Thursday, July 7, 2022

Latest Posts

ನೀವು ನಿದ್ದೆ ಮಾಡುವಾಗ ಯಾರಾದರೂ ನಿಮ್ಮ ಕತ್ತು ಹಿಸುಕಿದಂತಾಗುತ್ತದೆಯಾ? ನಿಮಗೆ Sleep paralysis ಆಗಿರಬಹುದು.. ಅದರ ಲಕ್ಷಣಗಳೇನು? ಅದನ್ನು ಹೋಗಲಾಡಿಸುವುದು ಹೇಗೆ ನೋಡಿ..

ನಿದ್ದೆ ಮಾಡಿರುತ್ತೀರಿ. ಆದರೆ ಒಂದೇ ಕ್ಷಣ ನಿಮ್ಮ ಮೈಮೇಲೆ ಭಾರ, ಅಥವಾ ನೀವು ಏನನ್ನೋ ನೋಡುತ್ತಿದ್ದೀರಿ. ಆದರೆ ನಿಮಗೆ ಮಾತನಾಡಲು ಆಗುತ್ತಿಲ್ಲ. ಕಣ್ಣು ಬಿಟ್ಟು ನೋಡಿದರೂ ಎಲ್ಲಾ ನಾರ್ಮಲ್ ಎನಿಸಿದರೂ ನಿಮ್ಮ ದೇಹ ಅಲ್ಲಾಡುವುದಿಲ್ಲ. ಬೆಳಗ್ಗೆ ಎದ್ದು ಭಯ ಬಿದ್ದಿದ್ದೀರಾ?
ಇದು ದೆವ್ವ ಭೂತದ ಕತೆ ಅಲ್ಲ. ಇದು ಸ್ಲೀಪ್ ಪ್ಯಾರಾಲಿಸಿಸ್. ಇದು ಜೀವನದಲ್ಲಿ ಒಮ್ಮೆ ಎಲ್ಲರಿಗೂ ಆಗಿರುತ್ತದೆ. ಏನೇನು ನಡೆಯುತ್ತಿದೆ ಎಂದು ಗೊತ್ತಿದ್ದರೂ ನಿಮ್ಮ ಕೈಯಲ್ಲಿ ಏನೂ ಮಾಡಲಾಗುವುದಿಲ್ಲ.

 • ಸ್ಲೀಪ್ ಪ್ಯಾರಾಲಿಸಿಸ್ ಎಂದರೇನು?
  ಇದೊಂದು ಭಾವನೆ. ಪ್ರಜ್ಞೆಯಿದ್ದರೂ ದೇಹ ನಮ್ಮ ಅಲ್ಲಾಡುವುದಿಲ್ಲ. ಇದರಲ್ಲಿ ಎಚ್ಚರ ಹಾಗೂ ನಿದ್ದೆ ಮಧ್ಯೆಯ ಸ್ಟೇಜ್ ಇದಾಗಿದೆ. ಈ ಸಮಯದಲ್ಲಿ ಕೆಲ ಸೆಕೆಂಡುಗಳವರೆಗೆ ಕೈಕಾಲು ಆಡುವುದಿಲ್ಲ, ದೇಹ ಕೂಡ ಅಲ್ಲಾಡುವುದಿಲ್ಲ. ನಂತರ ಸರಿಹೋಗುತ್ತದೆ. ಇನ್ನೂ ಕೆಲವರಿಗೆ ಯಾರೋ ನಮ್ಮ ಕುತ್ತಿಗೆ ಹಿಸುಕುತ್ತಿದ್ದಾರೆ. ಅಥವಾ ನಮ್ಮ ಮೇಲೆ ಭಾರ ಹಾಕಿದ್ದಾರೆ ಎನ್ನುವ ಭಾವನೆ ಕೂಡ ಬರುತ್ತದೆ.
 • ಸ್ಲೀಪ್ ಪ್ಯಾರಾಲಿಸಿಸ್ ಯಾರಿಗೆ ಬರುತ್ತದೆ?
 • ನಿದ್ದೆ ಕಡಿಮೆಯಾದರೆ
 • ಸರಿಯಾದ ಸಮಯಕ್ಕೆ ನಿದ್ದೆ ಮಾಡದಿದ್ದರೆ
 • ನಿದ್ದೆ ಸಮಯ ಬದಲಾಯಿಸದರೆ
 • ಸ್ಟ್ರೆಸ್ ಅಥವಾ ಇನ್ಯಾವುದೇ ಮಾನಸಿಕ ಸಮಸ್ಯೆ ಇದ್ದರೆ
 • ನಿದ್ದೆಗೆ ಸಂಬಂಧಿಸಿದ ಬೇರೆ ಯಾವುದೇ ಸಮಸ್ಯೆ ಇದ್ದರೆ
 • ಇದನ್ನು ಹೋಗಲಾಡಿಸುವುದು ಹೇಗೆ?
 • ನಿದ್ದೆ ಸರಿಯಾಗಿ ಮಾಡಬೇಕು. ಎಂಟು ಗಂಟೆ ನಿದ್ದೆ ಮಾಡಬೇಕು.
 • ಆಂಟಿಡಿಪ್ರೆಸೆಂಟ್ಸ್ ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಿ.
 • ಮಾನಸಿಕ ಸಮಸ್ಯೆಗಳಿದ್ದರೆ ಅವುಗಳ ಬಗ್ಗೆ ನಿಗಾ ಇಡಿ.
 • ನಿದ್ದೆಯ ಬೇರೆ ಬೇರೆ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss