Saturday, June 25, 2022

Latest Posts

ನೀವು ಯಾವತ್ತು ಈ ಟೇಸ್ಟಿ ರೈಸ್ ಬಾತ್ ಮಾಡಿರೋದಕ್ಕೆ ಸಾಧ್ಯವೇ ಇಲ್ಲ: ಹೀಗೆ ಮಾಡಿ ಈ ಈಸಿ ರಸಿಪಿ

ಮಕ್ಕಳು ಡ್ರೈ ಫ್ರೂಟ್ಸ್ ತಿನ್ನಲು ಇಷ್ಟಪಡುವುದಿಲ್ಲ ಎಂದಾದರೆ ಈ ರೀತಿ ರೈಸ್ ಬಾತ್ ಮಾಡಿ ತಿನ್ನಿಸಿ. ಮಾಡುವುದಕ್ಕೂ ಈಸಿ. ಮಕ್ಕಳು ಕೂಡ ಇದನ್ನು ತಿನ್ನಲು ಬಹಳ ಇಷ್ಟಪಡುತ್ತಾರೆ. ಹೇಗೆ ಮಾಡುವುದು ನೋಡಿ..

ಬೇಕಾಗುವ ಸಾಮಗ್ರಿ:

2 ಕಪ್ ಅಕ್ಕಿ,
10 ಬಾದಾಮಿ,
10 ಗೋಡಂಬಿ,
10 ಒಣದ್ರಾಕ್ಷಿ ,
2 ಚಮಚ ತುಪ್ಪ,
ದಾಲ್ಚಿನ್ನಿ ಎಲೆ,
ಕಾಳುಮೆಣಸು,
ಚಕ್ಕೆ,
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

  • ಬಾಣಲೆಗೆ ತುಪ್ಪ ಹಾಕಿ ತುಪ್ಪ ಕರಗುತಿದ್ದಂತೆ ದಾಲ್ಚಿನ್ನಿ, ಕಾಳು ಮೆಣಸು, ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ ಕೆಂಬಣ್ಣ ಬರುವವರೆಗೂ ಹುರಿಯಿರಿ.
  •  ಬಳಿಕ ಇದಕ್ಕೆ ಅಕ್ಕಿ ಸೇರಿಸಿ ಹುರಿಯಿರಿ. ನಂತರ ಇದಕ್ಕೆ ಉಪ್ಪು, ನೀರು ಸೇರಿಸಿ ಉರಿಯನ್ನು ಚಿಕ್ಕದಾಗಿಸಿ ಬಾಣಲೆಗೆ ಮುಚ್ಚಿ.
  • ಹಬೆಯಲ್ಲಿ ಅನ್ನ ಉದುರು ಉದುರಾಗುವವರೆಗೂ ಬೇಯಿಸಿ. ಸೌತೆಕಾಯಿ ಸಲಾಡ್ ನೊಂದಿಗೆ ಸೇವಿಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss