ನೀವು ಬಿಡದೇ ಇದ್ದರೆ ಏನಾಯಿತು, ನಾನು ನದಿ ಈಜಿಕೊಂಡು ಹೋಗುವೆ ಎಂದು ಹೋದ ವ್ಯಕ್ತಿ ಸಾವು

0
76

ವಿಜಯಪುರ: ಕೊರೋನಾ ಸೋಂಕು ಮುನ್ನೆಚ್ಚರಿಕೆಯಾಗಿ ಎಲ್ಲೆಡೆ ಲಾಕ್‌ಡೌನ್ ಮಾಡಿದ್ದರಿಂದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಕೃಷ್ಣಾ ನದಿ ಈಜಿ ದಡ ಸೇರಿ, ತನ್ನೂರಿಗೆ ತೆರಳುವ ದುಸ್ಸಾಹಸ ಮಾಡಿ ಸಾವಿಗೀಡಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಬಳಿ ಬುಧವಾರ ನಡೆದಿದೆ.
ಮೃತಪಟ್ಟವನನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹುಲ್ಲಳ್ಳಿ ಗ್ರಾಮದ ಮಲ್ಲಪ್ಪ ನಿಂಗಪ್ಪ ಬೊಮ್ಮಣಗಿ (೪೫) ಎಂದು ಗುರುತಿಸಲಾಗಿದೆ.
ಮಲ್ಲಪ್ಪ ಬೊಮ್ಮಣಗಿ ಈತನು ತನ್ನ ಪತ್ನಿ ಊರಾದ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮಕ್ಕೆ ಬಂದಿದ್ದು, ಮರಳಿ ಹುಲ್ಲಳ್ಳಿ ಗ್ರಾಮಕ್ಕೆ ಹೋಗುವ ಸಂದರ್ಭ ಜಿಲ್ಲಾ ಗಡಿ ಚೆಕ್ ಪೋಸ್ಟ್ನಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಆಗ ಕುಪಿತಗೊಂಡ ಈತ ನೀವು ಬಿಡದೇ ಇದ್ದರೆ ಏನಾಯಿತು, ನಾನು ನದಿಯನ್ನು ಈಜಿಕೊಂಡು ಹೋಗುವೆ ಎಂದು ಈಜಲು ಹೋಗಿ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸಿಪಿಐ ಆನಂದ ವಾಗ್ಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬ ಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here