ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬಿಳಿ ರಕ್ತ ಕಣಗಳು ಕಡಿಮೆ ಇರುವವರು ವಾರಕ್ಕೊಮ್ಮೆ ಇದನ್ನು ಸೇವಿಸಿದರೆ ರಕ್ತ ಕಣಗಳ ವೃದ್ಧಿಯಾಗುತ್ತದೆ. ನುಗ್ಗೆ ಸೊಪ್ಪು ಸ್ವಲ್ಪ ಕಹಿ. ಅದರಿಂದಾಗಿಯೇ ತುಂಬಾ ಜನ ಅದನ್ನು ಇಷ್ಟಪಡುವುದಿಲ್ಲ. ಆದರೆ ಕಹಿ ಅನ್ನೋದನ್ನ ಪಕ್ಕಕ್ಕಿಟ್ಟರೆ ಇದು ತುಂಬಾನೇ ಆರೋಗ್ಯಕರ. ಕಹಿ ಹೋಗಿಸಿ ಪಲ್ಯ ಮಾಡಿಕೊಂಡು ತಿನ್ನೋದು ಹೇಗೆ ನೋಡಿ..
ಬೇಕಾಗಿರುವ ಸಾಮಾಗ್ರಿಗಳು
- ನುಗ್ಗೆ ಸೊಪ್ಪು
- ಈರುಳ್ಳಿ
- ಟೊಮ್ಯಾಟೊ
- ಹಸಿಮೆಣಸು
- ಶೇಂಗಾ
ಮಾಡುವ ವಿಧಾನ - ಮೊದಲು ಎಣ್ಣೆ ಹಾಕಿ ನುಗ್ಗೆಸೊಪ್ಪನ್ನು ಚೆನ್ನಾಗಿ ಬಾಡಿಸಿ
- ನಂತರ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಹಸಿಮೆಣಸು, ಈರುಳ್ಳಿ ಹಾಕಿ.
- ಇದು ಬೆಂದ ನಂತರ ಟೊಮ್ಯಾಟೊ ಹಾಕಿ.
- ಅದೂ ಬೆಂದ ನಂತರ ಆ ಮಿಶ್ರಣಕ್ಕೆ ಸೊಪ್ಪನ್ನು ಹಾಕಿ ಬಾಡಿಸಿ.
- ಎಲ್ಲ ಬೆಂದ ನಂತರ ಶೇಂಗಾ ಪುಡಿ ಮಾಡಿಕೊಂಡು ಅದನ್ನು ಹಾಕಿ ಐದು ನಿಮಿಷ ಬೇಯಿಸಿದರೆ ಕಹಿಯಿಲ್ಲದ ನುಗ್ಗೆಸೊಪ್ಪಿನ ಪಲ್ಯ ರೆಡಿ.