Friday, July 1, 2022

Latest Posts

ನುಗ್ಗಿ ಸೊಪ್ಪಿನ ಚೆಟ್ನಿ ಗೊತ್ತಿದ್ಯಾ? ಅನ್ನಕ್ಕೂ ಸೈ, ದೋಸೆಗೂ ಜೈ… ಈಸಿ ರೆಸಿಪಿ

ನುಗ್ಗಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನುಗ್ಗಿಸೊಪ್ಪಿನ ರೊಟ್ಟಿ, ಸಾಂಬಾರ್, ಪಲ್ಯ ಹೀಗೇ ನಾನಾ ರೀತಿಯ ಅಡುಗೆ ಮಾಡುತ್ತಾರೆ. ಆದರೆ ತುಂಬಾ ಜನಕ್ಕೆ ಚಟ್ನಿ ಹೇಗೆ ಮಾಡುವುದು ಗೊತ್ತಿಲ್ಲ. ಬಹಳ ಸಿಂಪಲ್ ಆಗಿ, ಬೇಗ ಹೇಗೆ ಮಾಡುವುದು ಇಲ್ಲಿದೆ ನೋಡಿ..

ಬೇಕಾಗುವ ಸಾಮಗ್ರಿ:

ನುಗ್ಗಿ ಸೊಪ್ಪು
ಕಾಳು ಮೆಣಸು
ಕಾಯಿ ತುರಿ
ಎಳ್ಳು
ಉಪ್ಪು
ಎಣ್ಣೆ
ಹುಣಸೆ ಹಣ್ಣು
ಹಸಿ ಮೆಣಸು

ಮಾಡುವ ವಿಧಾನ:

ಮೊದಲಿಗೆ ಎಣ್ಣೆಯಲ್ಲಿ ನುಗ್ಗಿಸೊಪ್ಪು, ಹಸಿಮೆಣಸು, ಎಳ್ಳು, ಕಾಳುಮೆಣಸನ್ನು ಚೆನ್ನಾಗಿ ಹುರಿದುಕೊಳ್ಳಿ.
ನಂತರ ಹುರಿದುಕೊಂಡಿರುವುದಕ್ಕೆ ಒಂದು ಕಪ್ ಕಾಯಿತುರಿ, ಹುಣಸೆಹಣ್ಣು, ಉಪ್ಪು ಹಾಕಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಬೇಕಿದ್ದಲ್ಲಿ ಸಾಸಿವೆಯ ಒಗ್ಗರಣೆ ಮಾಡಿಕೊಂಡರೆ ಸುಗ್ಗಿ ಸೊಪ್ಪಿನ ಚಟ್ನಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss