Friday, August 12, 2022

Latest Posts

ನೀವು ಭಾವನಾತ್ಮಕ ಜೀವಿಯಾ? ಎಮೋಷನಲಿ ಸ್ಟ್ರಾಂಗ್ ಆಗಲು ಈ ಟಿಪ್ಸ್ ಫಾಲೋ ಮಾಡಿ..

ಕೆಲವೊಮ್ಮೆ ಯಾವ ವಿಷಯಗಳಿಗೂ ತಲೆ ಕೆಡಸಿಕೊಳ್ಳಬಾರದು. ನಮ್ಮ ಪಾಡಿಗೆ ನಾವು ಇರಬೇಕು. ಮನಸ್ಸಿಗೆ ಯಾವ ವಿಷಯವನ್ನು ಹಚ್ಚಿಕೊಳ್ಳಬಾರದು ಎನಿಸುತ್ತದೆ. ಆದರೆ ಮನುಷ್ಯ ಭಾವನಾತ್ಮ ಜೀವಿ ಎಲ್ಲದಕ್ಕೂ ನಮಗೆ ನೋವಾಗುತ್ತದೆ. ಎಮೋಷನಲಿ ಸ್ಟ್ರಾಂಗ್ ಆಗುವುದು ಹೇಗೆ? ಎಮೋಷನಲಿ ಸ್ಟ್ರಾಂಗ್ ಇರುವ ವ್ಯಕ್ತಿಗಳು ಹೇಗೆ ಯೋಚಿಸುತ್ತಾರೆ?

  • ತಮ್ಮ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ: ತಮಗೆ ಯಾವುದರಿಂದ ನೋವಾಗುತ್ತದೆ. ಯಾವ ವಿಷಯಗಳಿಂದ ಮನಸಿಗೆ ಕಿರಿಕಿರಿಯಾಗುತ್ತದೆ? ಎಲ್ಲವನ್ನೂ ಅವರು ತಿಳಿದಿರುತ್ತಾರೆ. ಅವರ ವೀಕ್‌ನೆಸ್ ಸ್ಟ್ರೆಂಥ್ ಎಲ್ಲವೂ ಅವರಿಗೆ ತಿಳಿದಿರುತ್ತದೆ.
  • ಭಾವನೆಗಳನ್ನು ಒಪ್ಪಿಕೊಳ್ಳುತ್ತಾರೆ: ತಮಗೆ ಯಾರಾದರೂ ಇಷ್ಟ ಆಗುತ್ತಾರೆ. ಅದರಿಂದ ನೋವಾಗಿದೆ. ಸರಿ. ಇದನ್ನು ಮೊದಲು ಒಪ್ಪಬೇಕು. ನನ್ನ ಭಾವನೆಗಳೇನು? ಇವುಗಳು ನನ್ನಲ್ಲಿ ಹುಟ್ಟಿರುವುದು ನಿಜ ಎನ್ನುವುದನ್ನು ಒಪ್ಪಿ.
  • ತಪ್ಪಿಗೆ ಕ್ಷಮೆ ಕೇಳುತ್ತಾರೆ: ನೀವು ಮಾತನಾಡಿದ ಯಾವುದೋ ಮಾತಿನಿಂದ ಇನ್ನೊಬ್ಬರಿಗೆ ನೋವಾಗಿದೆ. ಆದರೆ ಆ ಮಾತು ಮಾಮುಲಿ ಎನ್ನುವುದು ನಿಮ್ಮ ಅಭಿಪ್ರಾಯ. ಆದರೂ ಒಮ್ಮೆ ಕ್ಷಮೆ ಕೇಳುವುದು. ಕ್ಷಮಿಸಿದರೆ ಸರಿ. ಕ್ಷಮಿಸದಿದ್ದರೆ ನಿಮ್ಮ ಪ್ರಯತ್ನ ನೀವು ಮಾಡಿದ ತೃಪ್ತಿ ನಿಮಗೆ ಗಿಲ್ಟ್ ಕಾಡಲು ಬಿಡುವುದಿಲ್ಲ.
  • ಕ್ಷಮಿಸಿ ಮುನ್ನಡೆಯುತ್ತಾರೆ: ಒಬ್ಬ ವ್ಯಕ್ತಿಯನ್ನು ಕ್ಷಮಿಸದೇ ಅವರು ಮಾಡಿದ್ದನ್ನೇ ನೆನೆಸುತ್ತಿದ್ದರೆ, ನಿಮಗೆ ಕಷ್ಟ ಆಗುತ್ತದೆ. ನೀವು ಕುಗ್ಗುತ್ತೀರಿ. ಬೇರೆಯವರನ್ನು ಕ್ಷಮಿಸಿ ಮುನ್ನಡೆದಾಗ ಮಾತ್ರ ನಿಮಗೆ ಜೀವನ ಪ್ರೀತಿ ಸಿಗುತ್ತದೆ.
  • ಬೌಂಡರಿಗಳಿವೆ: ಇವರಿಗೆ ಇವರದ್ದೇ ಆದ ಬೌಂಡರಿಗಳಿವೆ. ಅವರ ಬೌಂಡರಿ ಅವರು ದಾಟುವುದಿಲ್ಲ. ಯಾರನ್ನೂ ಅದರೊಳಗೆ ಬಿಡುವುದಿಲ್ಲ. ಜಾಸ್ತಿ ಜನದ ಜೊತೆ ಭಾವನಾತ್ಮಕ ಸಂಬಂಧ ಹೆಚ್ಚಿದಷ್ಟು ಎಲ್ಲವೂ ಹೆಚ್ಚುತ್ತದೆ.
  • ಸರಿಯಾಗಿ ಮಾತನಾಡುತ್ತಾರೆ: ಮಾತನಾಡುವಾಗ ಇವರು ಎಫೆಕ್ಟೀವ್ ಆಗಿ ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುತ್ತಾರೆ. ಹಾಗೂ ಮಾತಿನಲ್ಲಿ ಸ್ಪಷ್ಟತೆ ಇರುತ್ತದೆ. ಇದರಿಂದ ಯಾವುದೇ ಕನ್ಫ್ಯೂಷನ್ ಆಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss