Sunday, August 14, 2022

Latest Posts

ನುಗ್ಗೆ ಸೊಪ್ಪಿನ ಪಲ್ಯ ತಿಂದಿದ್ದೀರಾ? ಮತ್ತೆ ಮತ್ತೆ ತಿನ್ನಬೇಕೆನಿಸುವ ಆರೋಗ್ಯಕರ ನುಗ್ಗೆ ಸೊಪ್ಪಿನ ಪಲ್ಯ ಮಾಡುವುದು ಇಷ್ಟು ಸುಲಭವಾ ?

ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.‌ ಇದು ಸಾಮಾನ್ಯವಾಗಿ‌ ಎಲ್ಲ ಸೊಪ್ಪಿನ ರೀತಿ ಸಿಗುವುದಿಲ್ಲ.‌ ರೇರ್ ಆಗಿ ಸಿಗುವ ಈ ಸೊಪ್ಪು ಸ್ವಲ್ಪ ಕಹಿಯಾಗಿರುತ್ತದೆ. ಆದರೆ ಆರೋಗ್ಯಕ್ಕೆ‌ ಸಿಹಿ.‌ ಇದರ ಕಹಿ ತೆಗೆದು ಪಲ್ಯ ಮಾಡುವುದು ತುಂಬಾನೆ ಸುಲಭ.‌ ಕೆಲವೇ ಕೆಲವು ಸಾಮಾಗ್ರಿಗಳನ್ನು ಬಳಸಿ ಹೇಗೆ ಇದರ ಪಲ್ಯ ಮಾಡುವುದು ನೋಡಿ..
ಬೇಕಾಗುವ ಸಾಮಾಗ್ರಿಗಳು

  • ಎಣ್ಣೆ
  • ಸಾಸಿವೆ
  • ಉದ್ದಿನಬೇಳೆ
  • ಉಪ್ಪು
  • ಶೇಂಗಾ
  • ಕೆಂಪುಮೆಣಸು
  • ಬೆಳ್ಳುಳ್ಳಿ
    ಮಾಡುವ ವಿಧಾನ
  • ಮೊದಲು ಸ್ವಲ್ಪ‌ ಎಣ್ಣೆ ಹಾಕಿ ಸೊಪ್ಪನ್ನು ಹುರಿದುಕೊಳ್ಳಿ.‌
  • ಮೇಲೆ ಸ್ವಲ್ಪ ನೀರು ಹಾಕುತ್ತಾ ಹಾಕುತ್ತಾ ಅದನ್ನು ಬೇಯಿಸಿ
  • ಅದು ಮುಕ್ಕಾಲು ಭಾಗ ಬೆಂದ ಮೇಲೆ‌ ಅದಕ್ಕೆ ಸ್ವಲ್ಪ ಉಪ್ಪು ಹಾಕಿ
  • ನಂತರ ಇನ್ನೊಂದು ಪಾತ್ರೆಯಲ್ಲಿ ಕೆಂಪುಮೆಣಸು,ಹುರಿದುಕೊಳ್ಳಿ
  • ಈ ಮಿಶ್ರಣಕ್ಕೆ ಬೆಳ್ಳುಳ್ಳಿ ಸೇರಿಸಿ ರುಬ್ಬಿ
  • ಮಿಶ್ರಣ ತರಿ ತರಿಯಾಗಿದ್ದರೆ ರುಚಿ ಹೆಚ್ಚಾಗಿರುತ್ತದೆ.‌
  • ಸೊಪ್ಪು ಸಂಪೂರ್ಣ ಬೆಂದ ಮೇಲೆ ಈ ಮಿಶ್ರಣವನ್ನು ಸೊಪ್ಪಿಗೆ ಹಾಕಿ ಮಿಕ್ಸ್ ಮಾಡಿ.‌
  • ನಂತರ ಒಂದೆರಡು ನಿಮಿಷ ಅದನ್ನು ಬಾಡಿಸಿ  ಈಗ ಕಹಿ ಇಲ್ಲದ ನುಗ್ಗೆ ಸೊಪ್ಪಿನ‌ ಪಲ್ಯ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss