ಎಸಿಡಿಟಿ ಸಮಸ್ಯೆ ಇತ್ತೀಚೆಗೆ ಕಾಮನ್ ಆಗಿ ಹೋಗಿದೆ. ಕೆಲಸದ ಬ್ಯೂಸಿ ಶೆಡ್ಯೂಲ್ನಲ್ಲಿ ಸರಿಯಾಗಿ ಸಮಯಕ್ಕೆ ಊಟ ತಿಂಡಿ ಮಾಡದಿರುವುದು, ಊಟ ಆಗಿದ್ದೇ ಮಲಗುವುದು, ಜಂಗ್ ಪುಡ್ಗಳನ್ನೇ ಹೆಚ್ಚಾಗಿ ಸೇವಿಸುವುದು ಈ ರೀತಿ ಆಹಾರ ಕ್ರಮ ಸರಿಯಾಗಿ ಇಲ್ಲದಿದ್ದರಿಂದಲೇ ಚಿಕ್ಕ ವಯಸ್ಸಿನಲ್ಲಿಯೇ ಎಸಿಡಿಟಿ ಬರುತ್ತಿದೆ. ಇದು ಚಿಕ್ಕ ಕಾಯಿಲೆ ಎಂದು ನಿರ್ಲಕ್ಷಿಸಿದರೆ ಮುಗಿಯಿತು ಮುಂದೇ ಇದೇ ದೊಡ್ಡ ಕಾಯಿಲೆಯಾಗಿ ಪರಿಣಮಿಸುತ್ತದೆ. ಹಾಗಾಗಿ ಆರಂಭದಲ್ಲಿಯೇ ಇದಕ್ಕೆ ಸರಿಯಾದ ಔಷಧಿ ಮಾಡಿಕೊಳ್ಳಬೇಕು. ಎಸಿಡಿಟಿ ನಿವಾರಣೆಗೆ ಸಾಕಷ್ಟು ಮನೆಮದ್ದುಗಳಿವೆ. ಇವುಗಳನ್ನು ಟ್ರೈ ಮಾಡಿ.
ತಾಮ್ರದ ಪಾತ್ರೆಯಲ್ಲಿ ರಾತ್ರಿ ಮಲಗುವಾಗ ನೀರನ್ನು ಹಾಕಿಟ್ಟು ಮಲಗಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಮ್ರದ ಪಾತ್ರೆ ನೀರನ್ನು ಕುಡಿಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಎಸಿಡಿಟಿ ನಿವಾರಣೆಯಾಗುತ್ತದೆ. ಹೊಟ್ಟೆ ಉರಿ ಉಳಿ ತೇಗು ಕಡಿಮೆ ಆಗುತ್ತದೆ.
ಬಡೆಸೊಪ್ಪನ್ನು ಊಟದ ನಂತರ ಸೇವಿಸುವುದನ್ನು ರೂಢಿಸಿಕೊಳ್ಳಿ. ಬಡೆಸೊಪ್ಪು ಆಹಾರವನ್ನು ಸರಿಯಾಗಿ ಜೀರ್ಣಮಾಡುತ್ತದೆ. ಮತ್ತು ಹೊಟ್ಟೆ ಉಬ್ಬುವುದನ್ನು ತಡೆಯುತ್ತದೆ. ಹಾಗಾಗಿ ಇದನ್ನು ಸೇವಿಸಿ.
ಬೆಳಿಗ್ಗೆ ಎದ್ದ ತಕ್ಷಣ ಹಸಿದ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಡಿಯುವುದು ರೂಢಿಸಿಕೊಳ್ಳಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಹುಳಿ ತೇಗು ನಿವಾರಣೆಯಾಗುತ್ತದೆ.
ಸಂಬಾರಸೊಪ್ಪಿನ ರಸವನ್ನು ತೆಗೆದು ಅದಕ್ಕೆ ಬೆಲ್ಲ ಸೇರಿಸಿಕೊಂಡು ಎರಡು ಚಮಚ ಮೂರು ಹೊತ್ತು ಸೇವಿಸುವುದರಿಂದ ಪಿತ್ತದ ಅಂಶ ಕಡಿಮೆ ಆಗುತ್ತದೆ. ಇದರಿಂದ ಕ್ರಮೇಣ ಎಸಿಡಿಟಿ ನಿವಾರಣೆಯಾಗುತ್ತೆ.
ಚಂದನವನ್ನು ತೇಯ್ದು ಅದಕ್ಕೆ ತಣ್ಣಗಿನ ಹಾಲು ಮತ್ತು ಸಕ್ಕರೆಯನ್ನು ಹಾಕಿಕೊಂಡು ವಾರದಲ್ಲಿ ಮೂರು ದಿನ ಸೇವಿಸಿದರೂ ಸಾಕು ಎಸಿಡಿಟಿ ನಿವಾರಣೆಯಾಗುತ್ತದೆ. ಇದನ್ನೂ ಹಳೇ ಕಾಲದಿಂದಲೂ ಮಾಡುತ್ತಲೇ ಇದ್ದರೂ.
ಹೊಟ್ಟೆಯಲ್ಲಿ ಎದೆಯಲ್ಲಿ ಉರಿ ಕಂಡ ತಕ್ಷಣ ತಣ್ಣನೇಯ ಹಾಲನ್ನು ಒಂದು ಲೋಟ ಸೇವಿಸಿ. ಹೊಟ್ಟೆ ಉರಿ ಹುಳಿ ತೇಗು ನಿವಾರಣೆಯಾಗುತ್ತದೆ.
ಶುಂಠಿ ರಸಕ್ಕೆ ಜೇನುತುಪ್ಪ, ಲಿಂಬು ರಸ ಸೇರಿಸಿಕೊಂಡು ಕುಡಿದರೆ, ಹೊಟ್ಟೆ ಉರಿ ಕಡಿಮೆ ಆಗುತ್ತದೆ. ಎಸಿಡಿಟಿ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.