ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET-UG 2020 ರ ಪರೀಕ್ಷೆ ಪ್ರವೇಶ ಪತ್ರಗಳ ಡೌನ್ಲೋಡ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ 13 ರಂದು ನೀಟ್-ಯುಜಿ 2020 ಅನ್ನು ನಡೆಸಲಿದ್ದು, ಎನ್ಟಿಎ ಈಗಾಗಲೇ ಅಭ್ಯರ್ಥಿಗಳಿಗೆ ನೀಡಲಾಗಿರುವ ಪರೀಕ್ಷಾ ಕೇಂದ್ರ ನಗರದ ಬಗ್ಗೆ ತಿಳಿಸಿದೆ ಮತ್ತು ಪ್ರವೇಶ ಪತ್ರವನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.
ನೀಟ್ ಪ್ರವೇಶ ಪತ್ರ 2020 ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ಅದನ್ನು ಅಧಿಕೃತ ವೆಬ್ಸೈಟ್ ntaneet.nic.in ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ.
ಕೊರೊನಾವೈರಸ್ ದೃಷ್ಟಿಯಿಂದ ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು ಮತ್ತು ಸೂಕ್ತ ಕ್ರಮಗಳನ್ನು ಪ್ರವೇಶ ಪತ್ರದಲ್ಲಿ ನಮೂದಿಸಲಾಗಿದೆ.
ಸೆಪ್ಟೆಂಬರ್ 13, 2020 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನೀಟ್ ಪರೀಕ್ಷೆ ನಡೆಸಲಾಗುವುದು. ಆರಂಭದಲ್ಲಿ, ಮೇ 3 ರಂದು ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಕೊರೊನಾವೈರಸ್ ಲಾಕ್ಡೌನ್ ಕಾರಣದಿಂದ ಜುಲೈ 26ಕ್ಕೆ ಮುಂದೂಡಲಾಗಿತ್ತು. ಆದರೆ ಮತ್ತೆ ಪರೀಕ್ಷೆಯನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಲಾಗಿದೆ.