Saturday, June 25, 2022

Latest Posts

ನೀವು ದಿನದಲ್ಲಿ ಒಮ್ಮೆಯಾದರೂ ಬರಿ ಕಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡುತ್ತೀರಾ? ಬರಿಕಾಲಿನಲ್ಲಿ ನಡೆದಾಡಿದರೆ ಇಷ್ಟೆಲ್ಲಾ ಲಾಭಗಳಿವೆ…

ನಿಮಗೆ ನೆನಪಿದೆಯೇ ನೀವು ಯಾವಾಗ ಬರಿಕಾಲಿನಲ್ಲಿ ನಡೆದಾಡಿದ್ದೀರಾ ಎಂಬುದು? ಬಹುಶಃ ಚಿಕ್ಕವರಿರುವಾಗ ಅಮ್ಮನ ಮಾತು ಕೇಳದೇ ಚಪ್ಪಲಿ ಹಾಕಿಕೊಳ್ಳದೇ ಮಣ್ಣಿನಲ್ಲಿ ಆಡುವ ಆಸೆಗೆ ಬರಿ ಕಾಲಲ್ಲಿ ಓಡಿತ್ತಿದ್ದೀರಲ್ಲ ಅದೇ ಕೊನೆ ಇರಬಹುದು. ದೊಡ್ಡವರಾಗುತ್ತಾ ಮಣ್ಣಿನಲ್ಲಿ ಓಡಾಡುವುದು ಗಲೀಜು, ನಮ್ಮ ಶ್ರೀಮಂತಿಕೆಗೆ ಅದು ಮ್ಯಾಚ್ ಆಗುವುದಿಲ್ಲ ಎನಿಸಲಾರಂಭಿಸುತ್ತದೆ. ಆದರೆ ಬರಿ ಕಾಲಿನಲ್ಲಿ ನಡೆಯುವುದರಿಂದ ಎಷ್ಟೊಂದು ಪ್ರಯೋಜನಗಳಿವೆ ಎಂಬು ಗೊತ್ತಿದೆಯೇ? ದಿನದಲ್ಲಿ ಅರ್ಧ ತಾಸಾದರು ಮನೆಯ ಹೊರಗಿನ ಮಣ್ಣಿನಲ್ಲಿ ಬರಿ ಕಾಲಿನಲ್ಲಿ ನಡೆದಾಡಿ. ಪರಿಣಾಮ ನಿಮಗೇ ಗೊತ್ತಾಗುತ್ತದೆ.

ಪಾದ, ಮಂಡಿಚಿಪ್ಪುಗಳು ಸ್ಟ್ರಾಂಗ್:
ಕಾಲಿನ ಕೆಳಭಾಗ ಗಟ್ಟಿಯಾಗಬೇಕು, ಮಂಡಿ ಚಿಪ್ಪುಗಳು ಗಟ್ಟಿ ಮುಟ್ಟಾಗಿ ಇರಬೇಕು ಎಂದಾದರೆ ಬರಿ ಕಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡಬೇಕು. ಪಾದ ಮಣ್ಣಿನಲ್ಲಿ ನಡೆದಾಡಿದರೆ ಗಟ್ಟಿ ಮುಟ್ಟಾಗುತ್ತದೆ. ಪಾದದಲ್ಲಿ ರಕ್ತ ಸಂಚಲನ ಸರಿಯಾಗುತ್ತದೆ.

ಒತ್ತಡ ನಿವಾರಣೆಯಾಗುತ್ತದೆ:
ನಿಮಗೆ ಗೊತ್ತಿದೆಯೇ? ಮನಸ್ಸಿಗೆ ತುಂಬಾ ಕಿರಿಕಿರಿ ಎನಿಸಿದಾಗ ಬರಿಕಾಲಿನಲ್ಲಿ ಹುಲ್ಲುಗಳ ಮೇಲೆ ನಡೆದಾಡಿ. ಮನಸ್ಸು ಎಷ್ಟು ಶಾಂತವಾಗುತ್ತದೆ. ದೇಹ ನಿರಾಳವೆನಿಸುತ್ತದೆ. ಮನಸ್ಸು ಶಾಂತವಾಗುತ್ತದೆ. ಒತ್ತಡ ಕಡಿಮೆ ಮಾಡುತ್ತದೆ.

ದೃಷ್ಟಿ ದೋಷ:
ಕಣ್ಣಿನ ತೊಂದರೆ ಇರುವವರು ಬೆಳಿಗ್ಗೆ ಸೂರ್ಯನ ಎಳೆಬಿಸಿಲು ಇರುವಾಗ ಬರಿಕಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡಿದರೆ ಕಣ್ಣಿನ ತೊದರೆಗಳು ನಿವಾರಣೆಯಾಗುತ್ತದೆ. ದೃಷ್ಟಿ ದೋಷ ಮಾಯವಾಗುತ್ತದೆ.

ಪಾದಗಳಿಗೂ ಬಿಡುಗಡೆ ಬೇಕು!
ಚಪ್ಪಲಿ, ಶೂ, ಸ್ಲಿಪರ್ ಎಂದು ಹುಟ್ಟಿನಿಂದಲೇ ಒಂದಲ್ಲ ಒಂದು ಚಪ್ಪಲಿಯನ್ನು ಧರಿಸಿರುವ ಪಾದಗಳಿಗೂ ಬಿಡುಗಡೆ ಬೇಕು. ಪಾದಗಳು ಬೆಳೆಯಬೇಕು. ಕೆಲವೊಂದಿಷ್ಟು ಮನೆಗಳಲ್ಲಿ ಮನೆಯ ಒಳಗೂ ಚಪ್ಪಲಿ ಧರಿಸುವ ಸಂಪ್ರದಾಯವಿರುತ್ತದೆ. ಪಾದಗಳಿಗೆ ಬಿಡುಗಡೇ ಇಲ್ಲ. ದಿನ ಒಂದಿಷ್ಟು ಸಮಯ ಬರಿ ಕಾಲಿನಲ್ಲಿ ನಡೆಯಿರಿ. ಪಾದಗಳೂ ಬಿಸಿಲು, ಮಣ್ಣು, ಮಳೆಯಲ್ಲಿ ಆಗಾಗ ಒದ್ದೆಯಾಗಲಿ.

ತೂಕ ಕಡಿಮೆ:
ತೂಕ ಕಡಿಮೆ ಮಾಡುವುದಕ್ಕೆ ಇದೊಂದು ಬೆಸ್ಟ್ ಉಪಾಯ. ದಿನವೂ ಒಂದು ತಾಸು ಬರಿಗಾಲಿನಲ್ಲಿ ನಡೆದಾಡಿ. ಚಪ್ಪಲಿ ಹಾಕಿಕೊಂಡು ನಡೆದಾಡುವುದಕ್ಕಿಂತ ಬರಿಗಾಲಿನಲ್ಲಿ ನಡೆದಾಡಿದರೆ ಬೆವರು ಹೆಚ್ಚುತ್ತದೆ. ತೂಕ ಇಳಿಮುಖವಾಗುತ್ತದೆ.

ಮೆದುಳು ಚುರುಕ್:
ಬರಿ ಕಾಲಿನಲ್ಲಿ ನಡೆದಾಡಿದರೆ ಮೆದುಳಿಗೆ ಚುರುಕು ಮುಟ್ಟುತ್ತದೆ. ಏಕೆಂದರೆ ಭೂಮಿಯ ಮೇಲೆ ಕಾಲಿಟ್ಟ ತಕ್ಷಣ ಮೆದುಳು ಸಕ್ರಿಯವಾಗುತ್ತದೆ. ಮೆದುಳು ಸರಿಯಾದ ರೀತಿಯಲ್ಲಿ ಚಲಿಸಲು ಆರಂಭಿಸುತ್ತದೆ. ಮೆದುಳು ಸಕ್ರಿಯಗೊಂಡು ಸೊಂಟದನೋವು ಕೂಡ ಇಲ್ಲದಂತೆ ಆಗುತ್ತದೆ.

-ಕಾವ್ಯಾ ಜಕ್ಕೊಳ್ಳಿ

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss