ನುಗ್ಗಿಕಾಯಿಯನ್ನು ತುಂಬಾ ಜನ ಇಷ್ಟಪಡುವುದಿಲ್ಲ. ನುಗ್ಗಿಕಾಯಿ ಎಂದರೆ ಮುಖ ಹಿಂಡುತ್ತಾರೆ. ಆದರೆ ನುಗ್ಗಿಕಾಯಿಯ ಪ್ರತಿ ಭಾಗವು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಇದರ ಪ್ರತಿ ಭಾಗವು ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ. ಯಾವ ಯಾವ ಕಾಯಿಲೆಗೆ ನುಗ್ಗಿ ಉಪಯೋಗಿ ಎಂಬುದನ್ನು ಇಲ್ಲಿ ನೋಡೋಣ. ನಿಮಗಾಗಿಯೇ ಈ ಮಾಹಿತಿ..
- ಮಲಬದ್ಧತೆ ಸಮಸ್ಯೆ ಇರುವವರು ಇದರ ಎಲೆಗಳನ್ನು ನೀರಿನಲ್ಲಿ ಬೀಸಿಕೊಂಡು ಅರ್ಧ ಕಪ್ ಅದರ ರಸವನ್ನು ತೆಗೆದು ಅದಕ್ಕೆ ಅರ್ಧ ಕಪ್ ಹಾಲನ್ನು ಹಾಕಿಕೊಂಡು ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
- ಎರಡು ಚಮಚ ಎಳ್ಳೆಣ್ಣೆಗೆ ನುಗ್ಗಿ ಸೊಪ್ಪಿನ ರಸವನ್ನು ಎರಡು ಚಮಚ ಸೇರಿಸಿಕೊಂಡು ಅದನ್ನು ಗಾಯಗಳಿಗೆ ಹಚ್ಚಿದರೆ ಬೇಗ ಗಾಯ ಕಡಿಮೆ ಆಗುತ್ತದೆ. ಮತ್ತು ನೆಗಡಿ ಆಗಾದ ಇದರೆ ರಸವನ್ನು ಮೂಗಿಗೆ ಬಿಟ್ಟುಕೊಂಡರೆ ನೆಗಡಿ ಕಡಿಮೆ ಆಗುತ್ತದೆ.
- ದಿನ ಬಿಟ್ಟು ದಿನ ಬರುವ ಜ್ವರಕ್ಕೆ ನುಗ್ಗಿ ಬೇರು ಒಳ್ಳೆಯ ಔಷಧಿ. ಒಂದು ಚಮಚ ಸಾಸಿವೆಯೊಂದಿಗೆ ನುಗ್ಗಿ ಬೇರನ್ನು ಜಜ್ಜಿ ಇವೆರಡನ್ನು ನೀರಿಗೆ ಹಾಕಿ ಕುಧಿಸಿ ನಿತ್ಯ ಸೇವಿಸಿದರೆ ಆಗಾಗ ಬರುವ ಜ್ವರ ಕಡಿಮೆ ಆಗುತ್ತದೆ.
- ನುಗ್ಗಿ ಎಲೆಯ ರಸಕ್ಕೆ ನಿಂಬೆ ರಸ, ಜೇನು ತುಪ್ಪ, ಎಳನೀರು ಬೆರಸಿ ಕುಡಿದರೆ ಆಮಶಂಕೆ, ಭೇದಿ ಶ್ರೀಘ್ರ ಕಡಿಮೆ ಆಗುತ್ತದೆ.
- ನಾಯಿ ಕಚ್ಚಿದಾಗ ತಕ್ಷಣ ನುಗ್ಗಿ ಸೊಪ್ಪಿನ ಎಲೆಗಳನ್ನು ಅರಿಶಿಣ ಮತ್ತು ಬೆಳ್ಳುಳ್ಳಿಯ ಜೊತೆ ಅರೆದು ನಾಯಿ ಕಚ್ಚಿದ ಜಾಗಕ್ಕೆ ಹಚ್ಚಿದರೆ ನಂಜು ಏರುವುದಿಲ್ಲ.
- ಬೂದುಗುಂಬಳ ರಸದೊಂದಿಗೆ ನುಗ್ಗಿ ಎಲೆಯ ರಸವನ್ನು ಬೆರೆಸಿ ಕುಡಿಯುವುದರಿಂದ ಗರ್ಭಿಣಿಯರ ಕಾಲುಗಳಲ್ಲಿ ತುಂಬುವ ನೀರು ಇಳಿಯುತ್ತದೆ.