉದ್ದಿನ ಬೇಳೆ
ಕಡಳೆಬೇಳೆ
ಮೆಣಸಿನ ಪುಡಿ(ದನಿಯಾ, ಮೆಂತ್ಯ, ಜೀರಿಗೆ, ಉದ್ದಿನ ಬೇಳೆ, ಕಡಳೆಬೇಳೆ, ಒಣ ಮೆಣಸು ಮಿಶ್ರಿತ ಪುಡಿ)
ಕೊತ್ತಂಬರಿ
ಎಣ್ಣೆ
ಬೆಲ್ಲ
ಇಂಗು
ಉಪ್ಪು

ಮಾಡುವ ವಿಧಾನ:

  • ಒಂದು ಬಾಣಲಿಗೆ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಳೆಬೇಳೆ ಹಾಕಿ ಕಂದುಬಣ್ಣ ಬರುವರೆಗೆ ಫ್ರೈ ಮಾಡಿ
  • ಬಳಿಕ ಸಣ್ಣಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ, ಈರುಳ್ಳಿ ಬೆಂದ ನಂತರ ಸಣ್ಣದಾಗಿ ಕತ್ತರಿಸಿದ ಟೊಮಾಟೋ ಹಾಕಿ ಮತ್ತೆ ಫ್ರೈ ಮಾಡಿ.
  • ತರಕಾರಿ ಬೆಂದ ನಂತರ ಅದಕ್ಕೆ ಅಗತ್ಯ ಇರುವಷ್ಟು ನೀರು ಹಾಕಿ ಸ್ವಲ್ಪ ಕುದಿಸಿ.
  • ನಂತರ ಅದಕ್ಕೆ ಮನೆಯಲ್ಲಿ ತಯಾರಿಸಿದ ಮೆಣಸಿನ ಪುಡಿ, ಬೆಲ್ಲ, ಇಂಗು ಹಾಕಿ ಘಾಟು ಹೋಗುವವರೆಗು ಕುದಿಸಿ ಕೊತಂಬರಿ ಹಾಕಿದರೆ ಸಿದ್ದವಾಗುತ್ತದೆ ಸಿಂಪಲ್ ಮತ್ತು ಟೇಸ್ಟಿ ಟೊಮಾಟೋ ಗೊಜ್ಜು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss